Dboss ಕ್ರಾಂತಿ ಸಿನಿಮಾದ ಬಿಡುಗಡೆ ಸಮಯದಲ್ಲೇ ಸೇಲ್ ಆಯ್ತು ಟಿವಿ ರೈಟ್ಸ್. ಸಿಕ್ಕಿದ್ದೆಷ್ಟು ಕೋಟಿ ಗೊತ್ತಾ? ಬಂಪರ್ ಆಫರ್.

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ಈಗಾಗಲೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದು(Released) ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಅಂದುಕೊಂಡಷ್ಟು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯನ್ನು ಕಾಣದಿದ್ದರೂ ಕೂಡ ಕಳಪೆ ಎನ್ನುವಂತಹ ಗಳಿಕೆಯನ್ನು ಕೂಡ ಕಾಣುತ್ತಿಲ್ಲ‌. ಆರಂಭದಲ್ಲಿ ಮಂಕಾಗಿದ್ದರು ಕೂಡ ವಾರಂತ್ಯಕ್ಕೆ(Weekend) ಸಮಾಧಾನ ಪಡುವಂತಹ ಕಲೆಕ್ಷನ್ ಅನ್ನೇ ಕ್ರಾಂತಿ ಗಳಿಸಿದೆ ಎಂಬುದಾಗಿ ಬಾಕ್ಸ್ ಆಫೀಸ್ ರಿಪೋರ್ಟ್ಗಳ ಮೂಲಕ ತಿಳಿದು ಬಂದಿದೆ.

ಬಿಗ್ ಬಜೆಟ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುಮಲತಾ ಅಂಬರೀಶ್ ಸಾಧು ಕೋಕಿಲ ಸಂಯುಕ್ತ ಹೊರನಾಡ್ ರವಿಶಂಕರ್ ಗಿರೀಶ್ ಶಿವಣ್ಣ ಬಿ ಸುರೇಶ್ ಗಿರಿಜಾ ಲೋಕ ಸೇರಿದಂತೆ ದೊಡ್ಡ ತಾರಾ ಬಳಗವೇ(Star Cast) ಸಿನಿಮಾದಲ್ಲಿ ಎಲ್ಲರ ಕಣ್ಮನವನ್ನು ಕಂಗೊಳಿಸುವಂತೆ ತುಂಬಿದೆ. ಇನ್ನು ಕಲೆಕ್ಷನ್ ವಿಚಾರದಲ್ಲಿ ಎಲ್ಲರೂ ಮಾತನಾಡುತ್ತಿರುವ ಸಂದರ್ಭದಲ್ಲಿಯೇ ಕ್ರಾಂತಿ ಸಿನಿಮಾದ ಟಿವಿ ಹಕ್ಕುಗಳನ್ನು ಕೂಡ ಈಗಾಗಲೇ ಮಾರಾಟ ಮಾಡಲಾಗಿದೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ.

dboss kranti

ಹೌದು ಮಿತ್ರರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾಗಳು ಎಂದರೆ ಟಿವಿ ರೈಟ್ಸ್ ಹಾಗೂ ಇನ್ನಿತರ ವಿಚಾರಗಳಲ್ಲಿ ದಾಖಲೆಯನ್ನು ನಿರ್ಮಿಸಲೇಬೇಕಾಗುತ್ತದೆ. ಇನ್ನು ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟಿವಿ ರೈಟ್ಸ್(TV Rights) ಅನ್ನು ಉದಯ ಟಿವಿ ಚಾನೆಲ್ ಖರೀದಿಸಿದೆ ಎಂಬುದಾಗಿ ತಿಳಿದು ಬಂದಿದ್ದು ಖರೀದಿಸಿರುವ ಬೆಲೆ ದರ್ಶನ್ ಅವರ ಸಿನಿಮಾಗಳಲ್ಲಿಯೇ ಅತ್ಯಂತ ಹೆಚ್ಚು ಬೆಲೆ ಎಂಬುದಾಗಿ ತಿಳಿದು ಬಂದಿದೆ.

ಕ್ರಾಂತಿ ಸಿನಿಮಾದ ಟೆಲಿವಿಷನ್ ಹಕ್ಕುಗಳನ್ನು ಉದಯ ಟಿವಿ ಚಾನೆಲ್ ಭರ್ಜರಿ 13 ಕೋಟಿ ರೂಪಾಯಿಗೆ ಪಡೆದುಕೊಂಡಿದ್ದು ದರ್ಶನ್ ಅವರ ಸಿನಿಮಾ ಕರಿಯರ್ ನಲ್ಲಿಯೇ ಇದೊಂದು ದಾಖಲೆಯ ಮೊತ್ತವಾಗಿದೆ ಎಂಬುದಾಗಿ ಬಾಕ್ಸ್ ಆಫೀಸ್ ಮೂಲಗಳ ಆಧಾರದಿಂದ ತಿಳಿದುಬಂದಿದೆ. ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿರಬಹುದು ಆದರೆ ವ್ಯವಹಾರದ ವಿಚಾರದಲ್ಲಿ ಮಾತ್ರ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ಪ್ರಭಾವ ಇಲ್ಲಿ ದೊಡ್ಡದಾಗಿಯೇ ಕಂಡುಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!