ಮತ್ತೆ ನಿಜವಾಗಿ ಒಂದಾದ ಕುಚುಕುಗಳು. ವೈರಲ್ ಆಯಿತು ಕಿಚ್ಚ ದಚ್ಚು ಸೆಲ್ಫಿ.

Kiccha and Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತದ ಪ್ರಕರಣದ ನಂತರ ಇಡೀ ಕನ್ನಡ ಚಿತ್ರರಂಗದ ಖ್ಯಾತನಾಮ ಗಣ್ಯಾತಿ ಗಣ್ಯರು ( Celebrities ) ಅವರ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರ ಒಂದು ಕಾಲದ ಕುಚಿಕು ಗೆಳೆಯ ಆಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ದರ್ಶನ್ ಅವರಿಗೆ ಯಾವುದೇ ಅಡೆ-ತಡೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಸುದೀಪ್ ಅವರನ್ನು ಕಂಡರೆ ಉರಿ ಬೀಳುತ್ತಿದ್ದ ದರ್ಶನ್ ಅವರು ಕೂಡ ಸುದೀಪ್ ಅವರ ಬೆಂಬಲವನ್ನು ಧನ್ಯವಾದದ ಮೂಲಕ ಇವರಿಬ್ಬರ ಮನಸಿನಲ್ಲಿ ಸ್ನೇಹಭಾವ ( Friendship ) ಇನ್ನೂ ಕೂಡ ಉಳಿದಿದೆ ಎಂಬುದನ್ನು ಜಗತ್ತಿಗೆ ಸಾಗುತ್ತಾರೆ. ಸುದೀಪ್ ಅವರಿಗೆ ಪ್ರತಿಕ್ರಿಯೆ ನೀಡುವ ಮೂಲಕ ದರ್ಶನ್ ಅವರು ಅಭಿಮಾನಿಗಳಲ್ಲಿ ಅತಿ ಶೀಘ್ರದಲ್ಲೇ ಇವರಿಬ್ಬರು ಒಂದಾಗಲಿದ್ದಾರೆ ಎನ್ನುವ ಸುದ್ದಿಗಳು ಸಹಜವಾಗಿಯೇ ಹರಡುವುದಕ್ಕೆ ಕಾರಣೀಕರ್ತರಾಗುತ್ತಾರೆ. ಇದು ಈಗ ಎಲ್ಲಾ ಕಡೆ ನಿರೀಕ್ಷೆಯಿಂದ ಎಲ್ಲರೂ ಕಾಯುತ್ತಿರುವಂತಹ ವಿಚಾರವಾಗಿದೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೊದಲಿನಂತೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಗೆಳೆಯರಾಗಿ ಮತ್ತೆ ಅಭಿಮಾನಿಗಳ ಎದುರು ಕಾಣಿಸಿಕೊಳ್ಳಲಿ ಎಂಬುದೇ ಅವರಿಬ್ಬರ ಅಭಿಮಾನಿಗಳ ಮಹಾದಾಸೆಯಾಗಿದೆ. ಈಗ ಇದಕ್ಕೆ ಪೂರಕ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸೆಲ್ಫಿ ಓಡಾಡುತ್ತಿದ್ದು ಸಾಕಷ್ಟು ಪರಿಣಾಮವನ್ನು ಬೀರಿದೆ. ಹೌದು ಗೆಳೆಯರೇ, ಇದನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಇದು ನಿಜ ಎಂಬುದಾಗಿ ಭಾವಿಸುತ್ತೀರಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಇರುವಂತಹ ಸೆಲ್ಫಿಯಾ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral ) ಆಗಿದೆ. ನಂತರ ಇದನ್ನು ಪರಿಶೀಲಿಸಿ ನೋಡಿದಾಗ ಇದೊಂದು ಎಡಿಟೆಡ್ ( edited ) ಫೋಟೋ ಎಂಬುದಾಗಿ ಕಂಡಿತವಾಗಿ ನಮಗೆ ತಿಳಿದು ಬರುತ್ತದೆ ಆದರೆ ಅಭಿಮಾನಿಗಳು ಮಾತ್ರ ಈ ಫೋಟೋದಲ್ಲಿರುವಂತೆ ನಿಜವಾಗಿ ಕೂಡ ಆಗಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!