Kannada News: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಬಾಲ ನಟಿಯಾಗಿದ್ದ ನಟಿ ಈಗ ಐಎಎಸ್ ಅಧಿಕಾರಿ! ಯಾರದು ಗೊತ್ತಾ?

Kannada Cinema News ಮರಳಿ ಯತ್ನವ ಮಾಡು ಎಂದು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಯಾವುದೇ ಕೆಲಸವನ್ನಾದರೂ ಪದೇಪದೇ ಪ್ರಯತ್ನಿಸಿದರೇ ಖಂಡಿತವಾಗಿ ಒಂದಲ್ಲ ಒಂದು ಬಾರಿ ನೀವು ಅದರಲ್ಲಿ ಗೆಲುವನ್ನು ಸಾಧಿಸುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿ ಹಿರಿಯರು ಹಾಗೂ ಪುರಾತನ ಗ್ರಂಥಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ಇದಕ್ಕೆ ಉದಾಹರಣೆಯೆಂದು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿದ್ದ ಹಾಗೂ ಈಗ ಐಎಎಸ್ ಅಧಿಕಾರಿ ಆಗಿರುವ ಕೀರ್ತನ(Keerthana IAS) ಅವರನ್ನು ಕರೆಯಬಹುದಾಗಿದೆ.

ಹೌದು ಗೆಳೆಯರೇ ಕೀರ್ತನ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ವಿಷ್ಣುವರ್ಧನ್(Vishnuvardhan) ಅಂಬರೀಶ್ ದೇವರಾಜ್ ರಮೇಶ ಅರವಿಂದ್ ಶಿವರಾಜಕುಮಾರ್(Shivarajkumar) ಸೇರಿದಂತೆ ಹಲವಾರು ನಟರೊಂದಿಗೆ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಅವರು ಇಂದು ಏರಿರುವ ಹಂತವನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿಕ್ಕವಯಸ್ಸಿನಲ್ಲಿ ಅಣ್ಣಮ್ಮನ ಉತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಈಕೆಯನ್ನು ನಿರ್ದೇಶಕರು ಕರೆದುಕೊಂಡು ಹೋಗಿ ಮೊದಲಿಗೆ ಶಿವಣ್ಣನ ದೊರೆ ಸಿನಿಮಾದಲ್ಲಿ ನಟಿಸುವಂತೆ ಮಾಡುತ್ತಾರೆ.

ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಬಾಲ ನಟಿಯಾಗಿ ಕೀರ್ತನ ಅವರು ಕಾಣಿಸಿಕೊಳ್ಳುತ್ತಾರೆ. ಇವರು 15 ವರ್ಷ ಆಗುವವರೆಗೂ ಕೂಡ 35ಕ್ಕೂ ಅಧಿಕ ಸಿನಿಮಾ ಹಾಗೂ 48ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸುತ್ತಾರೆ. ದೊಡ್ಡವರಾದ ಮೇಲೆ ಸಿನಿಮಾರಂಗದಿಂದ ವಿಮುಖರಾಗುವ ಇವರು ಸಾಫ್ಟ್ವೇರ್ ಇಂಜಿನಿಯರಿಂಗ್ ಮಾಡಿ ಕೈ ತುಂಬಾ ಸಂಬಳ ಸಿಗುವಂತಹ ಕೆಲಸವನ್ನು ಕೂಡ ಗಿಟ್ಟಿಸಿಕೊಂಡಿದ್ದರು. ಹೀಗಿದ್ದರೂ ಕೂಡ ಜನರಿಗೆ ಸೇವೆಯನ್ನು ನೀಡುವಂತಹ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಐಎಎಸ್ ಎಕ್ಸಾಮ್(IAS EXAM) ಬರೆಯುವುದಕ್ಕೆ ಪ್ರಯತ್ನಿಸುತ್ತಾರೆ.

ಮೊದಲಿಗೆ ಕೆಪಿಎಸ್ಸಿ ಪರೀಕ್ಷೆಯನ್ನು ಬರೆದು ಕೆ ಎ ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇದಾದ ನಂತರ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಲು ಪ್ರಾರಂಭಿಸುತ್ತಾರೆ. ಐದು ನಿರಂತರ ಪ್ರಯತ್ನಗಳನ್ನು ಮಾಡಿದರು ಕೂಡ ಕೀರ್ತನ ಅವರು ಈ ಪರೀಕ್ಷೆಯಲ್ಲಿ ಪಾಸ್ ಆಗಲು ವಿಫಲರಾಗುತ್ತಾರೆ ಹಾಗೂ ಇದರ ಮಧ್ಯದಲ್ಲಿ ಅವರ ಜೀವಕ್ಕೆ ಜೀವವಾಗಿದ್ದ ತಂದೆಯ ಮರಣ ಕೂಡ ಸಂಭವಿಸುತ್ತದೆ. ಆದರೆ ಕೊನೆಗೂ ಹಠ ಬಿಡದೆ 6ನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಪಾಸ್ ಆಗಿ ಈಗ ಮಂಡ್ಯದ ಅಸಿಸ್ಟೆಂಟ್ ಕಮಿಷನರ್(Mandya Assistant Commissioner) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರಳಿ ಯತ್ನವ ಮಾಡು ಎನ್ನುವ ನಾಣ್ಣುಡಿಗೆ ಕೀರ್ತನ ಅವರ ಜೀವನ ಒಂದು ಸರಿಯಾದ ಉದಾಹರಣೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!