Vinod Raj: ಇತ್ತೀಚಿಗಷ್ಟೇ ಆಸ್ಪತ್ರೆಗೆ ಗಂಭೀರ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ನಟಿ ಲೀಲಾವತಿ ಅಮ್ಮ ಈಗ ಮಾಡ್ತಿರೋದೇನು? ಸೆಲ್ಯೂಟ್.

Actress Leelavathi ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕನಟಿಯಾಗಿ ನಂತರದ ದಿನಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದ ಲೀಲಾವತಿ ಅಮ್ಮ(Leelavathi Amma) ಈಗ ಸಂಪೂರ್ಣವಾಗಿ ಚಿತ್ರರಂಗದಿಂದ ವಿರಾಮವನ್ನು ಪಡೆದುಕೊಂಡು ತಮ್ಮ ಮಗನ ಜೊತೆಗೆ ನೆಲಮಂಗಲದ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿನೋದ್ ರಾಜ್(Vinod Raj) ಕೂಡ ತಾಯಿಯ ಹಾಗೆ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡುವ ಹಂಬಲವನ್ನು ಹೊಂದಿದ್ದರು.

ಆದರೆ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ವಿನೋದ್ ರಾಜ್(Vinod Raj) ಅವರಿಗೆ ಸಾಕಷ್ಟು ಕಾರಣದ ವ್ಯಕ್ತಿಗಳ ವಿರೋಧ ಕೂಡ ಇದ್ದಿದ್ದ ಕಾರಣದಿಂದಾಗಿ ಸಂಪೂರ್ಣವಾಗಿ ಚಿತ್ರರಂಗವನ್ನು ತೊರೆದು ತಾಯಿಯ ಜೊತೆಗೆ ಕೃಷಿ ಕಾರ್ಯಗಳಲ್ಲಿ ತೊಡಗಿದ್ದರು. ಇನ್ನು ಇತ್ತೀಚಿಗಷ್ಟೇ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಕೆಲವು ಆಸ್ತಿಯನ್ನು ಮಾರಿ ಬಡ ಜನರಿಗೆ ಅವರು ಆರ್ಥಿಕ ಹಾಗೂ ಆಹಾರ ಪದಾರ್ಥಗಳ ಸಹಾಯವನ್ನು ಮಾಡಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇತ್ತೀಚಿಗಷ್ಟೇ ಲೀಲಾವತಿ ಅಮ್ಮನವರ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂತಹ ಇಳಿ ವಯಸ್ಸಿನಲ್ಲಿ ಕೂಡ ಆರೋಗ್ಯ ಸಮಸ್ಯೆ ಇದ್ದರೂ ಲೀಲಾವತಿ(Leelavathi) ಅಮ್ಮ ಈಗಾಗಲೇ ಮಾಡಲು ಹೊರಟಿರುವ ಕೆಲಸ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡುತ್ತದೆ. ಹೌದು ಗೆಳೆಯರೇ ಈ ಹಿಂದೆ ಎಷ್ಟೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ್ದ ಅಮ್ಮ ಮಗ ಈಗ ಮೂಕ ಪ್ರಾಣಿಗಳ ಕುರಿತಂತೆ ಒಂದು ವಿಶೇಷವಾದ ಕೆಲಸವನ್ನು ಮಾಡಲು ಹೊರಟಿದ್ದಾರೆ.

ಮಿತ್ರರೇ ವಿನೋದ್ ರಾಜ್(Vinod Raj) ತಮ್ಮ ತಾಯಿಯವರ ಆಸೆಯ ಮೇರೆಗೆ ನೆಲಮಂಗಲದಲ್ಲಿಯೇ ಪಶು ಆಸ್ಪತ್ರೆಯನ್ನು ಕಟ್ಟಿಸಲು ಗುದ್ದಲಿ ಪೂಜೆಯನ್ನು ಈಗಾಗಲೇ ನೆರವೇರಿಸಿದ್ದು ಎಲ್ಲಾ ಕಡೆ ಇದರ ಕುರಿತಂತೆ ತಾಯಿ ಮಗ ಇಬ್ಬರಿಗೂ ಕೂಡ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಇಂತಹ ನಿಸ್ವಾರ್ಥ ಮನಸ್ಸನ್ನು ಹೊಂದಿರುವ ಇವರಿಬ್ಬರಿಗೂ ಕೂಡ ಆ ದೇವರು ಒಳ್ಳೆಯದು ಮಾಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!