ತೆಲುಗು ನಟನನ್ನು ಮದುವೆಯಾಗಲು ಹೊರಟಿರುವ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೀಗೆ ಹೇಳಿದ್ದೇಕೆ?


ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದ್ಭುತ ನಟಿ ಎಂದು ಕರೆಸಿಕೊಂಡಿರುವ ನಟಿ ಪವಿತ್ರಾ ಲೋಕೇಶ್. ಇಂದು ತೆಲುಗು ಹಾಗೂ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಾರಿ ಸುದ್ದಿಯಲ್ಲಿದ್ದಾರೆ. ಅವರ ವಯಕ್ತಿಕ ಜೀವನ ಹಾಗೂ ಅವರ ಸಂಸಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಗಾಸಿಪ್ ಗಳು ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ತುಂಬಾ ಹರಿದಾಡುತ್ತಿವೆ.

ಪವಿತ್ರಾ ಲೋಕೇಶ್ ಬಹು ಬೇಡಿಕೆಯ ಪೋಷಕ ನಟಿ. ಕನ್ನಡದಲ್ಲಿ ಈಗಾಗಲೇ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ನಟಿ ಪವಿತ್ರಾ ಲೋಕೇಶ್ ಅವರದ್ದು. ಈಗಲೂ ಮೊದಲಿನಂತೆಯೇ ಅತ್ಯುತ್ತಮ ನಟನೆಯ ಮೂಲಕ ಕನ್ನಡ ಹಾಗೂ ತೆಲುಗು ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ ನಟಿ ಪವಿತ್ರಾ ಲೋಕೇಶ್. ಇದೀಗ ಈ ಅಭಿನೇತ್ರಿ ತಮ್ಮ ವಯಕ್ತಿಕ ವಿಚಾರಕ್ಕೆ ಎಲ್ಲಾ ನ್ಯೂಸ್ ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ನಟಿ ಪವಿತ್ರಾ ಲೋಕೇಶ್ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ ಅವರು ಅಪ್ಪಟ ಕನ್ನಡದ ಅದ್ಭುತ ಕಲಾವಿದ ಎನಿಸಿರುವ ಸುಚೇಂದ್ರ ಪ್ರಸಾದ್ ಅವರನ್ನು 2007ರಲ್ಲಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಇಷ್ಟು ವರ್ಷ ಜೊತೆಗಿದ್ದ ಇವರಿಬ್ಬರು ಬೇರೆಯಾಗುತ್ತಿದ್ದಾರೆ ಹಾಗೂ ಪವಿತ್ರಾ ಲೋಕೇಶ್ ಟಾಲಿವುಡ್ ನ ಶ್ರೀಮಂತ ನಟ ನರೇಶ್ ಜೊತೆ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲೂ ಕಾಳ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಆದರೆ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಯಾರೂ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅಲ್ಲದೇ ಪವಿತ್ರಾ ಲೋಕೇಶ್ ಸಹೋದರ ಆದಿ ಲೋಕೇಶ್ ಕೂಡ ಈವಿಷಯವನ್ನ ತಳ್ಳಿಹಾಕಿದ್ದಾರೆ.

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮಹಾಬಲಿಪುರಂ ಗೆ ಒಟ್ಟಿಗೆ ಹೋಗಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ ಎಂಬಲ್ಲಿಂದ ಇವರಿಬ್ಬರ ಮದುವೆ ಬಗ್ಗೆ ಮಾತುಗಳು ಹರಿದಾಡುತ್ತಿವೆ. ನಡುವೆ ತನ್ನ ಪತಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ನುಟಿ ಪವಿತ್ರಾ ಲೋಕೇಶ್ ಹೇಳಿದ ಮಾತುಗಳು ವೈರಲ್ ಆಗಿವೆ. ಇದೊಂದು ಹಳೆಯ ವಿಡಿಯೋ ಆಗಿದ್ದರೂ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಹೇಗಿದ್ದಾರೆ ಎಂಬುದನ್ನು ತಿಳಿಸುತ್ತದೆ.

ಸಂದರ್ಶನವೊಂದರಲ್ಲಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಕೇಳಿದ್ದಕ್ಕೆ ಪವಿತ್ರಾ ಲೋಕೇಶ್, ಅವರು ತುಂಬಾ ಒಳ್ಳೆಯ ವ್ಯಕ್ತಿ. ನಾನು ಅವರನ್ನ ಪಡೆಯುವುದಕ್ಕೆ ಅದೃಷ್ಟ ಮಾಡಿದ್ದೆ. ಅಷ್ಟು ಒಳ್ಳೆಯವರು ಅವರು. ಸ್ವಲ್ಪ ಬಿಡುವು ಸಿಕ್ಕರೂ ಸಾಕು ನನಗಾಗಿ ಅಡುಗೆ ಮಾಡುತ್ತಾರೆ. ಮನೆಕೆಲಸ ಮಾಡುತ್ತಾರೆ. ಅವರಂತೆ ಇನ್ನೊಬ್ಬ ವ್ಯಕ್ತಿ ಇರಲು ಸಾಧ್ಯವೇ ಇಲ್ಲ ಎಂದು ಪವಿತ್ರಾ ಲೋಕೇಶ್ ಕೇಳಿಕೊಂಡಿದ್ದರು. ಆದರೆ ಈ ಬಾಂಧವ್ಯ ಈಗ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ ಪವಿತ್ರ ಲೋಕೇಶ್ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ಹಬ್ಬುತ್ತಲೇ ಇದೆ.


Leave A Reply

Your email address will not be published.