Pathaan: ಪಠಾಣ್ ಸಿನಿಮಾ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ 1 ಕೋಟಿ ಕೊಡಿ ಸರ್ ಎಂದ ಅಭಿಮಾನಿಗೆ ಶಾರುಖ್ ಖಾನ್ ನೀಡಿದ ಉತ್ತರ ಏನು? ನೀವೆ ನೋಡಿ.

Shah Rukh Khan ಬಾಲಿವುಡ್ ನ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(Shah Rukh Khan) ನಟನೆಯ ಪಠಾಣ್(Pathaan) ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವಂತೆ ಜನವರಿ 25ರಂದು ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ದಕ್ಷಿಣ ಭಾರತದ ಭಾಷೆಗಳಲ್ಲಿ ಪಠಾಣ್ ಚೆನ್ನಾಗಿ ಕಲೆಕ್ಷನ್ ಮಾಡದಿದ್ದರೂ ಕೂಡ ಒಟ್ಟಾರೆಯಾಗಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ ಎಂಬುದು ಸಾಬೀತಾಗಿದೆ.

ಅದರಲ್ಲೂ ವಿಶೇಷವಾಗಿ ಹಿಂದಿಯಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡಿರುವ ಬಾಹುಬಲಿ 2 ಚಿತ್ರದ ದಾಖಲೆಯನ್ನು ಅತಿ ಶೀಘ್ರದಲ್ಲೇ ಪಠಾಣ್ ಮುರಿಯಲು ಸಿದ್ಧವಾಗಿ ನಿಂತಿದೆ. ಇನ್ನು ಜಗತ್ತಿನಾದ್ಯಂತ ಒಟ್ಟಾರೆಯಾಗಿ ಪಠಾಣ್ ಭರ್ಜರಿ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಮಲಗಿದ್ದ ಬಾಲಿವುಡ್(Bollywood) ಚಿತ್ರರಂಗವನ್ನು ಶಾರುಖ್ ಖಾನ್ ತಮ್ಮ ಪಠಾಣ್ ಸಿನಿಮಾದ ಮೂಲಕ ಬಡಿದೆಬ್ಬಿಸಿದ್ದಾರೆ ಎಂದು ಹೇಳಬಹುದಾಗಿದೆ.

pathaan

ಇನ್ನು ಇದೇ ಸಂದರ್ಭದಲ್ಲಿ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಮಾಡಿದ್ದ ಸಂದರ್ಭದಲ್ಲಿ ಅಭಿಮಾನಿ ಒಬ್ಬರು ಕೇಳಿದ ಪ್ರಶ್ನೆಗೆ ಶಾರುಖ್ ಖಾನ್(Shah Rukh Khan) ಉತ್ತರ ನೀಡಿರುವ ಪರಿ ಎಲ್ಲರ ಮನ ಸೆಳೆದಿದೆ ಹಾಗೂ ಒಂದು ಕ್ಷಣ ಎಲ್ಲರನ್ನು ನಗು ಮುಖದಲ್ಲಿ ಇರುವಂತೆ ಮಾಡಿದೆ. ಸಾರ್ 700 ಕೋಟಿ ಕಲೆಕ್ಷನ್ ಮಾಡಿದೆಯಲ್ಲ ಅದರಲ್ಲಿ ನನಗೆ ಒಂದು ಕೋಟಿ ರೂಪಾಯಿ ನೀಡಿ ಎಂಬುದಾಗಿ ಅಭಿಮಾನಿ ಒಬ್ಬರು ಕಿಂಗ್ ಖಾನ್(King Khan) ಗೆ ಪ್ರಶ್ನೆ ಕೇಳಿದ್ದರು.

ಅದಕ್ಕೆ ಹಾಸ್ಯಾಸ್ಪದ ರೀತಿಯಲ್ಲಿ ಶಾರುಖ್ ಖಾನ್ ಅದರಲ್ಲಿ ರೇಟ್ ಆಫ್ ರಿಟರ್ನ್ ಅತ್ಯಂತ ಕಡಿಮೆ ನೀವು ಹೀಗೆ ಇನ್ನಷ್ಟು ಬಾರಿ ಸಿನಿಮಾ ವನ್ನು ನೋಡಿ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸೋಣ ಎಂಬುದಾಗಿ ನಗುತ್ತಲೆ ರಿಪ್ಲೈ ಮಾಡುತ್ತಾರೆ. ತಮಾಷೆ ಬದಿಗಿರಲಿ ಪಠಾಣ್ ಸಿನಿಮಾ ಶಾರುಖ್ ಖಾನ್ ಅವರ ಅತ್ಯಂತ ದೊಡ್ಡ ಕಂಬ್ಯಾಕ್ ಎಂದರು ಕೂಡ ತಪ್ಪಾಗಲಾರದು. ಸೋತು ಸುಣ್ಣವಾಗಿದ್ದ ಶಾರುಖ್ ಖಾನ್ ಅವರನ್ನು ಪಠಾಣ್(Pathaan) ಸಿನಿಮಾದ ಗೆಲುವು ಬಾಲಿವುಡ್ ಚಿತ್ರರಂಗದ ಟಾಪ್ ನಾಯಕ ನಟನನ್ನಾಗಿ ಮಾಡಿದೆ ಎನ್ನಬಹುದು.

Leave a Comment

error: Content is protected !!