ಮದುವೆಗಿಂತ ಮೊದಲೇ ಪ್ರೆಗ್ನೆಂಟ್ ಆದ ನಿತ್ಯ ಮೆನನ್ ಮತ್ತು ಮಿಲನ್ ಚಿತ್ರದ ನಾಯಕಿ

ಇತ್ತೀಚಿನ ದಿನಗಳಲ್ಲಿ ಹಲವಾರು ಸೆಲೆಬ್ರೆಟಿಗಳ ಮದುವೆ ಹಾಗೂ ಮಗುವನ್ನು ಪಡೆದಿರುವ ವಿಚಾರದ ಕುರಿತಂತೆ ಬ್ಯಾಕ್ ಟು ಬ್ಯಾಕ್ ಸುದ್ದಿಗಳು ಕೇಳಿ ಬರುತ್ತಿವೆ. ಇನ್ನು ಈಗ ಕೇಳಿ ಬರುತ್ತಿರುವುದು ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ವಿಚಾರದ ಕುರಿತಂತೆ. ಅದು ಕೂಡ ಈ ವಿಚಾರದಲ್ಲಿ ಕೇಳಿ ಬರುತ್ತಿರುವುದು ಇಬ್ಬರೂ ಕನ್ನಡ ಮೂಲದ ಸ್ಟಾರ್ ನಟಿಯರ ಕುರಿತಂತೆ.

ಸೆಲೆಬ್ರಿಟಿಗಳ ವಿಚಾರದಲ್ಲಿ ಇದೆಲ್ಲ ಕಾಮನ್ ಎನ್ನುವುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಬಹುದು ಆದರೆ ಅವೆಲ್ಲ ವೆಸ್ಟರ್ನ್ ಸಂಸ್ಕೃತಿಯ ಸಿನಿಮಾರಂಗದಲ್ಲಿ ಅಥವಾ ಬಾಲಿವುಡ್ ನಲ್ಲಿ ಆಗಿರಬಹುದು ಆದರೆ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಲ್ಲ ಎನ್ನಬಹುದು. ಆದರೆ ಈ ವಿಚಾರ ಕೇಳಿ ಬರುತ್ತಿರುವುದು ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಅದು ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ನಿತ್ಯ ಮೆನನ್ ಹಾಗೂ ಪಾರ್ವತಿ.

ಹೌದು ಗೆಳೆಯರೇ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪಾರ್ವತಿ ಹಾಗೂ ನಿತ್ಯ ಮೆನನ್ ಇಬ್ಬರೂ ಕೂಡ ಪ್ರೆಗ್ನೆಂಟ್ ಕಿಟ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಆಶ್ಚರ್ಯವನ್ನು ತರಿಸಿದ್ದಾರೆ. ಇಬ್ಬರಿಗೂ ಕೂಡ ಮದುವೆ ಆಗಿಲ್ಲ ಆದರೂ ಹೇಗೆ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ತಲೆಕೆರೆದುಕೊಳ್ಳುತ್ತಿದ್ದಾರೆ. ಆದರೆ ಸಾಕಷ್ಟು ರಿಸರ್ಚ್ ಹಾಗೂ ಹುಡುಕಾಟದ ನಂತರ ಈ ವಿಚಾರದ ನಿಜವಾದ ರಹಸ್ಯ ಏನೆಂಬುದು ಎಲ್ಲರಿಗೂ ತಿಳಿದು ಬಂದಿದೆ.

ಹೌದು ಮಿತ್ರರೇ, ನಿತ್ಯ ಮೆನನ್ ಹಾಗೂ ಪಾರ್ವತಿ ಇಬ್ಬರೂ ಕೂಡ ಮಲಯಾಳಂ ಚಿತ್ರ ಒಂದರಲ್ಲಿ ನಟಿಸುತ್ತಿದ್ದು ಆ ಚಿತ್ರದ ಪ್ರಚಾರಕ್ಕಾಗಿ ಪ್ರೆಗ್ನೆಂಟ್ ಕಿಟ್ ಫೋಟೋವನ್ನು ಇಬ್ಬರೂ ಕೂಡ ಪೋಸ್ಟ್ ಮಾಡಿರುವುದು. ಮೊದಲ ಬಾರಿಗೆ ಈ ಸುದ್ದಿಯನ್ನು ಕೇಳಿದ ನಂತರ ನಿಮಗೇನು ಅನಿಸಿತು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!