Prabhas: ಮತ್ತೆ ತಪ್ಪು ಮಾಡೋಕೆ ಹೊರಟಿದ್ದಾರ ರೆಬೆಲ್ ಸ್ಟಾರ್ ಪ್ರಭಾಸ್?

Prabhas ರೆಬೆಲ್ ಸ್ಟಾರ್ ಪ್ರಭಾಸ್(Rebel Star Prabhas) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ಹಾಗೂ ಜನಪ್ರಿಯ ನಾಯಕ ನಟರ ಸಾಲಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಹುಬಲಿ(Bahubali) ಸಿನಿಮಾ ಅವರಿಗೆ ಒಂದು ದೊಡ್ಡ ಮಟ್ಟದ ಮೈಲೇಜ್ ನೀಡಿತು ಎಂದು ತಪ್ಪಾಗಲಾರದು.

ರಾಜ ಮೌಳಿ(Rajamouli) ನಿರ್ದೇಶನದ ಬಾಹುಬಲಿ ಸಿನಿಮಾ ಎನ್ನುವುದು ಇಡೀ ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ ಅವರನ್ನು ಯಾರು ಹಿಡಿಯಲಾಗದಂತಹ ಗೆಲುವಿನ ಕುದುರೆಯಾಗಿ ಮಾಡುತ್ತದೆ. ಆದರೆ ಅದಾದ ನಂತರ ನಿಮಗೆಲ್ಲರಿಗೂ ತಿಳಿದಿರಬಹುದು ಸಾಲು ಸಾಲು ಸಿನಿಮಾಗಳು ನೆಲಕಚ್ಚಿ ಮಖಾಡೆ ಮಲಗಿಕೊಂಡಿವೆ.

ಸದ್ಯಕ್ಕೆ ಇದೆ ಜೂನ್ 16ರಂದು ಅವರ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್(Adipurush) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಇಷ್ಟೊಂದು ಸೋಲುಗಳನ್ನು ಉಂಡರು ಪ್ರಭಾಸ್ ರವರು ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಹಾಗಿದ್ದರೆ ಅವರು ಮಾಡುತ್ತಿರುವ ತಪ್ಪು ಯಾವುದು ಎಂಬುದನ್ನು ತಿಳಿಸುತ್ತೇವೆ ಬನ್ನಿ.

ಹೌದು ಗೆಳೆಯರೇ, ಡಾರ್ಲಿಂಗ್ ಪ್ರಭಾಸ್ ರವರು ತಮ್ಮ ಸಿನಿಮಾದ ಬಿಡುಗಡೆ ಹತ್ತಿರವಿದ್ದರೂ ಕೂಡ ಯಾವುದೇ ಪ್ರಮೋಷನ್ ಕಾರ್ಯದಲ್ಲಿ ಭಾಗಿಯಾದಂತೆ ಕಂಡು ಬರುತ್ತಿಲ್ಲ. ಸಿನಿಮಾದ ಪ್ರಮೋಷನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಎಲ್ಲೂ ಕೂಡ ಕಂಡು ಬರುತ್ತಿಲ್ಲ ಹೀಗಾಗಿ ಇದನ್ನು ಗಣನೆಗೆ ತೆಗೆದುಕೊಂಡು ಪ್ರಮೋಷನ್ ಬಗ್ಗೆ ಹೆಚ್ಚಿನ ಧ್ಯಾನ ವಹಿಸುವುದು ಒಳ್ಳೆಯದು ಎಂದು ನಮ್ಮ ಅಭಿಪ್ರಾಯ.

Leave a Comment

error: Content is protected !!