Pavitra Lokesh: ಮದುವೆಯಾದ ಒಂದೇ ತಿಂಗಳ ಒಳಗೆ ಗುಡ್ ನ್ಯೂಸ್ ಕೊಟ್ಟ ನಟಿ ಪವಿತ್ರ ಲೋಕೇಶ್! ಇಷ್ಟೊಂದು ಫಾಸ್ಟಾ?

Pavithra Lokesh ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವಂತಹ ವಿಚಾರ ಏನೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಪವಿತ್ರ ಲೋಕೇಶ್(Pavitra Lokesh) ರವರು ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಆಗಿರುವಂತಹ ನರೇಶ್(Naresh) ಅವರನ್ನು ಮದುವೆಯಾಗಿರುವ ವಿಚಾರ. ಎಲ್ಲಾ ಕಡೆ ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ಇದರ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುವಂತೆ ಮಾಡಿತ್ತು.

ಇನ್ನು ಇವರಿಬ್ಬರೂ ಈಗಾಗಲೇ ಹನಿಮೂನ್ ಗೆ ಕೂಡ ದುಬೈಗೆ ಹೋಗಿ ಬಂದಿರುವ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ನಟ ನರೇಶ್(Naresh) ರವರು ಈಗಾಗಲೇ ತಮ್ಮ ಮೂರನೇ ಪತ್ನಿಯಾಗಿರುವ ರಮ್ಯಾ ರಘುಪತಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದು ಇನ್ನೂ ಕೂಡ ಇದು ಕೋರ್ಟಿನಲ್ಲಿ ಉಳಿದುಕೊಂಡಿರುವಂತಹ ವಿಚಾರವಾಗಿದ್ದು ಇನ್ನೂ ಕೂಡ ಇತ್ಯರ್ಥವಾಗಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಕಾದುನೋಡಬೇಕಾಗಿದೆ.

ಅದಕ್ಕೂ ಮುನ್ನವೇ ನಟಿ ಪವಿತ್ರ ಲೋಕೇಶ್(Pavitra Lokesh) ಹಾಗೂ ನಟ ನರೇಶ್ ಇಬ್ಬರು ಕೂಡ ಮದುವೆ ಆಗಿರುವಂತಹ ಹಾಗೂ ಅತ್ಯಂತ ನಿಕಟವಾಗಿರುವ ಸಿನಿಮಾ ಶೈಲಿಯ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು ಎಲ್ಲರೂ ಕೂಡ ಅದನ್ನು ನಿಜವೆಂದು ಭಾವಿಸಿದ್ದರು. ಅದರ ಸತ್ಯಾಂಶ ಈಗ ಹೊರಬಂದಿದ್ದು ಪವಿತ್ರ ಲೋಕೇಶ್(Pavitra Lokesh) ಅವರೇ ಆ ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಈ ರೀತಿ ಹೇಳಿದಾಗ ಖಂಡಿತವಾಗಿ ನೀವು ಕೂಡ ಅಪಾರ್ಥ ಮಾಡಿಕೊಂಡಿರುತ್ತೀರಿ ಎಂಬುದನ್ನು ನಾವು ಕೂಡ ಅಂದಾಜಿಸಬಹುದಾಗಿದೆ.

ಹೌದು ಮಿತ್ರರೇ, ನೀವು ಇಷ್ಟರವರೆಗೆ ಕಂಡಂತಹ ಎಲ್ಲಾ ದೃಶ್ಯಗಳು ಕೂಡ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವಂತಹ ಮಳ್ಳಿ ಪೆಳ್ಳಿ(Malli Pelli) ಅಂದರೆ ಮತ್ತೆ ಮದುವೆ ಎನ್ನುವ ಸಿನಿಮಾದ ದೃಶ್ಯಗಳು ಎಂಬುದಾಗಿ ತಿಳಿದು ಬಂದಿದ್ದು ಈ ಸಿನಿಮಾವನ್ನು ಕೂಡ ಸ್ವತಹ ನರೇಶ್(Naresh) ಅವರೇ ನಿರ್ಮಾಣ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರ ನಿಜ ಜೀವನದಂತೆ ಸಿನಿಮಾದಲ್ಲಿ ಕೂಡ ಈಗಾಗಲೇ ವಿವಾಹ ವಿಚ್ಛೇದಿತ ಜೋಡಿಗಳ ಮತ್ತೆ ಮದುವೆಯಾಗುವಂತಹ ಕಥೆಯನ್ನು ಹೊಂದಿರಲಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ.

Leave a Comment

error: Content is protected !!