Kranti 100cr ಕ್ರಾಂತಿ 100 ಕೋಟಿ ಕಲೆಕ್ಷನ್ ಮಾಡಿಲ್ಲ ಎಂದವರಿಗೆ ಖಡಕ್ ತಿರುಗೇಟು ನೀಡಿದ ಡಿ ಬಾಸ್!
Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕ ನಟನಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಇದೇ ಜನವರಿ 26ರಂದು ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ಆದರೆ ಆರಂಭದಿಂದಲೂ ಕೂಡ ಅಷ್ಟೊಂದು ನೀರಿಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ಮಾಡುತ್ತಿಲ್ಲ ಎಂಬುದಾಗಿ ಹಲವಾರು ಸಿನಿಮಾ ಪಂಡಿತರು ಹಾಗೂ ಸಾಮಾನ್ಯ ಪ್ರೇಕ್ಷಕರು ಕೂಡ ಮೂಗು ಮುರಿದಿದ್ದರು. ಇದರ ಕುರಿತಂತೆ ಡಿ ಬಾಸ್ ಅವರ ಅಭಿಮಾನಿಗಳು ಕೂಡ ಸಿನಿಮಾದ ನೆಗೆಟಿವ್(Negative) ಪ್ರಚಾರಕ್ಕಾಗಿ ನೀವು ಹೀಗೆ ಹೇಳುತ್ತಿದ್ದೀರಿ ಎಂಬುದಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಪ್ರಕಾರ ಕ್ರಾಂತಿ ಸಿನಿಮಾ ಈಗಾಗಲೇ 109 ಕೋಟಿ ರೂಪಾಯಿ ದಾಟಿ 150 ಕೋಟಿ ಕಲೆಕ್ಷನ್ ಮಾಡುವಂತಹ ಮುನ್ನುಗ್ಗುತಿದೆ ಎಂಬುದಾಗಿ ಭಾವಿಸಿದ್ದಾರೆ. ಬೇರೆ ನಟರ ಅಭಿಮಾನಿಗಳು ಇದು ಶುದ್ಧ ಸುಳ್ಳು ಇನ್ನೂ ಐವತ್ತು ಕೋಟಿ ರೂಪಾಯಿ ಹಣವನ್ನು ಕೂಡ ಕಲೆಕ್ಷನ್ ಮಾಡಿಲ್ಲ ಎಂಬುದಾಗಿ ಟ್ರೋಲ್(Troll) ಮಾಡುತ್ತಿದ್ದಾರೆ.

ಆದರೆ ಇದಕ್ಕೆಲ್ಲ ಸರಿಯಾದ ಉತ್ತರ ನೀಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರು ಮಾಡಿರುವಂತಹ ಒಂದು ಕೆಲಸ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದ್ದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆಗಿದೆ. ಹೌದು ಮಿತ್ರರೇ ಡಿ ಬಾಸ್ ತಮ್ಮ ಅಭಿಮಾನಿಗಳು ಹಾಗೂ ಚಿತ್ರತಂಡದ ಜೊತೆಗೂಡಿ ಕ್ರಾಂತಿ ಸಿನಿಮಾ ಈಗಾಗಲೇ 109 ಕೋಟಿ ರೂಪಾಯಿ ಗಳಿಸಿದೆ ಎನ್ನುವಂತಹ ಕೇಕ್ ಅನ್ನು ಸಂಭ್ರಮದಿಂದ ಕತ್ತ’ರಿಸಿ ಹಂಚಿ ತಿಂದು ಸಂಭ್ರಮಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮೂಲಕ ಸ್ವತಃ ಚಿತ್ರತಂಡದಿಂದಲೇ ಕ್ರಾಂತಿ ಸಿನಿಮಾ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್(Collection) ಮಾಡಿದೆ ಎನ್ನುವ ಪರೋಕ್ಷವಾದ ಅಂತಹ ಅಧಿಕೃತ ಪ್ರಕಟಣೆ ಹೊರ ಬಂದಿದೆ ಎಂದು ಹೇಳಬಹುದಾಗಿದೆ. ಚಿತ್ರದ ಕುರಿತಂತೆ ನೆಗೆಟಿವ್ ಪ್ರಚಾರ ಮಾಡುತ್ತಿದ್ದ ಹೇಟರ್ಸ್ಗಳಿಗೆ ಇದೊಂದು ತಕ್ಕನಾದ ಉತ್ತರ ಎನ್ನಬಹುದು. ಕ್ರಾಂತಿ ಸಿನಿಮಾ ನೂಲು ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಾಗಿದೆ ಎನ್ನಲಾಗುವ ಈ ಸುದ್ದಿಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.