ಕಣ್ಣು ಕಾಣದಿದ್ದರೂ ಕೂಡ ನಮ್ಮ ಅಪ್ಪುನ ವಯಸ್ಸಾದ ಅಜ್ಜಿ ನೋಡಿದ್ದು ಹೇಗೆ ಗೊತ್ತಾ. ಪವಾಡ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಆಡುತ್ತಿರುವ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಇಷ್ಟಪಡುವ ಅಭಿಮಾನಿ ಬಳಗವಿದೆ. ಯಾವುದೇ ರೀತಿಯ ಅಭಿಮಾನಿಗಳಿರಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರನ್ನೂ ಕೂಡ ಸಮಾನ ರೀತಿಯಲ್ಲಿ ಗೌರವಿಸುತ್ತಾರೆ ಹಾಗೂ ಪ್ರೀತಿಸುತ್ತಾರೆ.

ತಮ್ಮ ತಂದೆ ರಾಜಕುಮಾರ್ ಅವರಂತೆ ತಾವು ಕೂಡ ಅಭಿಮಾನಿಗಳನ್ನು ದೇವರು ಎಂಬಂತೆ ಸಂಬೋಧಿಸುತ್ತಾ ಬಂದವರು. ಅದಕ್ಕಾಗಿ ಅಣ್ಣಾವ್ರ ನಂತರ ಆ ಸ್ಥಾನವನ್ನು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನೀಡಿದ್ದಾರೆ ಎಂದರೆ ಅತಿಶೋಕ್ತಿ ಅಲ್ಲ. ಅಣ್ಣಾವ್ರ ಮಗನಾಗಿದ್ದರೂ ಕೂಡ ಯಾವತ್ತೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ರಾಜ್‌ಕುಮಾರ್ ಅವರ ಮಗ ಎನ್ನುವ ಹಮ್ಮು ಬಿಮ್ಮನ್ನು ಅನ್ನು ತೋರಿಸಿದವರಲ್ಲ.

ಎಲ್ಲಕ್ಕಿಂತ ಪ್ರಮುಖವಾಗಿ ಗೆಳೆಯರೇ ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದರ ಕುರಿತಂತೆ ಇಂದು ನಾವು ನಿಮಗೆ ಮಾತನಾಡಲು ಹೊರಟಿದ್ದೇವೆ. ವಯಸ್ಸು ನೂರಕ್ಕೆ ಸಮೀಪಿಸುತ್ತಿರುವ ಅಜ್ಜಿ ಒಬ್ಬರನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಉತ್ತರ ಕರ್ನಾಟಕದ ಭಾಗಕ್ಕೆ ಹೋಗಿದ್ದ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ದೃಷ್ಟಿ ಕುಂಠಿತಗೊಂಡಿದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಗುರುತಿಸಿದ ಬಗೇ ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ.

ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಖದ ಹತ್ತಿರ ಬಂದು ಅಜ್ಜಿ ತಡಕಾಡಿ ನಂತರ ಪುನೀತ್ ರಾಜಕುಮಾರಾ ಎಂಬುದಾಗಿ ಕೇಳಿ ಗುರುತಿಸಿದ ಕ್ಷಣ ನಿಜಕ್ಕೂ ಕೂಡ ಕ್ಯಾಮೆರಾ ಕಣ್ಣಿನಲ್ಲಿ ಪ್ರತಿಯೊಬ್ಬರೂ ಕೂಡ ಭಾವಕರಾಗುವಂತೆ ಮೂಡಿ ಬಂದಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ವಿಡಿಯೋ ನೋಡಿದ ಬಳಿಕ ನಿಮಗೇನು ಅನಿಸಿತು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Old blind woman identifies appu puneet rajkumar

Leave a Comment

error: Content is protected !!