Actress Prema ಎರಡನೇ ಮದುವೆಗೆ ಅಪ್ಪಣೆ ಪಡೆಯಲು ಕೊರಗಜ್ಜನ ಸನ್ನಿಧಿಗೆ ಹೋದ ನಟಿ ಪ್ರೇಮ ನಂತರ ಏನಾಗಿದೆ ಗೊತ್ತಾ?

Actress Prema 90ರ ದಶಕದಲ್ಲಿ ಎಲ್ಲರ ಬಳಿ ನಿಮ್ಮ ನೆಚ್ಚಿನ ನಟಿ ಯಾರು ಎಂಬುದಾಗಿ ಕೇಳಿದಾಗ ಪ್ರತಿಯೊಬ್ಬರು ನೀಡುತ್ತಿದ್ದ ಒಂದೇ ಒಂದು ಉತ್ತರ ಎಂದರೆ ಅದು ನಟಿ ಪ್ರೇಮ ಅವರ ಹೆಸರು. ಅಷ್ಟರಮಟ್ಟಿಗೆ 90ರ ದಶಕದಲ್ಲಿ(Decades) ಕನ್ನಡ ಚಿತ್ರರಂಗವನ್ನು ನಟಿ ಪ್ರೇಮ ಅವರು ಆವರಿಸಿಕೊಂಡಿದ್ದರು. ಉಪೇಂದ್ರ ಹಾಗೂ ಓಂ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ತಮ್ಮ ಗುರುತನ್ನು ದೊಡ್ಡ ಮಟ್ಟಿಗೆ ಪ್ರೇಮ ಅವರು ಮೂಡಿಬರುವಂತೆ ಮಾಡುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಪ್ರೇಮ ತಮ್ಮ ವಿವಾಹ ವಿಚ್ಛೇದನದ ಕಾರಣಕ್ಕಾಗಿ ಸುದ್ದಿ ಆಗಿದ್ದರು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಟಿ ಪ್ರೇಮ ಅವರು ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗಗಳಲ್ಲಿ ಕೂಡ ಟಾಪ್ ನಟರ ಜೊತೆಗೆ ಬೆಸ್ಟ್(best) ಸಿನಿಮಾಗಳಲ್ಲಿ ನಟಿಸಿ ತನ್ನ ಸಾಮರ್ಥ್ಯವನ್ನು 90ರ ದಶಕದಲ್ಲಿ ಸಾಬೀತುಪಡಿಸಿದ್ದರು. ಆದರೆ ಬಹುತೇಕ ನಟಿಯರಂತೆ ಪ್ರೇಮ ಅವರು ಕೂಡ ಮದುವೆಯಾದ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾಗಿದ್ದರು. ಶಿಶಿರ ಎನ್ನುವ ಸಿನಿಮಾ ಅವರ ಕೊನೆಯ ಸಿನಿಮಾ ಆಗಿತ್ತು. ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡ ಅವರನ್ನು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿಯುವಂತೆ ಮಾಡಿತ್ತು.

actor prema Koragajja Bless

ನಿಮಗೆಲ್ಲರಿಗೂ ತಿಳಿದಿರಬಹುದು ನಟಿ ಪ್ರೇಮ ಅವರು ಉಪೇಂದ್ರ ನಟನೆಯ ಉಪೇಂದ್ರ ಮತ್ತೆ ಹುಟ್ಟಿ ಬಾ ಎನ್ನುವ ಸಿನಿಮಾದಲ್ಲಿ ಮರುಪಾಧಾರ್ಪಣೆ ಮಾಡುತ್ತಾರೆ ಆದರೂ ಕೂಡ ಅದು ಅಷ್ಟೊಂದು ಚೆನ್ನಾಗಿ ಸದ್ದು ಮಾಡಲಿಲ್ಲ. ಅದಾದ ನಂತರವೂ ಕೂಡ ಅಷ್ಟೊಂದು ಹೆಚ್ಚಾಗಿ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲು ಪ್ರೇಮಾ ಅವರು ಹೋಗಲಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ ಮತ್ತೊಂದು ವಿಚಾರವೇನೆಂದರೆ ಅದು ಅವರ ಮೊದಲನೇ ವಿವಾಹದ ವಿಚ್ಛೇದನ. 2006ರಲ್ಲಿ ಜೀವನ್ ಅಪ್ಪಚಿ ಎನ್ನುವವರ ಜೊತೆಗೆ ಅವರು ಮದುವೆಯಾಗಿದ್ದರು ನಂತರ ಇಬ್ಬರ ನಡುವೆ ಮೂಡಿಬಂದ ವೈಮನಸ್ಸಿನ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ನೀಡಿದ್ದರು. ಸಾಕಷ್ಟು ವರ್ಷಗಳಿಂದ ಒಬ್ಬಂಟಿಯಾಗಿದ್ದ ಪ್ರೇಮ ಈಗ ಎರಡನೇ ಮದುವೆಯ(Second Marriage) ಮನಸ್ಸನ್ನು ತೋರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇತ್ತೀಚಿಗಷ್ಟೇ(Recently) ನಟಿ ಪ್ರೇಮ ಅವರು ತಮ್ಮ ಕುಟುಂಬದ ಜೊತೆಗೆ ಕಾಪು ಕೊರಗಜ್ಜನ ಸನ್ನಿಧಿಗೆ ಹೋಗಿದ್ದ ಸಂದರ್ಭದಲ್ಲಿ ಎರಡನೆಯ ಮದುವೆಯ ಅನುಮತಿಯನ್ನು ಕೊರಗಜ್ಜನ ಬಳಿ ಕೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಹುಡುಗನನ್ನು ನೋಡಿಟ್ಟಿದ್ದು ಕೇವಲ ಅನುಮತಿಗಾಗಿ ಕೊರಗಜ್ಜನ ಸನ್ನಿಧಿಗೆ ಹೋಗಿದ್ದಾರೆ ಎಂಬುದಾಗಿ ಈ ಸುದ್ದಿಗಳ ಪ್ರಕಾರ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ನಟಿ ಪ್ರೇಮ ಅವರು ಆ ಹುಡುಗನ ಜೊತೆಗೆ ಮದುವೆ ಆಗುವ ಮೂಲಕ ತಮ್ಮ ಜೀವನದ ಎರಡನೆಯ ಇನ್ನಿಂಗ್ಸ್ ಅನ್ನು ಪ್ರಾರಂಭಿಸಬಹುದು ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

Leave a Comment

error: Content is protected !!