ಕೇವಲ ಸ್ನೇಹಿತರು ಮಾತ್ರ ಅಂತಿದ್ದ ಪವಿತ್ರ ಹಾಗೂ ನರೇಶ್ ಈಗ ಮಾಡಿರೋದಾದ್ರೂ ಏನು ಗೊತ್ತಾ?

Pavitra Naresh Marriage Update: 2022 ರಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರಗಳಲ್ಲಿ ತೆಲುಗು ನಟ ನರೇಶ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ಆಗಿರುವ ಪವಿತ್ರ ಲೋಕೇಶ್ ಅವರ ವಿಚಾರವೂ ಕೂಡ ಒಂದಾಗಿದೆ. ಇವರಿಬ್ಬರೂ ಕೂಡ ಮೊದಮೊದಲಿಗೆ ಅಣ್ಣ ತಂಗಿ ನಂತರ ಸ್ನೇಹಿತರ ಸಂಬಂಧವನ್ನು ಹೊಂದಿದ್ದೇವೆ ಎಂಬುದಾಗಿ ಮಾಧ್ಯಮಗಳ (Media) ಕಣ್ಣಿಗೆ ಮಣ್ಣನ್ನು ಎರಚುವಂತಹ ಕೆಲಸವನ್ನು ಮಾಡಿದ್ದರು. ಇದೇ ಕಾರಣಕ್ಕಾಗಿ ನರೇಶ್ ಅವರ ಮೂರನೇ ಪತ್ನಿ ಆಗಿರುವ ರಮ್ಯಾ ರಘುಪತಿ ಅವರು ಮಾಧ್ಯಮಗಳಲ್ಲಿ ಇವರಿಬ್ಬರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

Pavitra Naresh Marriage

ಯಾವಾಗ ಇವರಿಬ್ಬರೂ ಮೈಸೂರಿನಲ್ಲಿ ಜೊತೆಯಾಗಿ ಸಿಕ್ಕಿಬಿದ್ದರೋ ಆಗಂತೂ ರಮ್ಯಾ ರಘುಪತಿ ಇಬ್ಬರಿಗೂ ಕೂಡ ಚಪ್ಪಲಿ ಸೇವೆಯನ್ನು ಮಾಡಿದ್ದರು. ಪೋಲಿಸ್ ( Police) ಪ್ರಕರಣದಲ್ಲಿ ಕೂಡ ಈ ವಿವಾದ ಕಂಡುಬಂದಿತ್ತು. ಅದಾದ ನಂತರ ಈ ವಿಚಾರ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡದೆ ತಣ್ಣಗಾಗಿತ್ತು. ಆದರೆ ಈಗ ಇದು ಮತ್ತೆ ಪ್ರಚಾರಕ್ಕೆ ಬಂದಿದ್ದು ಈ ಬಾರಿ ನಿಜವಾದ ವಿಚಾರ ಎಕ್ಸ್ಕ್ಲೂಸಿವ್ ( Exclusive)ಆಗಿ ಹೊರ ಬಂದಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ನಡೆದಿರುವುದಾದರೂ ಏನು ಎಂಬುದನ್ನು ಸಂಪೂರ್ಣವಾಗಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

pavithra naresh

ನಟ ನರೇಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಖ್ಯಾತ ಲೆಜೆಂಡರಿ (Legendary) ನಟ ಹಾಗೂ ಇತ್ತೀಚಿಗಷ್ಟೇ ನಮ್ಮನ್ನೆಲ್ಲಾ ಅಗಲಿರುವ ಸೂಪರ್ ಸ್ಟಾರ್ (Super Star ) ಕೃಷ್ಣ ಅವರ ಎರಡನೇ ಪತ್ನಿಯ ಮಗನಾಗಿದ್ದಾರೆ. ಈಗಾಗಲೇ ಮೂರು ಮದುವೆ ಮಾಡಿಕೊಂಡಿರುವ ನರೇಶ್ ಅವರು ಈಗ ನಟಿ ಪವಿತ್ರ ಲೋಕೇಶ್ ಅವರ ಜೊತೆಗೂ ಕೂಡ ಸಂಬಂಧವನ್ನು (Relation ) ಹೊಂದಿದ್ದಾರೆ. ಇದು ಈಗ ಹೊಸ ವರ್ಷದ ಹೊಸ್ತಿಯಲ್ಲಿ ಅಧಿಕೃತವಾಗಿಯೇ (Officially ) ಹೊರ ಬಂದಿದೆ.

ಇದನೊಮ್ಮೆ ಓದಿ..ವರ್ಷ ಮುಗಿಯುವುದಕ್ಕೂ ಮುಂಚೇನೆ ಹೊಸ ದಾಖಲೆ ಕ್ರಿಯೇಟ್ ಮಾಡಿದ ಕೆಜಿಎಫ್ ಚಾಪ್ಟರ್ 2.

ಹೌದು ಮಿತ್ರರೇ ನರೇಶ್ ಅವರು ತಮ್ಮ ಟ್ವಿಟರ್ (Twitter) ಖಾತೆಯಲ್ಲಿ ಒಂದು ಪೋಸ್ಟ್ (Post) ಅನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಪವಿತ್ರ ಲೋಕೇಶ್ ಅವರಿಗೆ ಚುಂಬಿಸುತ್ತಾ ನಮ್ಮ ಪ್ರಪಂಚಕ್ಕೆ ನಿಮಗೆ ಸ್ವಾಗತ ಎಂಬುದಾಗಿ ಹೇಳಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಇವರಿಬ್ಬರೂ ಅಧಿಕೃತವಾಗಿಯೇ ಮುಂದಿನ ದಿನಗಳಲ್ಲಿ ಅತಿ ಶೀಘ್ರದಲ್ಲಿಯೇ ಮದುವೆ (Marriage) ಆಗುವುದು ಗ್ಯಾರಂಟಿ ಎಂಬುದಾಗಿ ತಿಳಿದು ಬಂದಿದೆ. ಪವಿತ್ರ ಲೋಕೇಶ್ ಅವರ ಕುರಿತಂತೆ ಸಾಂಪ್ರದಾಯಿಕ ಮಹಿಳೆ ಎಂಬ ಅಭಿಪ್ರಾಯವನ್ನು ಹೊಂದಿರುವವರಿಗೆ ಖಂಡಿತವಾಗಿ ಇದೊಂದು ಕಣ್ಣು ತರೆಸುವಂತಹ ವಿಚಾರವಾಗಿ ಮುಂದಿನ ದಿನಗಳಲ್ಲಿ ಪರಿಣಮಿಸಲಿದೆ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!