ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಖರೀದಿಸಿರುವ ಹೊಸ ಮನೆಯ ಬೆಲೆ ಎಷ್ಟು ಗೊತ್ತಾ?

ನಮ್ಮ ಕನ್ನಡ ಚಿತ್ರರಂಗದಲ್ಲಿ ಜೊತೆಯಾಗಿ ನಟಿಸುವ ಮೂಲಕ ಪ್ರೀತಿಸಿ ಮದುವೆಯಾಗಿರುವ ಹಲವಾರು ಜೋಡಿಗಳು ಇವೆ. ಅವರಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಜೋಡಿಗಳೆಂದರೆ ಅದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ. ಇಬ್ಬರೂ ಕೂಡ ತಮ್ಮ ಸಿನಿಮಾ ಜೀವನದ ಆರಂಭಿಕ ದಿನಗಳಲ್ಲಿಯೇ ಪ್ರೀತಿಸಿ ಯಾರಿಗೂ ತಿಳಿಯದಂತೆ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇರಿಸಿಕೊಂಡು ನಂತರ ಚಿತ್ರರಂಗದಲ್ಲಿ ಒಂದು ಹಂತಕ್ಕೆ ಯಶಸ್ಸನ್ನು ಸಾಧಿಸಿದ ಮೇಲೆ ಮದುವೆಯಾದವರು.

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ಪ್ರೀತಿ ಎನ್ನುವುದು ಹಲವಾರು ಯುವ ಜೋಡಿಗಳಿಗೆ ಮಾದರಿ ಅಥವಾ ಸ್ಪೂರ್ತಿ ಎಂದರೆ ತಪ್ಪಾಗಲಾರದು ಯಾಕೆಂದರೆ ಚಿತ್ರರಂಗದಲ್ಲಿ ಇಬ್ಬರೂ ಕೂಡ ಕಷ್ಟಪಟ್ಟು ಜೊತೆಯಾಗಿಯೇ ಯಶಸ್ಸಿನ ಮೆಟ್ಟಿಲನ್ನು ಒಂದೊಂದೇ ಹಂತವಾಗಿ ಏರಿಕೊಂಡು ಬಂದವರು. ಲವ್ ಮಾಕ್ಟೆಲ್ ಸಿನಿಮಾದ ಮೂಲಕ ನಿರ್ಮಾಪಕರಾಗಿ ಕೂಡ ಮೊದಲ ಬಾರಿಗೆ ಯಶಸ್ಸನ್ನು ಕಂಡು ಹಣವನ್ನು ಸಂಪಾದಿಸಿದರು ಎಂದರೆ ತಪ್ಪಾಗಲಾರದು.

ಇನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ದಂಪತಿಗಳು ಬೆಂಗಳೂರಿನಲ್ಲಿ ಒಂದು ಐಷಾರಾಮಿ ಮನೆಯನ್ನು ಖರೀದಿಸಿದ್ದು ಇತ್ತೀಚಿಗಷ್ಟೇ ಗ್ರಹಪ್ರವೇಶ ಪೂಜೆಯನ್ನು ಕೂಡ ನೆರವೇರಿಸಿದ್ದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಹೆಸರು ಬರುವಂತೆ ಈ ಮನೆಗೆ ಕ್ರಿಸ್ ಮಿ ನೆಸ್ಟ್ ಎನ್ನುವುದಾಗಿ ಹೆಸರನ್ನು ಇಟ್ಟಿದ್ದಾರೆ. ಇನ್ನು ಈಗ ಈ ಮನೆಯ ಬೆಲೆ ಎನ್ನುವುದು ಸಾಕಷ್ಟು ಸದ್ದನ್ನು ಮಾಡುತ್ತಿದೆ.

ಹೌದು ಮಿತ್ರರೇ ಕೃಷ್ಣ ಹಾಗೂ ಮಿಲನ ನಾಗರಾಜ್ ದಂಪತಿಗಳು ಖರೀದಿಸಿರುವ ಈ ಮನೆಯ ಬೆಲೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಆಗಿದೆ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದು ಬಂದಿದೆ. ಜೀವನದಲ್ಲಿ ಈಗತಾನೆ ಯಶಸ್ಸನ್ನು ಕಾಣುತ್ತಿರುವ ಈ ಯುವ ಜೋಡಿಗಳಿಗೆ ಇನ್ನಷ್ಟು ಯಶಸ್ಸನ್ನು ಹಾಗೂ ಗೆಲ್ಲಲು ಅವಕಾಶವನ್ನು ಆ ದೇವರು ಕರುಣಿಸಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!