ಶಿವಣ್ಣನನ್ನು ಕಂಡರೆ ಅಪ್ಪು ಮಕ್ಕಳು ನೀಡುವ ಗೌರವ ಹೇಗಿದೆ ಗೊತ್ತಾ ಅಪ್ಪನ ಹಾಗೆ ಮಕ್ಕಳ ವ್ಯಕ್ತಿತ್ವ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಕಲಾವಿದ ಹಾಗೂ ವ್ಯಕ್ತಿತ್ವದಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ತಾವು ಬದುಕಿದ್ದಷ್ಟು ಕಾಲ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟಿದ್ದರು ಕೂಡ ಅದರ ಕುರಿತಂತೆ ಯಾರಿಗೂ ಕೂಡ ತಿಳಿಯದಂತೆ ಮಾಡಿದ್ದರು. ಇದಕ್ಕಾಗಿಯೇ ಪುನೀತ್ ರಾಜಕುಮಾರ್ ಅವರು ಇಂದು ಎಲ್ಲರಿಗೂ ಕೂಡ ಇಷ್ಟವಾಗುತ್ತಾರೆ ಹಾಗೂ ಅವರನ್ನು ದೇವರ ಜಾಗದಲ್ಲಿ ಇಟ್ಟು ಪೂಜಿಸುತ್ತಾರೆ.

ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ತಾಯಿಯ ಕನಸಾಗಿದ್ದ ಶಕ್ತಿಧಾಮವನ್ನು ಮುನ್ನಡೆಸಿಕೊಂಡು ಇಲ್ಲಿಯವರೆಗೆ ಬಂದಿದ್ದರು. ಪುನೀತ್ ರಾಜಕುಮಾರ್ ಅವರ ನಂತರ ಶಕ್ತಿಧಾಮ ವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ಎಲ್ಲರಲ್ಲೂ ಕೂಡ ಕಾಡುತ್ತಿತ್ತು. ಈಗ ಈ ಚಿಂತೆಯನ್ನು ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅವರ ಪತ್ನಿ ಆಗಿರುವ ಗೀತಾ ಅವರು ದೂರ ಮಾಡಿದ್ದು ಅವರೇ ಈಗ ಅಪ್ಪು ಅವರ ನಂತರ ಈ ಜವಾಬ್ದಾರಿಯನ್ನು ಮುನ್ನಡೆಸುತ್ತಿದ್ದಾರೆ.

ಇನ್ನು ತಮ್ಮ ದೊಡ್ಡಪ್ಪ ಶಿವಣ್ಣನನ್ನು ಕಂಡರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳಾಗಿರುವ ವಂದಿತ ಹಾಗೂ ದೃತಿ ಯಾವ ರೀತಿ ಮರ್ಯಾದೆ ಹಾಗೂ ಗೌರವಗಳನ್ನು ನೀಡುತ್ತಾರೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿ ನಿಂತಿದೆ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ ಈ ವಿಡಿಯೋ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ದರ್ಶನದ ಸಂದರ್ಭದಲ್ಲಿ.

ಅಪ್ಪನನ್ನು ಕಳೆದುಕೊಂಡಿರುವ ದುಃಖ ಇಬ್ಬರು ಹೆಣ್ಣು ಮಕ್ಕಳನ್ನು ಕಾಡುತ್ತಿದ್ದರು ಕೂಡ ತಮ್ಮ ದೊಡ್ಡಪ್ಪ ಶಿವಣ್ಣ ಹಾಗೂ ದೊಡ್ಡಮ್ಮ ಗೀತಾ ಅವರು ಬಂದಾಗ ಕೂಡಲೇ ಅವರಿಗೆ ಗೌರವ ಸೂಚಿಸಿದ್ದು ಕ್ಯಾಮೆರಾ ಕಣ್ಣಿಗೆ ಕಂಡು ಬಂದಿದೆ. ಅಂತಹ ದುಃಖದ ಸಂದರ್ಭದಲ್ಲಿಯೂ ಕೂಡ ತಮ್ಮ ದೊಡ್ಡಪ್ಪನಿಗೆ ಗೌರವ ಸೂಚಿಸುವ ಹೆಣ್ಣು ಮಕ್ಕಳ ಮನಸ್ಥಿತಿಗೆ ನಿಜಕ್ಕೂ ಕೂಡ ಸಲ್ಯೂಟ್ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಅಪ್ಪು ಅವರ ಕನಸನ್ನು ಪೂರೈಸುವ ಜವಾಬ್ದಾರಿ ಶಿವಣ್ಣನ ಹೆಗಲ ಮೇಲಿದ್ದು ಅದರಂತೆ ಅವರಿಗೆ ಯಶಸ್ಸು ಸಿಗಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!