Prithvi Shah: ಕನ್ನಡದ ಈ ಖ್ಯಾತ ನಟನನ್ನು ಬಾಸ್ ಎಂದು ಕರೆದ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ! ಯಾರದು ಗೊತ್ತಾ ಬಾಸ್?

Kannada Actor ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ(Kannada Film Industry) ಜಾಗತಿಕ ಮಟ್ಟದಲ್ಲಿ ಹೆಸರನ್ನು ಪಡೆಯಲು ಪ್ರಾರಂಭಿಸಿದ ಮೇಲೆ ಭಾರತೀಯ ಕ್ರಿಕೆಟ್ ಹಾಗೂ ಚಿತ್ರರಂಗದಲ್ಲಿರುವ ಸೆಲೆಬ್ರಿಟಿಗಳು ಕೂಡ ಕನ್ನಡದ ನಟರ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಲು ಪ್ರಾರಂಭಿಸಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ನಾವು ಮಾತನಾಡಲು ಹೊರಟಿರುವುದು ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗರೊಬ್ಬರ ಕುರಿತಂತೆ.

ಹೌದು ಅಂಡರ್ 19 ತಂಡದ ನಾಯಕನಾಗಿ ವಿಜಯ ಸಾಧಿಸಿದ ನಂತರ ಭಾರತೀಯ ಪುರುಷರ ತಂಡಕ್ಕೆ ಆಯ್ಕೆ ಆಗಿ ಹಲವಾರು ದಾಖಲೆಗಳನ್ನು ಅತ್ಯಂತ ಚಿಕ್ಕವಯಸ್ಸಿನಲ್ಲಿ ಪೃಥ್ವಿ ಶಾ(Prithvi Shaw) ಅವರು ಮಾಡಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಕೂಡ ಸಂಪಾದಿಸಿದ್ದಾರೆ.

ಆದರೆ ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರನ್ನು ಭೇಟಿ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಸಂಪಾದಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಹಲವಾರು ಸ್ನೇಹಿತರಿದ್ದಾರೆ.

ಈಗ ಅವರ ಶಾಲೆಗೆ ಪೃಥ್ವಿ ಶಾ(Prithvi Shaw) ಅವರು ಕೂಡ ಸೇರಿದ್ದು ಇಬ್ಬರು ಇತ್ತೀಚಿಗೆ ಅಷ್ಟೇ, ಫೋಟೋಗೆ ಪೋಸ್ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರ ಫೋಟೋವನ್ನು ಪೋಸ್ಟ್ ಮಾಡಿರುವ ಪೃಥ್ವಿ ಶಾ ಕಿಚ್ಚ ಸುದೀಪ್(Kiccha Sudeep Boss) ರವರನ್ನು ಬಾಸ್ ಎಂಬುದಾಗಿ ಕರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟಿಗನೊಬ್ಬ ನಮ್ಮ ಕನ್ನಡ ಚಿತ್ರರಂಗದ ನಟನನ್ನು ಬಾಸ್ ಎಂಬುದಾಗಿ ಕರೆಯುತ್ತಿರುವುದು ನಿಜಕ್ಕೂ ಕೂಡ ನಾವೆಲ್ಲರೂ ಹೆಮ್ಮೆ ಪಡಬೇಕಾಗಿರುವ ವಿಚಾರ.

Leave a Comment

error: Content is protected !!