ಕ್ರಾಂತಿ ಸಿನಿಮಾಗಾಗಿ ದರ್ಶನ್ ರಚಿತ ರವಿಚಂದ್ರನ್ ಎಷ್ಟೆಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಗೊತ್ತಾ?

Kranti actors remuneration : ಭರ್ಜರಿ ಬಜೆಟ್ ನಲ್ಲಿ ನೋಡಿ ಬಂದಿರುವ ಕ್ರಾಂತಿ ಸಿನಿಮಾದ ಮೊದಲನೇ ಹಾಡು ಬಿಡುಗಡೆಯಾಗಿ ಈಗಾಗಲೇ ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. ಇನ್ನೇನು ಎರಡನೇ ಹಾಡು ಕೂಡ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿ ನಿಂತಿದೆ. ಇದರ ನಡುವೆ ಅಭಿಮಾನಿಗಳಲ್ಲಿ ಈ ಸಿನಿಮಾಗೆ ಪ್ರಮುಖ ಕಲಾವಿದರು ಎಷ್ಟೆಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಕುತೂಹಲ ಜಾಸ್ತಿಯಾಗಿದೆ. ಇಂದಿನ ಲೇಖನಿಯಲ್ಲಿ ಆ ಕುತೂಹಲವನ್ನು ತಣಿಸೋಣ ಬನ್ನಿ.

ಮೊದಲನೇದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕುರುಕ್ಷೇತ್ರ ಚಿತ್ರದ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಕ್ರಾಂತಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಒಬ್ಬ ಸ್ಟಾರ್ ನಟ ಕೂಡ ಆಗಿದ್ದು ಈ ಸಿನಿಮಾದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುವುದಕ್ಕೆ 90 ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗೆ ಸಂಭಾವನೆಯನ್ನು ಪಡೆದುಕೊಂಡಿರಬಹುದು ಎಂಬುದಾಗಿ ತಿಳಿದು ಬಂದಿದೆ.

ಇನ್ನು ಚಿತ್ರದ ನಾಯಕ ನಟಿ ಆಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಬೇಡಿಕೆಗೆ ಅನುಗುಣವಾಗಿ 60 ರಿಂದ 70 ಲಕ್ಷ ರೂಪಾಯಿ ವರೆಗೂ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿ ಇದೆ.

Kranti actors remuneration

ಎಲ್ಲದಕ್ಕಿಂತ ಪ್ರಮುಖವಾಗಿ ಮಂಡ್ಯ ಕ್ಷೇತ್ರದ ಸಂಸದೆ ಆಗಿರುವ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಕೂಡ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ನಟಿಸುತ್ತಿದ್ದಾರೆ. ಇನ್ನು ಕ್ರಾಂತಿ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಸುಮಲತಾ ಅಂಬರೀಶ್ ಅವರು ಭರ್ಜರಿ 30 ರಿಂದ 40 ಲಕ್ಷ ರೂಪಾಯಿ ಸಂಭಾವನೆಯನ್ನು ಚಾರ್ಜ್ ಮಾಡುತ್ತಿದ್ದಾರೆ.

ನಾಯಕನಾಗಿ ಕಾಣಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ಒಬ್ಬ ನಾಯಕನಾಗಿ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಸಮಯವನ್ನು ಚಿತ್ರದ ಪ್ರಮೋಷನ್ ಗಾಗಿ ಅವರು ವಿನಯೋಗಿಸುತ್ತಿದ್ದಾರೆ.

ಹೀಗಾಗಿ ಕೇವಲ 15 ಕೋಟಿ ರೂಪಾಯಿ ಸಂಭಾವನೆ ಮಾತ್ರವಲ್ಲದೆ ಚಿತ್ರದಲ್ಲಿ ಬರುವಂತಹ ಲಾಭದಲ್ಲಿ ಪಾಲನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿರ್ಮಾಪಕರಿಂದ ಪಡೆಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾದಲ್ಲಿ ಡಿ ಬಾಸ್ ನಾಯಕ ಆಗಿದ್ದಾರೆ ಎಂದರೆ ಖಂಡಿತವಾಗಿ ಅದಾಗಲೇ ಚಿತ್ರದ ಲಾಭ ನಿಶ್ಚಿತ ಎಂದು ಹೇಳಬಹುದಾಗಿದೆ. ಕ್ರಾಂತಿ ಸಿನಿಮಾದ ಪ್ರಮುಖ ಕಲಾವಿದರ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!