ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಡೇಟ್ ಕೊನೆಗೂ ಲೀಕ್ ಆಯ್ತು.

Kaccha Sudeep Next film Announcement : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ಮುಗಿದಿದ್ದು ರೂಪ ಶೆಟ್ಟಿ ವಿನ್ನರ್ ( Winner) ಆಗಿ ಹಾಗೂ ರಾಕೇಶ್ ಅಡಿಗ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯ ಕಾರ್ಯಕ್ರಮವನ್ನು ಮುಗಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುಂದೆ ಯಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.

ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಕೆಲವೊಂದು ಸುದ್ದಿಗಳು ಹರಿದಾಡುತ್ತಿದ್ದು ತಮಿಳುನಾಡಿನ ವೆಂಕಟ್ ಪ್ರಭು ಅವರ ಜೊತೆಗೆ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಕಡೆ ನೋಡುವುದಾದರೆ ಅನೂಪ್ ಭಂಡಾರಿ ಅವರ ನಿರ್ದೇಶನದ ( Directional ) ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಇನ್ನೂ ಎರಡರಿಂದ ಮೂರು ಸಿನಿಮಾಗಳನ್ನು ಅತೀ ಶೀಘ್ರದಲ್ಲೇ ಒಪ್ಪಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಹೊರ ಬಂದಿದೆ.

Actor Sudeep
Actor Sudeep

ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರು ತಮ್ಮ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕೂಡ ತಮ್ಮ ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ಯಾವುದೇ ಅನೌನ್ಸ್ಮೆಂಟ್ (Announcement ಮಾಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಯಾವಾಗ ತಮ್ಮ ಬಾಸ್ ಸಿನಿಮಾ ಘೋಷಣೆ ಮಾಡ್ತಾರೆ ಎಂಬುದಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಬ್ಯುಸಿ ಆಗಿದ್ದ ಬಿಗ್ ಬಾಸ್ ಕೂಡ ಮುಗಿದಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ರೂಪೇಶ್ ರಾಜಣ್ಣ ಡಿ ಬಾಸ್ ಅವರಿಗೆ ಚಪ್ಪಲಿ ಎಸೆದಿರುವ ಬಗ್ಗೆ ನೀಡಿದ ಹೇಳಿಕೆ ಏನು ಗೊತ್ತಾ?

ಹೀಗಾಗಿ ಹತ್ತಿರದಲ್ಲಿ ಇರುವಂತಹ ಅತ್ಯಂತ ಶುಭದಿನ ಎಂದರೆ ಜನವರಿ 14ರ ಮಕರ ಸಂಕ್ರಮಣ. ಹೀಗಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಮ್ಮ ಮುಂದಿನ ಸಿನಿಮಾವನ್ನು ಜನವರಿ 14ರ ಮಕರ ಸಂಕ್ರಮಣದ ಶುಭದಿನದಂದು ಅನೌನ್ಸ್ಮೆಂಟ್ (Announcement ) ಮಾಡಲಿದ್ದಾರೆ ಎಂಬುದಾಗಿ ಎಲ್ಲರೂ ಲೆಕ್ಕಾಚಾರ ಹಾಕಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!