ಎರಡು ದಿನದಲ್ಲಿ ಒಟ್ಟಾರೆಯಾಗಿ ಕಾಂತಾರ ಗಳಿಸಿದ್ದಷ್ಟು ಗೊತ್ತಾ?

ರಿಷಬ್ ಶೆಟ್ಟಿ ನಾಯಕ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಕರಾವಳಿಯ ಸಂಸ್ಕೃತಿಯನ್ನು ಕಾಂತಾರ ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ತೋರಿಸಲಾಗಿದೆ. ಕರಾವಳಿ ಮೂಲದ ಸಂಸ್ಕೃತಿಯನ್ನು ಈಗಾಗಲೇ ಕನ್ನಡ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ತೋರಿಸುವಂತಹ ಹಲವಾರು ಪ್ರಯತ್ನಗಳು ಈಗಾಗಲೇ ನಡೆದಿವೆ ನಿಜ. ಆದರೆ ಕಾಂತಾರ ಸಿನಿಮಾ ಅವುಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಈ ಬಾರಿ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಸಹಯೋಗದಲ್ಲಿ ರಿಷಬ್ ಶೆಟ್ಟಿ ಕಾಂತರಾ ಸಿನಿಮಾವನ್ನು ಮಾಡಿದ್ದಾರೆ. ಚಿತ್ರದ ಮೇಕಿಂಗ್ ಸಂಗೀತ ಹಾಗೂ ಕಥೆ ಎಲ್ಲವೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಹಲವಾರು ವರ್ಷಗಳ ಕಾಲ ಹಾಗೆ ಹಸಿರಾಗಿ ಉಳಿಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಸಿನಿಮಾದಲ್ಲಿ ಒಂದು ಸಂದೇಶವನ್ನು ಕೂಡ ಸಮಾಜಕ್ಕೆ ಸಾರಲಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಉತ್ತಮ ಮೌಲ್ಯವನ್ನು ಹೊಂದಿರುವ ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡುತ್ತಿದೆ ಅದರಲ್ಲಿ ಕಾಂತಾರ ಕೂಡ ಅಗ್ರ ಪಂಕ್ತಿಯಲ್ಲಿ ಕಾಣಿಸುತ್ತದೆ.

ಅದರಲ್ಲೂ ವಿಶೇಷವಾಗಿ ಕೋಲ ಮಾಡುವ ಅವತಾರದಲ್ಲಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ ಅವರ ಪಾತ್ರ ಕೊನೆಯ 20 ನಿಮಿಷಗಳಲ್ಲಿ ನಿಜಕ್ಕೂ ಕೂಡ ಅವರ ಜೀವಮಾನ ಶ್ರೇಷ್ಠ ನಟನೆ ಎಂದು ಹೇಳಬಹುದಾಗಿದೆ. ಇದು ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಹಣವನ್ನು ಗಳಿಸುತ್ತದೆ ಎಂದು ನಾವು ಸರಿಯಾಗಿ ಹೇಳದೇ ಇರಬಹುದು ಆದರೆ ಮುಂಬರುವ ದಿನಗಳಲ್ಲಿ ಈ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಹಲವಾರು ಅವಾರ್ಡ್ ಗಳನ್ನು ಖಂಡಿತ ಗೆಲ್ಲುತ್ತಾರೆ.

ಇನ್ನು ಕಾಂತಾರ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡುವುದಾದರೆ ಶುಕ್ರವಾರದಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನ ಎಂಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನ ಅಂದರೆ ವೀಕೆಂಡ್ ಆದ ಇಂದು ಬರೋಬ್ಬರಿ 9.5 ಕೋಟಿ ರೂಪಾಯಿ ಗಳಿಸಿದೆ. ಆ ಪ್ರಕಾರ ಎರಡು ದಿನಗಳ ಒಳಗಡೆಗಾಗಿ ಕಾಂತಾರ ಸಿನಿಮಾ ಭರ್ಜರಿಯಾಗಿ 17.5 ಕೋಟಿ ರೂಪಾಯಿ ಗಳಿಸಿದೆ ಎನ್ನಬಹುದಾಗಿದೆ. ಸಿನಿಮಾದ ಬಗ್ಗೆ ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಅಭಿವ್ಯಕ್ತ ಪಡಿಸಬಹುದಾಗಿದೆ.

Leave a Comment

error: Content is protected !!