ಮದುವೆ ಆಗಿಲ್ಲ ಆದರೂ ನಾನು ಪ್ರೆಗ್ನೆಂಟ್ ಎಂದು ಘೋಷಿಸಿಕೊಂಡ ನಟಿ ನಿತ್ಯಾ ಮೆನನ್. ಬಾಯಿ ಮೇಲೆ ಬೆರಳು ಇಟ್ಟುಕೊಂಡ ಅಭಿಮಾನಿಗಳು

ಕೆಲವು ನಟಿಯರು ಕೇವಲ ನಟನೆಗೆ ಮಾತ್ರ ಹೆಸರುವಾಸಿ ಆಗಿರುತ್ತಾರೆ, ಇನ್ನು ಕೆಲವು ನಟಿಯರು ಸೌಂದರ್ಯದ ವಿಚಾರವಾಗಿ ಎಲ್ಲರ ನೆಚ್ಚಿನ ಆಯ್ಕೆ ಆಗಿರುತ್ತಾರೆ ಆದರೆ ನಾವು ಇಂದು ಮಾತನಾಡಲು ಹೊರಟಿರುವ ನಟಿ ನಟನೆ ಹಾಗೂ ಸೌಂದರ್ಯ ಎರಡರಲ್ಲೂ ಕೂಡ ಮಹಾ ಪ್ರವೀಣೆ ಹಾಗೂ ಮಹಾಸೌಂದರ್ಯವತಿಯೆಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡಲು ಹೊರಟಿರುವುದು ಬಹು ಭಾಷೆ ತಾರೆ ಆಗಿರುವ ಕನ್ನಡ ಮೂಲದ ನಟಿಯಾಗಿರುವ ನಿತ್ಯ ಮೆನನ್ ಅವರ ಬಗ್ಗೆ.

ನಟಿ ನಿತ್ಯ ಮೆನನ್ ಅವರು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದರು ಕೂಡ ಅವರು ಹುಟ್ಟಿ ಬೆಳೆದು ಇರುವುದು ಕೂಡ ನಮ್ಮ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ. ಆದರೆ ನಟಿ ನಿತ್ಯ ಮೆನನ್ ಅವರು ಆರಂಭಿಕ ದಿನಗಳಲ್ಲಿ ಸಿನಿಮಾರಂಗದಲ್ಲಿ ದೊಡ್ಡಮಟ್ಟಕ್ಕೆ ಜನಪ್ರಿಯತೆ ಅಥವಾ ಗುರುತನ್ನು ಪಡೆದುಕೊಂಡಿರುವುದು ಮಾತ್ರ ಮಲಯಾಳಂ ಚಿತ್ರರಂಗದ ಸಿನಿಮಾಗಳ ಮೂಲಕ ಎಂದರೆ ತಪ್ಪಾಗಲಾರದು.

Nitya menon actress

ಇನ್ನು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಟಿ ನಿತ್ಯ ಮೆನನ್ ಅವರು ತಾನು ಪ್ರಗ್ನೆಂಟ್ ಎನ್ನುವುದಾಗಿ ಫೋಟೋ ಕೂಡ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ. ಎಲ್ಲರೂ ತಿಳಿದಿರುವ ಮಟ್ಟಿಗೆ ಇನ್ನೂ ಕೂಡ ನಿತ್ಯಾನನ್ ಅವರು ಮದುವೆ ಆಗಿಲ್ಲ ಹೀಗಾಗಿ ಏನಿದು ಪ್ರೆಗ್ನೆಂಟ್ ಪ್ರಚಾರ ಎಂಬುದಾಗಿ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದರ ಹಿಂದಿನ ನಿಜವಾದ ವಿಚಾರ ಬೇರೆನೇ ಇದೆ ಅದು ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ನಟಿ ನಿತ್ಯ ಮೆನನ್ ಹಾಗೂ ಪಾರ್ವತಿ ಸೇರಿದಂತೆ ಹಲವಾರು ನಟಿಯರು ನಟಿಸುತ್ತಿರುವ ವಂಡರ್ ವುಮೆನ್ ಎನ್ನುವ ಮಲಯಾಳಂ ಸಿನಿಮಾದ ಪ್ರಮೋಷನ್ ಭಾಗವಾಗಿ ಈ ರೀತಿಯ ಪ್ರೆಗ್ನೆಂಟ್ ರೀತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಪೋಸ್ಟ್ ಮಾಡಿದ ನಂತರ ಯಾವುದಕ್ಕೂ ಇರಲಿ ಎಂಬಂತೆ ನಟಿ ನಿತ್ಯಾನಂದ ಅವರು ನಾನು ನಿಜವಾಗಲೂ ಪ್ರಗ್ನೆಂಟ್ ಅಲ್ಲ ಎಂಬುದಾಗಿ ಬರೆದುಕೊಂಡು ನೆಟ್ಟಿಗರಲ್ಲಿ ಕೊನೆಯ ಭಾಗಕ್ಕೆ ಬರುತ್ತಿದ್ದಂತೆ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಈ ರೀತಿಯ ಪ್ರಮೋಷನ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Nitya menon actress

Leave a Comment

error: Content is protected !!