Priyanka Upendra ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾದಲ್ಲಿ ನಟನೆ ಮಾಡ್ತಾರಂತೆ ಉಪೇಂದ್ರ ಪತ್ನಿ. ಯಾವ ಸಿನಿಮಾದಲ್ಲಿ ಗೊತ್ತಾ?

Priyanka Upendra ನಮ್ಮ ಕನ್ನಡ ಚಿತ್ರರಂಗಕ್ಕೆ ಪರಭಾಷೆಗಳಿಂದ ಇದುವರೆಗೂ ಹಲವಾರು ಸಿನಿಮಾ ನಟಿಯರು ಬಂದು ನಟಿಸಿ ಇಲ್ಲೇ ನೆಲೆಸಿದವರು ಕೂಡ ಇದ್ದಾರೆ. ಅವರಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ ನಟನೆಯ h2o ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುವ ಇವರು ನಂತರ ಕ್ರೇಜಿಸ್ಟಾರ್ ನಟನೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ಗ್ಲಾಮರಸ್(Glamorous) ನಟಿಯಾಗಿ ಎಲ್ಲಾ ಕಡೆ ಪರಿಚಿತರಾಗುತ್ತಾರೆ. ತಮ್ಮ ಕಾಲದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ.

ಬೆಂಗಾಳದ ಮೂಲದ ವಾಗಿರುವ ಪ್ರಿಯಾಂಕ ಉಪೇಂದ್ರ ಅವರು ಮೊದಲಿಗೆ ಮಿಸ್ ಬೆಂಗಾಲಿ ಕಿರೀಟವನ್ನು(Crown) ಮುಡಿಗೇರಿಸಿಕೊಂಡ ನಂತರ ಚಿತ್ರರಂಗದ ಅವಕಾಶಗಳತ್ತ ಮುಖ ಮಾಡುತ್ತಾರೆ. ನಂತರ ಕನ್ನಡ ಚಿತ್ರರಂಗ ಕಂಡಂತಹ ಮಾಸ್ಟರ್ ಪೀಸ್ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಈಗ ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಮದುವೆಯಾಗಿ ಇಷ್ಟು ವರ್ಷಗಳಾಗಿದ್ದರೂ ಕೂಡ ಪ್ರಿಯಾಂಕ ಉಪೇಂದ್ರ ಅವರು ಇನ್ನೂ ಕೂಡ ಚಾಲ್ತಿಯಲ್ಲಿರುವ ನಟಿಯರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಪ್ರಿಯಾಂಕ ಉಪೇಂದ್ರ ಅವರು ದೇವಕಿ ಸೆಕೆಂಡ್ ಹಾಫ್ ಮಿಸ್ ನಂದಿನಿ 1980 ಮಮ್ಮಿ ಪ್ರಿಯಾಂಕ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅದರಲ್ಲಿ ವಿಶೇಷವಾಗಿ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿರುವುದು ಹೆಚ್ಚಾಗಿದೆ. ಪ್ರಿಯಾಂಕ ಉಪೇಂದ್ರ ನಟಿಸಿರುವ 1980 ಸಿನಿಮಾ ಕಾರಣಾಂತರಗಳಿಂದ ಲಾಕ್ಡೌನ್ ಸಂದರ್ಭದಲ್ಲಿ ಓಟಿಟಿನಲ್ಲಿ(OTT) ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಇದರ ಬಿಡುಗಡೆಯ ವಿಷಯವಾಗಿ ಕಿಚ್ಚ ಸುದೀಪ್ ಅವರು ಪ್ರಿಯಾಂಕ ಉಪೇಂದ್ರ ಅವರಿಗೆ ಸಾತ್ ನೀಡಿದರು.

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಈಗಾಗಲೇ ಮುಕುಂದ ಮುರಾರಿ ಸಿನಿಮಾ ಮೂಡಿ ಬಂದಿದ್ದು ಸದ್ಯಕ್ಕೆ ಕಬ್ಜಾ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್ ಅನ್ನು ನೋಡಲು ಪ್ರತಿಯೊಬ್ಬರು ಕೂಡ ಕಾತರರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಸಿನಿಮಾವನ್ನು ನೋಡಲು ನನಗೆ ತುಂಬಾ ಇಷ್ಟ ಎಂಬುದಾಗಿ ಹೇಳುತ್ತಾ ಪ್ರಿಯಾಂಕ ಉಪೇಂದ್ರ ಅವರು ನಾನು ಕಿಚ್ಚ ಸುದೀಪ್ ಅವರ ನಟನೆ ಅಭಿಮಾನಿ ಎಂಬುದಾಗಿ ಹೇಳುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿ ನಾನು ಚಾನ್ಸ್ ಅನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹೇಳಿಕೆಯಂತೆ ಮುಂದಿನ ದಿನಗಳಲ್ಲಿ ಇಬ್ಬರ ಕಾಂಬಿನೇಷನ್(Combination) ನಲ್ಲಿ ಸಿನಿಮಾ ಮೂಡಿ ಬಂದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Leave a Comment

error: Content is protected !!