ಹೊಸಮನೆ ಖರೀದಿ ಮಾಡಿ ಪ್ರವೇಶ ಮಾಡಿದರು ಚಂದನ್ ಕುಮಾರ್ ಮತ್ತು ಕವಿತಾ ಗೌಡ ಜೋಡಿ. ಇಲ್ಲಿದೆ ನೋಡಿ ಸಂತಸ ಕ್ಷಣದ ವಿಡಿಯೋ


ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದು ಕರೆಸಿಕೊಂಡಿರುವ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಸದ್ಯ ಸಂತಸದಲ್ಲಿದ್ದಾರೆ. ಇದಕ್ಕೆ ಕಾರಣ ಚಂದನ್ ಕುಮಾರ್ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದು. ಇತ್ತೀಚಿಗೆ ಹೊಸಮನೆಯ ಗ್ರಹ ಪ್ರವೇಶ ಕಾರ್ಯಕ್ರಮ ನೆರವೇರಿಸಿದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಈ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅವರ ಆಪ್ತರು ಸ್ನೇಹಿತರು ಈ ಸಂತೋಷದ ವಿಚಾರವನ್ನು ತಿಳಿದು ವಿಶ್ ಮಾಡಿದ್ದಾರೆ.

ಕನ್ನಡ ಕಿರುತೆರೆಯ ಮೂಲಕ ಒಂದಾದ ಜೋಡಿ ಇದು. ಕಲರ್ಸ್ ನಲ್ಲಿ ಪ್ರಸಾರವಾಗುತ್ತಿದ್ದ”ಲಕ್ಷ್ಮಿ ಬಾರಮ್ಮ’ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅಭಿನಯಿಸಿದ್ದರು. ಸ್ವಲ್ಪ ದಿನ ಈ ಧಾರಾವಾಹಿಯಲ್ಲಿ ನಟಿಸಿದ ಚಂದನ್ ಕುಮಾರ್ ನಂತರ ಧಾರಾವಾಹಿಯನ್ನು ತೊರೆದು ಬೇರೆ ಪ್ರಾಜೆಕ್ಟ್ ಗಳಿಗೆ ಹೋದರು. ಕವಿತಾ ಗೌಡ ಇದರಲ್ಲಿಯೇ ಹೆಚ್ಚು ಸಮಯ ಮುಂದುವರೆದರು. ನಂತರ ಈ ಧಾರವಾಹಿಯನ್ನು ಬಿಟ್ಟು ’ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ನಟಿಸಿದರು. ಇನ್ನು ಚಂದನ್ ಕುಮಾರ್ ಕೂಡ ಸಿನಿಮಾ ಹಾಗೂ ಇತರ ಧಾರಾವಾಹಿಗಳಲ್ಲಿ ಬ್ಯುಸಿ ಆದರು. ಸದ್ಯ ಚಂದನ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಯ ’ಮರಳಿ ಮನಸಾಗಿದೆ’ ಹಾಗೂ ಸ್ಟಾರ್ ಮಾ ’ಶ್ರೀಮತಿ ಶ್ರೀನಿವಾಸ್’ ಈ ಎರಡು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.

ನಟನೆ ಮಾತ್ರವಲ್ಲದೆ ಬ್ಯುಸಿನೆಸ್ ಗಳನ್ನು ಕೂಡ ಮಾಡುತ್ತಿರುವ ಚಂದನ್ ಕುಮಾರ್, ತಮ್ಮದೇ ಆದ ಸ್ವಂತ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ ಜೊತೆಗೆ ಪ್ರೋಟಿನ್ ಬ್ಯುಸಿನೆಸ್ ನಲ್ಲಿಯೂ ತೊಡಗಿಕೊಂಡಿದ್ದಾರೆ. ಇನ್ನೂ ಕವಿತಾ ಗೌಡ ಕೂಡ ತಮಿಳಿನ ’ಅನ್ಬೇ ಶಿವಂ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇತರ ಸಿನಿಮಾ ಪ್ರಾಜೆಕ್ಟ್ ಗಳಲ್ಲಿಯೂ ಕವಿತಾ ಗೌಡ ಬ್ಯುಸಿಯಾಗಿದ್ದಾರೆ. ಕವಿತಾ ಗೌಡ ಅವರ ನಟನೆಯ ’ಹುಟ್ಟುಹಬ್ಬದ ಶುಭಾಶಯಗಳು’, ’ಗೋವಿಂದ ಗೋವಿಂದ’ ಚಿತ್ರಗಳು ಈಗಾಗಲೆ ತೆರೆಕಂಡಿದೆ.

ಹೀಗೆ ಬೇರೆ ಬೇರೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದನ್ ಕುಮಾರ್ ಹಾಗೂ ಕವಿತಾ ಬಹಳ ವರ್ಷದ ಸ್ನೇಹವನ್ನು ಪ್ರೀತಿಯಾಗಿ ನಂತರ ಮನೆಯವರನ್ನು ಒಪ್ಪಿಸಿ ವಿವಾಹವನ್ನು ಆಗಿದ್ದರು. ಒಟ್ಟಿನಲ್ಲಿ ಪ್ರ್‍ಇತಿಯನ್ನು ಗೆದ್ದ ಸಂತಸದಲ್ಲಿದ್ದ ಈ ಜೋಡಿ ಸದ್ಯ ಹೊಸಮನೆ ಪ್ರವೇಶವನ್ನೂ ಮಾಡಿ ಇನ್ನಷ್ಟು ಖುಷಿಯಾಗಿದ್ದಾರೆ. ಈ ಹಿಂದೆ ಬಾಲ್ಕನಿಯಲ್ಲಿ ನಿಂತು ಫೋಟೋ ಒಂದನ್ನು ಹಾಕಿ ಬಹಳ ಕಷ್ಟಪಟ್ಟು ದುಡಿದ ಹಣದಿಂದ ಮನೆ ಖರೀದಿಸಿದ್ದೇನೆ ಎಂದು ಚಂದನ್ ಕುಮಾರ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದೀಗ ಅದೇ ಮನೆಯ ಗ್ರಹಪ್ರವೇಶ ಸಮಾರಂಭ ನೆರವೇರಿದೆ.

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರ ನೂತನ ಮನೆ ಪ್ರವೇಶಕ್ಕೆ ಹಲವಾರು ನಟ-ನಟಿಯರು ಆಗಮಿಸಿದ್ದರು. ಸ್ನೇಹಿತರನ್ನು ಆಪ್ತರನ್ನು ಒಳಗೊಂಡ ಈ ಆಪ್ತ ಕೂಟದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರ ಅಭಿಮಾನಿಗಳು ಕೂಡ ಈ ಶುಭಸಂದರ್ಭದಲ್ಲಿ ಶುಭಹಾರೈಸಿದ್ದಾರೆ.
ಇತ್ತೀಚಿಗೆ ಅಗ್ನಿಸಾಕ್ಷಿ ವೈಷ್ಣವಿ ಗೌಡ ಕೂಡ ಹೊಸ ಮನೆ ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.


Leave A Reply

Your email address will not be published.