Meghana Raj: ತಮ್ಮ ಮುಂದಿನ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ನಟಿ ಮೇಘನಾ ರಾಜ್!

Meghana Raj ನಟ ಚಿರು(Chiru Sarja) ರವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಮೇಘನಾ ರಾಜ್ ಅವರು ಮದುವೆಯಾದ ಕೆಲವೇ ಸಮಯಗಳಲ್ಲಿ ತಮ್ಮ ಗಂಡನನ್ನು ಕಳೆದುಕೊಳ್ಳುತ್ತಾರೆ. ನಿಜಕ್ಕೂ ಕೂಡ ಈ ನಟಿಯ ಜೀವನದಲ್ಲಿ ಇಷ್ಟೊಂದು ಕಷ್ಟದ ಸಮಯ ಹೇಗೆ ಬರಲು ಸಾಧ್ಯ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಕಣ್ಣೀರು ಹಾಕಿದ್ದರು.

ಹೌದು ಮಿತ್ರರೇ ಗಂಡನನ್ನು ಕಳೆದುಕೊಂಡ ನಂತರ ಒಬ್ಬಂಟಿ ಯಾಗಿ ಇದ್ದ ಅವರ ಜೀವನದಲ್ಲಿ ಅವರ ಮಗ ಮತ್ತೆ ಅವರ ಜೀವನದಲ್ಲಿ ಉತ್ಸಾಹದ ಚಿಲುಮೆಯಾಗಿ ಕಾಲಿಡುತ್ತಾನೆ. ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟಿ ಮೇಘನ ರಾಜ್(Meghana Raj) ಅವರು ಕಿರುತೆರೆಯ ಮೂಲಕ ಮನೋರಂಜನೆ ಕ್ಷೇತ್ರಕ್ಕೆ ಮತ್ತೆ ಕಾಲಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿರುವ ಮೇಘನಾ ರಾಜ್ ಅಲ್ಲಿ ಕೂಡ ಬ್ರಾಂಡ್ ಪ್ರಮೋಷನ್ ಮಾಡುತ್ತಿದ್ದರು.

ಸಿನಿಮಾಗಳಿಂದ ಸಂಪೂರ್ಣವಾಗಿ ದೂರವಾಗಿದ್ದ ನಟಿ ಮೇಘನಾ ರಾಜ್(Meghana Raj) ಅವರು ಮತ್ತೆ ಈಗ ತಮ್ಮ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು ಇದು ಅವರ ಜೀವನದಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದರು ಕೂಡ ತಪ್ಪಾಗಲಾರದು. ಹೌದು ಅದೇ ಅವರು ಸಿನಿಮಾ ಗೆ ಕಂಬ್ಯಾಕ್ ಮಾಡುತ್ತಿರುವ ನಿರ್ಧಾರ. ಅದು ಕೂಡ ಸ್ನೇಹಿತರ ಜೊತೆಗೆ ಅವರು ಕಂಬ್ಯಾಕ್ ಮಾಡುತ್ತಿದ್ದಾರೆ.

ನಿರ್ದೇಶಕ ಪನ್ನಗ ಭರಣ(Pannaga Bharana) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿಯೇ ನಟಿ ಮೇಘನಾ ರಾಜ್ ಅವರು ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಇನ್ನು ಈ ಸಿನಿಮಾಗೆ ಚಿತ್ರರಂಗದ ನಾಯಕ ನಟ ಹಾಗೂ ಮೇಘನಾ ರಾಜ್ ಅವರ ಸ್ನೇಹಿತ ಆಗಿರುವ ಪ್ರಜ್ವಲ್ ದೇವರಾಜ್(Prajwal Devaraj) ಕೂಡ ಸಾಥ್ ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!