Pooja Hegde: ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತಾ?
Pooja Hegde ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅಂತಹ ಕರಾವಳಿ ಮೂಲದ ಹಲವಾರು ನಟಿಯರಲ್ಲಿ ನಟಿ ಪೂಜಾ ಹೆಗ್ಡೆ ಕೂಡ ಒಬ್ಬರು. ಹೃತಿಕ್ ರೋಷನ್(Hritik Roshan) ನಟನೆಯ ಮೊಹೆಂಜೋದಾರೋ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುವ ಇವರು ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಸದ್ದು ಮಾಡಿದ್ದಾರೆ.
ಹೌದು ಗೆಳೆಯರೇ ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ(Pooja Hegde) ಅವರು ಅದರಲ್ಲೂ ವಿಶೇಷವಾಗಿ ಅಲ್ಲೂ ಅರ್ಜುನ್(Allu Arjun) ಅವರ ಸಿನಿಮಾಗಳಲ್ಲಿ ಯಶಸ್ವಿ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಬೇಡಿಕೆಯನ್ನು ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ನಟಿಸಿರುವಂತಹ ಹಲವಾರು ಸಿನಿಮಾಗಳು ಫ್ಲಾಪ್ ಆಗುವ ಮೂಲಕ ಅವರ ಯಶಸ್ಸಿನ ರೇಶಿಯೋ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ತಮಿಳಿನ ತಲಪತಿ ವಿಜಯ್(Thalapathy Vijay) ನಟನೆಯ ಬೀಸ್ಟ್ ಸಿನಿಮಾ ಇದುಕ್ಕೊಂದು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾದ ಎದುರು ಬಿಡುಗಡೆಯಾಗಿ ನೆಲಕಚ್ಚಿತು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದಾದ ನಂತರ ಅವರ ಸಂಭಾವನೆ ಜಾಸ್ತಿ ಹಾಗೂ ಈಗಾಗಲೇ ಹಲವಾರು ಸಿನಿಮಾಗಳು ಫ್ಲಾಪ್ ಆಗಿವೆ ಎನ್ನುವ ಕಾರಣಕ್ಕಾಗಿ ಹಲವಾರು ಅವಕಾಶಗಳು ಅವರ ಕೈ ತಪ್ಪಿದ್ದವು.
ಆದರೆ ಈಗ ಬಾಲಿವುಡ್ ನಲ್ಲಿ ಮೆಗಾಸ್ಟಾರ್ ಸಲ್ಮಾನ್ ಖಾನ್(Mega Star Salman Khan) ನಟನೆಯ ಕಿಸಿ ಕ ಭಾಯ್ ಕಿಸಿ ಕ ಜಾನ್ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇದೇ ಈದ್ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಪೂಜಾ ಹೆಗ್ಡೆ ಭರ್ಜರಿ ಮೂರರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆದಿರುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾಗಳು ಸೋತಿರಬಹುದು ಆದರೆ ಪೂಜಾ ಹೆಗ್ಡೆ(Pooja Hegde) ಅವರಿಗಿರುವಂತಹ ಮಾರುಕಟ್ಟೆ ಬೆಲೆ ಕಡಿಮೆ ಆಗಿಲ್ಲ ಎಂದು ಈ ಮೂಲಕ ಹೇಳಬಹುದಾಗಿದೆ.