ವರ್ಷ ಮುಗಿಯುವುದಕ್ಕೂ ಮುಂಚೇನೆ ಹೊಸ ದಾಖಲೆ ಕ್ರಿಯೇಟ್ ಮಾಡಿದ ಕೆಜಿಎಫ್ ಚಾಪ್ಟರ್ 2.

KGF Chapter 2 has created a new record even before the end of the year ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ಮೇಕಿಂಗ್ ಗುಣಮಟ್ಟವನ್ನು ಹಾಗೂ ನಮ್ಮ ಸಾಮರ್ಥ್ಯವನ್ನು ಸಾರ್ವಭೌಮನ ರೀತಿಯಲ್ಲಿ ಸಾಬೀತುಪಡಿಸಿದ ಸಿನಿಮಾ ಎಂದರೆ ಅದು ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ (Hombale Filmes) ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಮಾಡಿರುವಂತಹ ಯೋಚನೆ ಪರಿಶ್ರಮ ಹಾಗೂ ಮಹತ್ವಕಾಂಕ್ಷೆಯ ಪ್ರತಿಫಲವೇ ಈ ಸಿನಿಮಾ ಎಂದರೆ ತಪ್ಪಾಗಲಾರದು. ನಿಜಕ್ಕೂ ಇದನ್ನು ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ಎಂದು ಹೇಳುವುದಕ್ಕೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡಬೇಕು.

ಕೆಜಿಎಫ್ ಚಾಪ್ಟರ್ 2 ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಚಿತ್ರರಂಗ ಸೇರಿದಂತೆ ವಿದೇಶದಲ್ಲಿ ಕೂಡ ಪರಭಾಷೆಗಳನ್ನು ಮೀರಿಸುವಂತಹ ಹಲವಾರು ದಾಖಲೆಗಳನ್ನು ಕ್ರಿಯೇಟ್ ಮಾಡಿದೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಇನ್ನು ಹಲವಾರು ವರ್ಷಗಳು ಬಿಟ್ಟು ತೆಗೆದು ನೋಡಿದರೂ ಕೂಡ ಕೆಜಿಎಫ್ ಚಾಪ್ಟರ್ 2 (KGF chapter2) ಚಿತ್ರ ತನ್ನದೇ ಆದಂತಹ ಮಹತ್ವದ ಅಧ್ಯಾಯವನ್ನು ಹೊಂದಿರುತ್ತದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2022 ಇಸವಿ ಮುಗಿದು 2023 ಇಸವಿ ಪ್ರಾರಂಭವಾಗಿದೆ. ವರ್ಷದ ಕೊನೆಯ ದಿನವೂ ಕೂಡ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮತ್ತೊಂದು ದೊಡ್ಡ ಮಟ್ಟದ ದಾಖಲೆಯನ್ನು ಮಾಡುವ ಮೂಲಕ ಇಡೀ 2022 ವರ್ಷವನ್ನು ತನ್ನದಾಗಿಸಿಕೊಂಡಿದೆ. ಅಷ್ಟಕ್ಕೂ 2022 ರಲ್ಲಿ ಯಾರು ಮಾಡಲಾಗದಂತಹ ಸಾಧನೆಯನ್ನು ಕೆ ಜಿ ಎಫ್ ಚಾಪ್ಟರ್ 2 ಏನು ಮಾಡಿದೆ ಎಂಬುದಾಗಿ ನೀವು ಕೇಳಬಹುದು ಬನ್ನಿ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಇದನೊಮ್ಮೆ ಓದಿ..ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಅನಂತನಾಗ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

2022 ರಲ್ಲಿ ಕನ್ನಡ ಸೇರಿದಂತೆ ಪರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬಜೆಟ್ ಇರುವಂತಹ ದೊಡ್ಡ ತಾರಾ ಬಳಗವೇ ಇರುವಂತಹ ಸಿನಿಮಾಗಳು ಕೂಡ ಬಿಡುಗಡೆಯಾಗಿ (Box Office) ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಘರ್ಜಿಸಿವೆ. ಆದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಡೀ 2022 ವರ್ಷದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಸಿನಿಮಾ ಆಗಿ ಕಾಣಿಸಿಕೊಂಡಿದೆ. ಒಟ್ಟಾರೆಯಾಗಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡು 2022 ನೇ ಇಸವಿಯಲ್ಲಿ ಭಾರತೀಯ ಚಿತ್ರರಂಗವನ್ನು ಗೆದ್ದಿರುವ ಸಾಧನೆಯನ್ನು ಮಾಡಿದೆ.

Leave A Reply

Your email address will not be published.

error: Content is protected !!