Prem daughter: ನಿಮ್ಮ ಮಗಳಿಗೆ ಹೀರೋಯಿನ್ ಆಗುವ ಯೋಗ್ಯತೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ ಏನು ಗೊತ್ತಾ

ಚಿತ್ರರಂಗಕ್ಕೆ ಕಾಲಿಡುತ್ತಿರುವ ತಮ್ಮ ಮಗಳ(prem daughter) ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನೆನಪಿರಲಿ ಪ್ರೇಮ್. ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಲವ್ಲಿ ಸ್ಟಾರ್ ಆಗಿ ಹಲವಾರು ವರ್ಷಗಳಿಂದ ತಮ್ಮ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ವರ್ಷಗಳು ಕಳೆದಿದ್ದರೂ ಇನ್ನೂ ಕೂಡ ಅವರ ಚಾರ್ಮ್ ಕಡಿಮೆ ಆಗಿಲ್ಲ.. ಎಂದು ಹೇಳಬಹುದು. ಈಗ ಅವರ ಮಗಳು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಹೌದು ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರು.. ಕನ್ನಡ ಚಿತ್ರರಂಗದ ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ನಟನೆಯ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ನಾಯಕನಟಿ ಆಗಿರುವವರ ಪೈಕಿಯಲ್ಲಿ ಅಮೃತ ಪ್ರೇಮ್ ಅವರು ಕೂಡ ಸೇರಿಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ.

Prem daughter amrutha prem
Prem daughter amrutha

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗವನ್ನು ಸೇರುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಗುರು ಶಿಷ್ಯರು ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಸೇರಿದಂತೆ, ಇನ್ನೂ ಹಲವಾರು ಸೆಲೆಬ್ರಿಟಿಗಳ ಮಕ್ಕಳು ಹಾಗೂ ಇತ್ತೀಚಿಗಷ್ಟೇ ದರ್ಶನ್ ಅವರಿಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವ ರಾಧನ. ಈಗ ಡಾಲಿ ಧನಂಜಯ್ ಅವರಿಗೆ ನೆನಪಿರಲಿ ಪ್ರೇಮ್ (prem daughter) ಮಗಳಾಗಿರುವ ಅಮೃತ ಪ್ರೇಮ್ (amrutha prem) ಅವರು ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಚಿತ್ರದ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಗಳ ಕುರಿತಂತೆ ನೆನಪಿರಲಿ ಪ್ರೇಮ್ ಅವರು, ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ನನ್ನ ಮಗಳಿಗೆ ಯೋಗ್ಯತೆ ಇದ್ದರೆ ಕನ್ನಡಿಗರು ಬೆಳೆಸಲಿ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದರ ಒಳಾರ್ಥ ಏನೆಂದರೆ ಅವಳಿಗೆ ಪ್ರತಿಭೆ ಇದ್ದರೆ ಮಾತ್ರ ಕನ್ನಡಿಗರು ಹರಸಿ ಬೆಳೆಸಿ ಎಂಬುದಾಗಿದೆ. ಇದರ ನಿಜವಾದ ಅರ್ಥವನ್ನು ಮುಂದಿನ ದಿನಗಳಲ್ಲಿ ಟಗರು ಪಲ್ಯ ಸಿನಿಮಾ ರಿಲೀಸ್ ಆದ ನಂತರ ಕಾದು ನೋಡಬೇಕಾಗಿದೆ.

Prem daughter amrutha prem entry to sandalwood

ಹಾಗೆ ಪತ್ರಿಕಾಗೋಷ್ಠಿ ಮುಗಿದ ನಂತರ ರಿಪೋರ್ಟರ್ ಒಬ್ಬರು ನಟ ಲವ್ಲಿ ಪ್ರೇಮ್ ಅವರ ಬಳಿ ಬಂದು ನೀವು ನಿಮ್ಮ ಮಗಳನ್ನೇ ಸಿನಿಮಾರಂಗಕ್ಕೆ ಕರೆತರುತ್ತಿದ್ದೀರಾ ಅಲ್ಲವೇ?! ಇದು ನೆಪ್ಪೋಟಿಸಂ ಅಲ್ಲವೇ?.. ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಪ್ರೇಮವರು ಹೌದು ನನ್ನ ಮಗಳನ್ನು ಸಿನಿಮಾ ರಂಗಕ್ಕೆ ಕರೆತರುತ್ತಿರುವುದು ನೆಪೋಟಿಸಂ .. ಹಾಗಾದರೆ ರಾಜಕುಮಾರ ಅವರ ಮಕ್ಕಳು ಪುನೀತ್ ರಾಜಕುಮಾರ್ , ಶಿವ ರಾಜಕುಮಾರ್ ಎಲ್ಲರೂ ಸಹ ನೆಪೋಟಿಸಂ ಗೆ ಸಂಬಂಧಪಟ್ಟವರು ಇಂದು ಎಷ್ಟು ದೊಡ್ಡ ಮಟ್ಟಕ್ಕೆ ಶುರು ಮಾಡಿದ್ದಾರೆ ಹಾಗೆ ನನ್ನ ಮಗಳು ಕೂಡ ಸ್ವಂತ ಟ್ಯಾಲೆಂಟ್ ನಿಂದ ಕನ್ನಡಿಗರ ಮನ ಗೆಲ್ಲುತ್ತಾಳೆ. ತಂದೆ ತಾಯಿ ಕಲಾವಿದರು ಮಾತ್ರಕ್ಕೆ ಮಕ್ಕಳಿಗೆ ಕಲೆ ಹುಟ್ಟುತ್ತಲೇ ಬರೋದಿಲ್ಲ ಕಲೆಯನ್ನು ಕೂಡ ಅವರು ಅಭ್ಯಾಸ ಮಾಡಿ ಕಲಿಯಬೇಕಾಗುತ್ತದೆ..

Prem daughter amrutha orem

ನನ್ನ ಮಗಳಿಗೆ ಕೂಡ ಅರ್ಹತೆ ಮತ್ತು ಯೋಗ್ಯತೆ ಇದ್ದರೆ ಮಾತ್ರ ಕನ್ನಡಿಗರು ಬೆಳೆಸಲಿ ಎಂದು ನಟ ಪ್ರೇಮ್ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ನಟ ಪ್ರೇಮ್ ಅವರು ತಮ್ಮ ಮಗಳನ್ನು ಚಿತ್ರಾನ್ನ ಬಗ್ಗೆ ಕರೆತಂದಿರುವುದು.. ನಿಜಕ್ಕೂ ಊಹೆಗೂ ಮೀರಿದ್ದು. ಇಷ್ಟು ಚಿಕ್ಕ ಹುಡುಗಿ ದೊಡ್ಡ ಸಿನಿಮಾದಲ್ಲಿ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಹೇಗೆ ನಟನೆ ಮಾಡಲಿದ್ದಾಳೆ ಎಂಬುದನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ..

Vishnuvardhan house: ವಿಷ್ಣುವರ್ಧನ್ ಅವರ ಮನೆ ಒಳಗಡೆ ಹೇಗಿದೆ ಗೊತ್ತಾ ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಅರಮನೆ

Leave a Comment

error: Content is protected !!