ವರಾಹ ರೂಪ್ಂ ಹಾಡನ್ನು ಕದಿದ್ದು ನಿಜಾ ನಾ ಇಲ್ಲಿದೆ ನೋಡಿ ಆ ಎರಡು ಕದ್ದ ಹಾಡುಗಳ ತುಣುಕು.

ಕಾಂತಾರ ಸಿನಿಮಾ ಬಿಡುಗಡೆ ಆದ ದಿನದಿಂದಲೂ ಕೂಡ ವೇಗವನ್ನು ತಗ್ಗಿಸದೆ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. 17 ರಿಂದ 19 ಕೋಟಿ ರೂಪಾಯಿ ಬಡ್ಜೆಟ್ ನಲ್ಲಿ ಮೂಡಿ ಬಂದ ಈ ಸಿನಿಮಾ ಅದ್ದೂರಿಯಾಗಿ ಸರಿಸುಮಾರು 300 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಇದುವರೆಗೂ ದೇಶ ವಿದೇಶಗಳಲ್ಲಿ ಪಂಚ ಭಾಷೆಗಳಲ್ಲಿ ಮಾಡಿದೆ ಎಂಬುದಾಗಿ ಸಿನಿಮಾ ಮೂಲಗಳಿಂದ ತಿಳಿದು ಬಂದಿದೆ.

ರಿಷಬ್ ಶೆಟ್ಟಿ ನಾಯಕ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಕುಟುಂಬದ ಸಮೇತ ಚಿತ್ರಮಂದಿರಗಳಲ್ಲಿ ಆನಂದಿಸಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಹಾಗು ತೆಲುಗು ಮತ್ತು ಮಲಯಾಳಂನಲ್ಲಿ ಕೂಡ ದೊಡ್ಡಮಟ್ಟದ ಕಲೆಕ್ಷನ್ ಅನ್ನು ಮಾಡಿದೆ. ಇನ್ನು ಬಾಲಿವುಡ್ ನಲ್ಲಿ ಕೂಡ ದಾಖಲೆ ಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ಕೆಜಿಎಫ್ ಚಾಪ್ಟರ್ 2 ನಂತರದ ದಾಖಲೆಯನ್ನು ಮಾಡಿದೆ.

ಆದರೆ ಇಷ್ಟೆಲ್ಲ ವಿಜಯವನ್ನು ಆನಂದಿಸುವ ಬೆನ್ನಲ್ಲೇ ಕಾಂತಾರಾ ಸಿನಿಮಾ ತಂಡ ಮತ್ತೊಂದು ಸಮಸ್ಯೆಗೆ ಸಿಲುಕ ಬೇಕಾದ ಪರಿಸ್ಥಿತಿಗೆ ಬಂದು ಸಿಕ್ಕಿ ಬಿದ್ದಿತ್ತು. ಹೌದು ಮಿತ್ರರೇ, ಮಲಯಾಳಂ ಮೂಲದ ತೈಕುಡುಂ ಬ್ರಿಡ್ಜ್ ಎನ್ನುವ ಬ್ಯಾಂಡ್ ಕಾಂತರಾ ಸಿನಿಮಾ ನಮ್ಮ ಹಾಡನ್ನು ಕದ್ದಿದೆ ಎನ್ನುವ ಆರೋಪವನ್ನು ಕಾಂತಾರ ಚಿತ್ರತಂಡದ ಮೇಲೆ ಹಾಕಿತು. ಇದು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಗೊಂದಲವನ್ನು ಕೂಡ ಸೃಷ್ಟಿ ಮಾಡಿತು.

ಈ ಬ್ಯಾಂಡ್ ನ ನವರಸನ್ ಎನ್ನುವ ಹಾಡು ಹಾಗೂ ಕಾಂತರಾ ಸಿನಿಮಾದ ವರಾಹ ರೂಪಂ ಹಾಡು ಒಂದೇ ಇದೆ ಎಂಬುದಾಗಿ ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಸ್ ಲೋಕನಾಥ್ ರವರು ರಾಗದ ಛಾಯೆ ಎರಡು ಹಾಡುಗಳಲ್ಲಿ ಒಂದೇ ರೀತಿ ಇದೆ ಹೊರತು ಬಿಟ್ಟರೆ ಹಾಡು ಒಂದೇ ರೀತಿ ಇದೆ ಎಂದು ಹೇಳುವುದು ಸರಿಯಲ್ಲ ಎಂಬುದಾಗಿ ಹೇಳಿದರು. ಈಗಾಗಲೇ ಎರಡು ಹಾಡಿನ ವ್ಯತ್ಯಾಸವನ್ನು ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಲಾಗಿದ್ದು ನೀವು ಕೂಡ ನೋಡಬಹುದಾಗಿದೆ. ಇದನ್ನು ನೋಡಿದ ನಂತರ ನಿಮ್ಮ ಅಭಿಪ್ರಾಯ ಏನೆಂದು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!