Leo: ಚಿತ್ರೀಕರಣ ಮುಗಿಯೋದಕ್ಕೂ ಮುನ್ನವೇ ತಲಪತಿ ವಿಜಯ್ ನಟನೆಯ ಗಳಿಸಿದ್ದೆಷ್ಟು ಗೊತ್ತಾ? ನೂರಾರು ಕೋಟಿ. ಕೆಜಿಎಫ್ ದಾಖಲೆ ಖತಂ.
Thalapathy Vijay ಕೆಜಿಎಫ್ ಚಾಪ್ಟರ್ 2(KGF chapter 2) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಯಾವೆಲ್ಲ ದಾಖಲೆಯನ್ನು ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೇ. ಕಳೆದ ವರ್ಷದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿರುವುದು ಪ್ರತಿಯೊಬ್ಬ ಕನ್ನಡಿಗರು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ.
ಕೆಜಿಎಫ್ ಚಾಪ್ಟರ್ 2 ಚಿತ್ರ ಟೋಟಲ್ ವಿಶ್ವಾದ್ಯಂತ ಕಲೆಕ್ಷನ್ ಮಾಡಿರುವ ಬಾಕ್ಸ್ ಆಫೀಸ್ ರಿಪೋರ್ಟ್ ಈಗಾಗಲೇ ನಿಮಗೆಲ್ಲರಿಗೂ ತಿಳಿದಿದ್ದು ಒಟ್ಟಾರೆಯಾಗಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ ಇನ್ನೂ ಚಿತ್ರಿಕರಣ ಹಂತದಲ್ಲಿ ಇರುವ ಲೋಕೇಶ್ ಕನಗರಾಜ್(Lokesh Kanagaraj) ಹಾಗು ತಲಪತಿ ವಿಜಯ್(Thalapathy Vijay) ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಲಿಯೋ ಸಿನಿಮಾ ಈಗಾಗಲೇ ಮಾಡಿರುವಂತಹ ಬಿಸಿನೆಸ್ ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ.

ಹೌದು ಗೆಳೆಯರೇ ಲೋಕೇಶ್ ಯುನಿವರ್ಸನಲ್ಲಿ ಒಂದಾಗಿರುವ ತಲಪತಿ ವಿಜಯ್(Vijay Thalapathy) ನಾಯಕ ನಟನಾಗಿ ನಟಿಸಿರುವ ಲಿಯೋ ಸಿನಿಮಾ ಇನ್ನು ಕೇವಲ ಚಕ್ರೀಕರಣದ ಹಂತದಲ್ಲಿಯೇ ಇದ್ದು ಮೊದಲ ಟೀಸರ್ ಒಂದು ಬಿಡುಗಡೆಯಾಗಿದೆ. ಆ ಒಂದು ಟೀಸರ್ ನೋಡಿ ಎಲ್ಲರೂ ವ್ಯಾಪಾರ ಮಾಡಲು ಮುಗಿಬರುತ್ತಿದ್ದು ಚಿತ್ರೀಕರಣ ಮುಗಿಯುವುದಕ್ಕೂ ಮುನ್ನವೇ ನೂರಾರು ಕೋಟಿ ರೂಪಾಯಿ ವ್ಯಾಪಾರವನ್ನು ಲಿಯೋ(Leo Movie) ಸಿನಿಮಾ ಮಾಡಿಕೊಂಡಿದೆ.
ಹೌದು ಗೆಳೆಯರೇ ಅಧಿಕೃತ ಮೂಲಗಳ ಪ್ರಕಾರ ದಳಪತಿ ವಿಜಯ್(Vijay Joseph) ನಾಯಕ ನಟನಾಗಿ ನಟಿಸಿರುವ ಹಾಗೂ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲಿಯೋ ಸಿನಿಮಾ ಪ್ರೀ ರಿಲೀಸ್ ಬಿಸಿನೆಸ್ 400 ಕೋಟಿಗೂ ಅಧಿಕ ವ್ಯಾಪಾರವನ್ನು ಈಗಾಗಲೇ ಮಾಡಿದ್ದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಲಿರುವ ಸಿನಿಮಾಗಳ ಪೈಕಿಯಲ್ಲಿ ಕಾಣಿಸಿಕೊಳ್ಳಲಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.