ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸ ಬೇಕಿದ್ದ ಪಾತ್ರಕ್ಕೆ ಫಹ್ಹದ್ ಫಾಸಿಲ್ ಬಣ್ಣ ಹಚ್ಚಲಿದ್ದಾರಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಪವನ್ ಕುಮಾರ್ ನಿರ್ದೇಶಸಲಿರುವ ದ್ವಿತ್ವ ಚಿತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಅವರನ್ನು ಆಯ್ಕೆ ಮಾಡಿ, ಒಪ್ಪಿಸಲಾಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಜೋಡಿಯಾಗಿ ತ್ರಿಶಾ ಅವರು ಪರದೆಯನ್ನು ಹಂಚಿಕೊಳ್ಳಲಿದ್ದರು. ಚಿತ್ರತಂಡವು ಪುನೀತ್ ರಾಜಕುಮಾರ್ ಅವರ ಮುಖದ ಭಾಗಗಳು ಚೂರು ಚೂರಾದಂತೆ ಕಾಣುವ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತ್ತು.

ಆದರೆ ಚಿತ್ರೀಕರಣಕ್ಕೂ ಮುನ್ನವೇ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿದ್ದು, ದ್ವಿತ್ವ ಚಿತ್ರತಂಡವು ಮುಂದೇನು ಮಾಡಲಿದೆ? ಎಂಬ ಕುತೂಹಲವು ಎಲ್ಲರನ್ನೂ ಕಾಡಿತ್ತು. ವೇದಿಕೆವೊಂದರಲ್ಲಿ ತ್ರಿಷಾ ಅವರು ‘ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸಲು ನಾನು ಆಯ್ಕೆಯಾಗಿದ್ದೆ. ಅವರೊಂದಿಗೆ ನಟಿಸಲು ಅವಕಾಶ ದೊರೆತಿರುವುದು ಖುಷಿ ತಂದಿತ್ತು. ಬೇರೆ ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ನಾವಿಬ್ಬರು ದ್ವಿತ್ವ ಚಿತ್ರವನ್ನು ಪ್ರಾರಂಭಿಸಲು ಕೊಂಚ ತಡವಾಯಿತು. ಇದೀಗ ಪುನೀತ್ ಅವರ ಮರಣದ ಸುದ್ದಿಯು ನಾನು ದುಃಖಿಸುವಂತೆ ಮಾಡಿದೆ. ಮಿಸ್ ಯು ಪುನೀತ್ ಸರ್’ ಎಂದು ಭಾವುಕರಾಗಿ ನುಡಿದಿದ್ದರು.

ಇತ್ತೀಚಿಗಷ್ಟೇ ಫಹದ್ ಫಾಸಿಲ್ ಅವರ ಹುಟ್ಟಿದ ಹಬ್ಬವನ್ನು ಆಚರಿಸಲಾಗಿದ್ದು, ಕೆಜಿಎಫ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ ಪ್ರೊಡಕ್ಷನ್ ಹೌಸ್ ಇವರ ಹುಟ್ಟು ಹಬ್ಬದಂದು ಶುಭ ಹಾರೈಸಿದ್ದು, ‘ದ್ವಿತ್ವ ಪ್ರಾಜೆಕ್ಟ್ ನಲ್ಲಿ ಫಹದ್ ಫಾಸಿಲ್ ಅವರು ನಟಿಸಲಿದ್ದಾರೆಯೇ?’ಎಂಬ ಸಂದೇಹಕ್ಕೆ ಎಡೆ ಮಾಡಿದೆ. ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಬದಲಾಗಿ ಫಹದ್ ಫಾಸಿಲ್ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆಯೇ? ಎಂಬುದರ ಕುರಿತಾಗಿ ಚಿತ್ರದ ನಿರ್ದೇಶಕರಾದ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಅವರು ಅಥವಾ ಚಿತ್ರದ ಪ್ರೊಡಕ್ಷನ್ ಹೌಸ್ ಸ್ಪಷ್ಟನೆ ನೀಡಬೇಕಿದೆ.

ಇತ್ತೀಚಿಗೆ ಹರಡಿದ ಸುದ್ದಿಯ ಪ್ರಕಾರ ಫಹದ್ ಫಾಸಿಲ್ ಅವರು ದ್ವಿತ್ವ ಚಿತ್ರದ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪುನೀತ್ ರಾಜಕುಮಾರ್ ಅವರ ನಿಧನದ ನಂತರ ಚಿತ್ರತಂಡವು ದ್ವಿತ್ವ ಚಿತ್ರವನ್ನೇ ನಿರ್ಮಾಣ ಮಾಡಲಿದೆಯೇ? ಅಥವಾ ಹೊಸ ಚಿತ್ರ ಒಂದನ್ನು ತೆರೆಯ ಮೇಲೆ ತೆರಲಿದೆಯೇ? ಎಂಬುದರ ಕುರಿತಾಗಿ ಸ್ಪಷ್ಟನೆ ನೀಡಬೇಕಿದೆ.

ಫಹಾದ್ ಫಾಸಿಲ್ ಅವರನ್ನು ಹೊಸ ಚಿತ್ರದ ಮೂಲಕ ಪರದೆಯ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರಂತೆ. ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುವ ಹೊಸ ಚಿತ್ರದ ಮೇಲೆ ಎಲ್ಲರಿಗೂ ಹೊಸ ನಿರೀಕ್ಷೆಯಿದೆ.

Fahad fasil acting in puneet rajkumar's Dvitva movie

Leave a Comment

error: Content is protected !!