ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಪ್ರಶಾಂತ್ ನಿಲ್ ಹುಡುಕುತ್ತಿರುವ ಹೀರೋಯಿನ್ ಯಾರು ಗೊತ್ತೇ?


ಪ್ರಭಾಸ್ ನಟನೆಯ ಸಲಾರ್ ಚಿತ್ರ ಸೆಟ್ಟೇರಿದ್ದು, ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಫಿಲಂಸ್ ಬಂಡವಾಳ ಹಾಕುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲಾಗುವುದು ಎನ್ನಲಾಗಿದೆ‌. ಸಹಜವಾಗಿಯೇ ಈಗ ಸಲಾರ್ ಸಿನಿಮಾದ ಬಗೆಗಿನ ಪ್ರತಿ ಸುದ್ದಿಯು ಕೂಡಾ ದೊಡ್ಡ ಸದ್ದಾಗುತ್ತಿದೆ‌. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕೆಜಿಎಫ್ ನಿರ್ದೇಶಕ ಹಾಗೂ ತಂತ್ರಜ್ಞರ ಕಾಂಬಿನೇಷನ್ ನಲ್ಲಿ ಸಲಾರ್ ಸಿದ್ಧವಾಗುತ್ತಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು ಕೂಡಾ ಸಹಜವಾಗಿಯೇ ಬಹಳಷ್ಟು ಇದೆ ಎನ್ನಬಹುದು. ಸಿನಿಮಾ ನಾಯಕ ಪ್ರಭಾಸ್ ಎಂಬುದು ಎಲ್ಲರಿಗೂ ಈಗಾಗಲೇ ತಿಳಿದಿದೆ. ಆದರೆ ನಾಯಕಿ ಯಾರು? ಎನ್ನುವುದು ಮಾತ್ರ ಇದುವರೆಗೂ ಕೂಡಾ ಸ್ಪಷ್ಟವಾಗಿ ಎಲ್ಲೂ ಮಾಹಿತಿ ಹೊರ ಬಂದಿರಲಿಲ್ಲ. ಕೆಲವರು ಸಲಾರ್ ಚಿತ್ರದ ನಾಯಕಿ ಕತ್ರೀನಾ , ದಿಶಾ ಪಠಾನಿ ಎಂದೆಲ್ಲ ಊಹೆ ಮಾಡುತ್ತಿದ್ದು ಇದುವರೆಗೂ ನಾಯಕಿ ಯಾರು? ಎಂಬುದು ಮಾತ್ರ ಗುಟ್ಟಾಗಿ ಇದೆ. ಹಾಗಿದ್ದರೆ ಸಲಾರ್ ಸಿನಿಮಾಕ್ಕೆ ಪ್ರಶಾಂತ್ ನೀಲ್ ಕರೆತರುವ ಆ ನಾಯಕಿ ಯಾರು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಾಹುಬಲಿ ಖ್ಯಾತಿಯ ನಟ, ಕೆಜಿಎಫ್ ಖ್ಯಾತಿಯ ತಂತ್ರಜ್ಞರ ಕಾಂಬಿನೇಷನ್‌ನಲ್ಲಿ ಸಲಾರ್ ಸಿನಿಮಾ ಮೂಡಿಬರುತ್ತಿದ್ದು, ಈ ಎರಡು ಚಿತ್ರಗಳನ್ನು ಮೀರಿಸುವಂತಹ ಪ್ರಾಜೆಕ್ಟ್ ಇದಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾಗಿ, ಈ ಚಿತ್ರದ ಉಳಿದ ಕಲಾವಿದರ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಪ್ರಭಾಸ್ ಬಿಟ್ಟರೆ ಬೇರೆ ಯಾವ ಕಲಾವಿದರು ಅಧಿಕೃತವಾಗಿ ಈ ಚಿತ್ರಕ್ಕೆ ಎಂಟ್ರಿಯಾಗಿಲ್ಲ. ಆದರೂ ನಾಯಕಿಯರು ವಿಚಾರ ಮಾತ್ರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಲಾರ್ ಚಿತ್ರದಲ್ಲಿ ಬಾಲಿವುಡ್ ನಟಿಯರು ನಾಯಕಿಯರಾಗಿ ನಟಿಸಬಹುದು ಎನ್ನುವ ಅನುಮಾನವೊಂದ ದಟ್ಟವಾಗಿದೆ‌. ಇದಕ್ಕೆ ಕಾರಣ ಕೂಡಾ ಇದೆ, ಪ್ರಭಾಸ್ ಅವರ ಪ್ರಸ್ತುತ ನಟನೆಯ ಸಿನಿಮಾಗಳಲ್ಲಿ ಬಾಲಿವುಡ್ ನಟಿಯರೇ ಹೀರೋಯಿನ್ ಗಳಾಗಿರುವುದು‌. ಒಂದು ಸಿನಿಮಾದಲ್ಲಿ ಪೂಜಾ ಹೆಗ್ಡೆ, ಇನ್ನೊಂದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಮತ್ತೊಂದರಲ್ಲೂ ಕೂಡಾ ಬಾಲಿವುಡ್ ನಟಿಯ ಹೆಸರೇ ಸದ್ದು ಮಾಡುತ್ತಿರುವುದರಿಂದ ಸಹಜವಾಗಿಯೇ ಸಲಾರ್ ನಲ್ಲಿ ಕೂಡಾ ಬಾಲಿವುಡ್ ನಟಿಯರೇ ಇರಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.

ಇನ್ನು ಸಲಾರ್ ಸಿನಿಮಾಕ್ಕೆ ಕತ್ರಿನಾ ಕೈಫ್ ಅಥವಾ ದಿಶಾ ಪಟಾನಿ ನಾಯಕಿಯರಾಗುವರು ಎನ್ನುವುದು ಸುದ್ದಿಯಾಗಿತ್ತು. ಅಲ್ಲದೇ ಈ ಸಿನಿಮಾದ ತಂಡ ಕೂಡಾ ಈ ನಟಿಯರನ್ನು ಸಂಪರ್ಕ ಮಾಡಿದ್ದು ಬಹುತೇಕ ಈ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಬಹುದು ಎಂದು ಕೂಡಾ ಹೇಳಲಾಗುತ್ತಿದೆ. ಆದರೆ ಈ ಸುದ್ದಿಗಳ ನಡುವೆಯೇ ಈಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಸಲಾರ್ ಸಿನಿಮಾಕ್ಕೆ ಈ ಇಬ್ಬರೂ ಕೂಡಾ ನಾಯಕಿರಾಗುವುದು ಅ ನು ಮಾನ ಎನ್ನಲಾಗುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಸ್ಟಾರ್ ನಟಿಯರ ಬದಲಾಗಿ ಹೊಸ ನಟಿ ಅಥವಾ ಮಾಡೆಲ್ ಗೆ ಈ ಸಿನಿಮಾದ ಅವಕಾಶವನ್ನು ನೀಡಬೇಕು ಎಂದು ಆಲೋಚಿಸಿದ್ದು ಅದಕ್ಕಾಗಿ ಈಗ ಸ್ಟಾರ್ ನಟಿಯರ ಬದಲಾಗಿ ಹೊಸ ಮುಖ ಪ್ರಭಾಸ್ ಜೊತೆ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ‌. ಅಲ್ಲದೇ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಹೊಸ ನಟಿಯನ್ನು ಕರೆತರುವುದು ಉತ್ತಮ ಎಂಬುದು ಕೂಡಾ ನಿರ್ದೇಶಕರ ಅಭಿಪ್ರಾಯವಾಗಿದೆ‌ ಎನ್ನಲಾಗಿದೆ.

ಇನ್ನೂ ಸಲಾರ್ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಇಬ್ಬರು ಸ್ಟಾರ್ ನಟರ ಹೆಸರು ಮುಂಚೂಣಿಯಲ್ಲಿದೆ. ತಮಿಳು ನಟ ವಿಜಯ್ ಸೇತುಪತಿ ಹಾಗೂ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ. ಈ ಇಬ್ಬರಲ್ಲಿ ಒಬ್ಬರು ಸಲಾರ್ ಟಿಕೆಟ್ ಪಡೆಯಬಹುದು ಎನ್ನಲಾಗಿದೆ. ಪ್ರಶಾಂತ್ ನೀಲ್ ನಿರ್ದೇಶನ, ಭುವನ್ ಗೌಡ ಅವರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಸಲಾರ್ ಚಿತ್ರದಲ್ಲಿದೆ. ಇನ್ನು ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಪೂರ್ವ ತಯಾರಿ ನಡೆಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಫೆಬ್ರವರಿಯಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Leave A Reply

Your email address will not be published.