KGF Krishna G Rao :ಕೆಜಿಎಫ್ ತಾತ ಕೃಷ್ಣ ರಾವ್ ಆರೋಗ್ಯ ಸ್ಥಿತಿ ತೀರಾ ಗಂಭೀರ‌

KGF Krishna G Rao: ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿ ಚಿತ್ರಗಳು ಯಾವ ರೀತಿಯಲ್ಲಿ ಹಿರಿಮೆಯನ್ನು ದಾಖಲಿಸಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಈ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಂದು ಪಾತ್ರಗಳು ಕೂಡ ಕೇವಲ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಪ್ರೇಕ್ಷಕರಿಗೆ ಬಾಯಿ ಪಾಠ ಆಗಿದೆ ಎನ್ನಬಹುದಾಗಿದೆ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೆಜಿಎಫ್ ಚಿತ್ರದಲ್ಲಿ ಕಣ್ಣು ಕಾಣದ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃಷ್ಣಾ ಜಿ ರಾವ್(KGF Krishna G Rao) ಅವರ ಬಗ್ಗೆ. ಅವರ ವಯಸ್ಸು 70 ಆಗಿದ್ದು ಕೆಜಿಎಫ್ ನಲ್ಲಿ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆದರೆ ಈಗ ಅವರ ಆರೋಗ್ಯ ಸ್ಥಿತಿಯಲ್ಲಿ ದೊಡ್ಡಮಟ್ಟದಲ್ಲಿ ಏರುಪೇರು ಕಂಡು ಬಂದಿದೆ ಎಂಬುದಾಗಿ ಅವರ ಕುಟುಂಬಸ್ಥರು ಹಾಗೂ ಆಪ್ತ ಮೂಲ ವರ್ಗದವರು ತಿಳಿಸಿದ್ದಾರೆ.

KGF Krishna G Rao
Krishna g rao kgf actor

ಕೃಷ್ಣಾಜಿ ರಾವ್ ಅವರನ್ನು ನಿನ್ನೆಯಷ್ಟೇ ಅಂದರೆ ಬುಧವಾರದ ತಡರಾತ್ರಿ ರಾತ್ರಿ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾಸಕೋಶದ ಸೋಂಕಿನ ಸಮಸ್ಯೆ ಇರುವ ಕಾರಣದಿಂದಾಗಿ ಸುಸ್ತಾಗಿ ಬಿದ್ದಿದ್ದಾರೆ ಎಂಬುದಾಗಿ ಪ್ರಾಥಮಿಕ ಮಾಹಿತಿಯ ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಕೃಷ್ಣಾಜಿ ರಾವ್ ಅವರನ್ನು ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದು ಈಗಲೇ ಏನು ಹೇಳಲು ಕೂಡ ಸಾಧ್ಯವಾಗುವುದಿಲ್ಲ ಎಂಬುದಾಗಿ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಹೆಚ್ಚಿನ ಆರೋಗ್ಯದ ಮಾಹಿತಿಗಳಿಗಾಗಿ ವೈದ್ಯರ ಅಧಿಕೃತ ಪ್ರಕಟಣೆಯವರೆಗೂ ಕೂಡ ಕಾಯಬೇಕಾಗಿದೆ.

70ನೇ ವಯಸ್ಸಿನಲ್ಲಿ ಹೀರೋ ಆಗುವ ಕನಸನ್ನು ಕೂಡ ನ್ಯಾನೋ ನಾರಾಯಣಪ್ಪ ಸಿನಿಮಾದ ಮೂಲಕ ತೀರಿಸಿಕೊಂಡಿರುವ ಕೃಷ್ಣಾಜಿ ರಾವ್ ಅವರು ಈಗ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯಿಂದ ಕೃಷ್ಣಾಜಿ ರಾವ್ ಅವರು ಹೊರಬಂದು ಮತ್ತೆ ನಮ್ಮ ಮುಂದೆ ಮತ್ತೊಂದು ಸಿನಿಮಾದ ಮೂಲಕ ರಂಜಿಸಲಿ ಎಂಬುದಾಗಿ ಆ ದೇವರಲ್ಲಿ ಪ್ರಾರ್ಥಿಸೋಣ. ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕೃಷ್ಣಾಜಿ ರಾವ್ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬುದಾಗಿ ಕಾಮೆಂಟ್ ಮಾಡಿ ದೇವರಲ್ಲಿ ಪ್ರಾರ್ಥಿಸಿ.

Malaika arora : ಮದುವೆ ಆಗದೆ ಪ್ರೆಗ್ನೆಂಟ್ ಆದ 50 ವರ್ಷದ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆಗಲಿದ್ದಾರೆ ಅರ್ಜುನ್ ಕಪೂರ್

Leave a Comment

error: Content is protected !!