ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ .ಮುದ್ದಿನ ಮಗಳು ಎಷ್ಟು ಚಂದ ಇದ್ದಾಳೆ ನೋಡಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಸಿನಿಮಾಗಳ ಮೂಲಕ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಉದಯೋನ್ಮುಖ ನಟ. ಕೆಲವು ವರ್ಷಗಳ ಹಿಂದಷ್ಟೇ ಪ್ರೇರಣಶಂಕರ್ ಅವರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಆಗಿದ್ದರು. ಇಬ್ಬರೂ ಕೂಡ ಬಾಲ್ಯದಿಂದಲೂ ಗೆಳೆಯ ಹಾಗೂ ಗೆಳತಿಯ ರಾಗಿದ್ದರಂತೆ.

ಇವರಿಬ್ಬರ ಮದುವೆ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮದುವೆಯಾಗಿತ್ತು. ಇದರ ನಡುವೆ ಚಿರು ಸರ್ಜಾ ರವರ ಅಕಾಲಿಕ ಮರಣ ಎನ್ನುವುದು ಸರ್ಜಾ ಮನೆತನಕ್ಕೆ ಸಾಕಷ್ಟು ದುಃಖವನ್ನು ಉಂಟು ಮಾಡಿತು. ದುಃಖದಿಂದ ಬಳಲಿದ್ದ ಸಹಜ ಮನೆತನಕ್ಕೆ ಕೊಂಚಮಟ್ಟಿಗೆ ಚೇತರಿಕೆ ನೀಡಿದ್ದು ಚಿರು ಸರ್ಜಾ ಅವರ ಪುತ್ರ ರಾಯನ್ ರಾಜ್ ಸರ್ಜಾ.

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಸರ್ಜಾ ಅವರು ತಾವು ತಂದೆ ಆಗಲಿದ್ದೇನೆ ಎಂಬುದಾಗಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ತಮ್ಮ ಪತ್ನಿ ಆಗಿರುವ ಪ್ರೇರಣಶಂಕರ್ ಅವರ ಸೀಮಂತ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮಾಡಿದ್ದರು. ನವರಾತ್ರಿಯ ಸಂದರ್ಭದಲ್ಲಿ ಮಗುವಿನ ಜನನ ಆಗಲಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದರು.

ಈಗ ಕೊನೆಗೂ ಆ ಸಂತೋಷದ ಸುದ್ದಿಯನ್ನು ಧ್ರುವ ಸರ್ಜಾ ಅವರು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ ಎಂಬುದಾಗಿ ತಿಳಿಸಿದ್ದು ನಾರ್ಮಲ್ ಡೆಲಿವರಿಯ ಮೂಲಕ ಮಗುವನ್ನು ಪಡೆದಿದ್ದಾರೆ ಎಂಬುದನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಮೆಂಟ್ ನಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್ ಮತ್ತು ಜನಿಸಿರುವ ಹೆಣ್ಣು ಮಗುವಿಗೆ ಶುಭಾಶಯಗಳನ್ನು ಕೋರಿ ಕಾಮೆಂಟ್ ಮಾಡಿ.

Leave A Reply

Your email address will not be published.