RRR: RRR ಸಿನಿಮಾದ ಹಾಡನ್ನು ಕೇಳದೆ ಇದ್ರೆ ಈ ಖ್ಯಾತ ನಟಿಯ ಮಗನಿಗೆ ಊಟ ಸೇರೋದೆ ಇಲ್ವಂತೆ! ವೈರಲ್ ಆಯ್ತು ನೋಡಿ ನ್ಯೂಸ್!

Trending News ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನಮ್ಮ ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆಯ ಸಿನಿಮಾ ಆಗಿರುವ RRR ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಸಾಕಷ್ಟು ದಿನಗಳು ಕಳೆದ ನಂತರವೂ ಕೂಡ ಇಷ್ಟೊಂದು ಜನಪ್ರಿಯತೆಯನ್ನು ಪಡೆಯುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಬೇಕು.

ಅದರಲ್ಲಿ ವಿಶೇಷವಾಗಿ ಈ ಸಿನಿಮಾದ ನಾಟು ನಾಟು(Naatu Naatu) ಸಾಂಗ್ ಆಸ್ಕರ್ ಅವಾರ್ಡ್ ಅನ್ನೋ ಗೆಲ್ಲುವ ಮೂಲಕ ಭಾರತೀಯ ಚಿತ್ರರಂಗದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಆಕಾಶದ ಮೇಲೆ ಹಾರುವಂತೆ ಮಾಡಿ. ವಿದೇಶಿ ಸೆಲೆಬ್ರಿಟಿಗಳು ಕೂಡ ಈ ಹಾಡನ್ನು ಕೇಳಿ ಅದಕ್ಕೆ ಸ್ಟೆಪ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಸುದ್ದಿ ಅದಕ್ಕೂ ಮಿಗಿಲಾಗಿ ವಿಶೇಷವಾಗಿದೆ.

ಹೌದು ಮಿತ್ರರೇ, ಬಾಲಿವುಡ್(Bollywood) ಚಿತ್ರರಂಗದ ಖ್ಯಾತ ನಟಿ ಒಬ್ಬರ ಚಿಕ್ಕ ಮಗು ಕೂಡ ಈ ಹಾಡು ಇಲ್ಲದೆ ಊಟ ಮಾಡೋದಿಲ್ವಂತೆ. ಸಾಮಾನ್ಯವಾಗಿ ಯುವಕರು ಈ ಹಾಡಿನ ಕುರಿತಂತೆ ಕ್ರೇಜ್ ಅನ್ನು ಹುಟ್ಟಿಸಿಕೊಂಡಿರುವುದು ಒಪ್ಪಬಹುದಾದ ಮಾತು ಆದರೆ ಬಾಲಿವುಡ್ ಚಿತ್ರರಂಗದ ಟಾಪ್ ನಟಿ ಒಬ್ಬರ ಚಿಕ್ಕ ಮಗು ಕೂಡ ಈ ಹಾಡಿಗೆ ಇಷ್ಟೊಂದು ಫಿದಾ ಆಗಿರುವುದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.

ಹೌದು ಮಿತ್ರರೇ ಕರೀನಾ ಕಪೂರ್(Kareena Kapoor) ಅವರ ಎರಡನೇ ಮಗು ಆಗಿರುವ ಜಹಾಂಗೀರ್ ನಾಟು ನಾಟು ಹಾಡು ಹಾಕದಿದ್ದರೆ ಊಟನೇ ಮಾಡೋದಿಲ್ವಂತೆ ಇದನ್ನು ಸ್ವತಹ ಕರಿನ ಕಪೂರ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದು ಕೂಡ ತೆಲುಗುನಲ್ಲಿಯೇ ಇರುವಂತಹ ಹಾಡನ್ನೇ ಆ ಮಗು ಕೇಳಬೇಕಂತೆ. ನಾಟು ನಾಟು ಸಾಂಗ್ ಯಾವ ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂಬುದನ್ನು ಈ ಮೂಲಕ ನೀವು ಅಂದಾಜಿಸಬಹುದಾಗಿದೆ.

Leave a Comment

error: Content is protected !!