Dhanush: ಧನುಷ್ ಜತೆ ಮದುವೆ ಕುರಿತು ಕೊನೆಗೂ ಸತ್ಯ ಹೊರಹಾಕಿದ ನಟಿ ಮೀನಾ, ಹೇಳಿದ್ದೆನು ಗೊತ್ತಾ?

Actress Meena ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿನ ದಿನಗಳಲ್ಲಿ ನಟಿ ಮೀನಾ(Actress Meena) ಹಾಗೂ ತಮಿಳು ನಟ ಧನುಷ್(Actor Dhanush) ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ಧಿಗಳು ಓಡಾಡುತ್ತಿವೆ. ನಿಜಕ್ಕೂ ಕೂಡ ಕೆಲವರು ಇದನ್ನು ನಂಬಿ ಪರ ವಿರೋಧ ವಾದಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಬೇಸರವನ್ನು ಮಾಡಿಕೊಂಡು ತಮ್ಮ ನೆಚ್ಚಿನ ಕಲಾವಿದರ ಬಗ್ಗೆ ಅಸಮಾಧಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟ ಧನುಷ್ ಹಾಗೂ ರಜನಿಕಾಂತ್(Rajinikanth) ರವರ ಮಗಳಾಗಿರುವ ಐಶ್ವರ್ಯ ರಜನಿಕಾಂತ್(Aishwarya Rajinikanth) ಸಾಕಷ್ಟು ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ಕೂಡ ಇತ್ತೀಚೆಗಷ್ಟೇ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ದೂರಾಗಿದ್ದರು. ಈ ಕಡೆ ನಟಿ ಮೀನಾ ಕೂಡ ಗಂಡ ವಿದ್ಯಾ ಸಾಗರ್ ರವರನ್ನು ಅಕಾಲಿಕವಾಗಿ ಕಳೆದುಕೊಂಡು ಒಂಟಿಯಾಗಿದ್ದರು.

ಇದರ ನಡುವಲ್ಲಿಯೇ ತಮಿಳು ಚಿತ್ರರಂಗದ ವ್ಯಕ್ತಿ ಆಗಿರುವ ಬಾಯಿಲ್ವಾನ್ ರಂಗನಾಥ್ ಎನ್ನುವವರು ಧನುಷ್ ಹಾಗೂ ಮೀನಾ ಇಬ್ರೂ ಕೂಡ ಇದೇ ವರ್ಷದ ಜುಲೈ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂದು ಸಂದರ್ಶನದಲ್ಲಿ ಹೇಳುವ ಮೂಲಕ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ಧು ಮಾಡಲು ಕಾರಣವಾಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಈ ಬಗ್ಗೆ ನಟಿ ಮೀನಾ(Actress Meena) ಅವರೇ ಪ್ರತಿಕ್ರಿಯೆ ನೀಡುತ್ತಾ ನನ್ನ ಗಂಡನನ್ನು ಕಳೆದುಕೊಂಡು ನಾನು ದುಃಖದಲ್ಲಿರುವ ಈ ಸಂದರ್ಭದಲ್ಲಿ ಈ ರೀತಿ ಸುದ್ದಿ ಹೇಗೆ ಹುಟ್ಟಿಕೊಂಡಿತೋ ನನಗೆ ತಿಳಿದಿಲ್ಲ. ಇದು ಸಂಪೂರ್ಣವಾಗಿ ಶುದ್ಧ ಸುಳ್ಳು. ನಾನು ಕೇವಲ ಒಳ್ಳೆಯ ಸಿನಿಮಾಗಳನ್ನು ಮಾಡಿಕೊಂಡು ನನ್ನ ಮಗಳ ಜೀವನವನ್ನು ಚೆನ್ನಾಗಿ ನೋಡಿಕೊಳ್ಳುವುದೇ ಈಗ ನನ್ನ ಕಣ್ಣ ಮುಂದೆ ಇರುವ ಗುರಿಯಂಬುದಾಗಿ ನಟಿ ಮೀನಾ ಸಾಗರ್ ಅವರು ಹೇಳಿದ್ದಾರೆ.

Leave a Comment

error: Content is protected !!