400 ಕೋಟಿ ಗಳಿಸಿರುವ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಗುರುವಾ ಪಾತ್ರಕ್ಕೆ ನೀಡಿದ ಸಂಭಾವನೆ ಎಷ್ಟು ಗೊತ್ತಾ? ಪಾಪಾ ಇಷ್ಟೇನಾ

ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾದ ಸಿನಿಮಾ ಈಗಾಗಲೇ ಯಾವ ರೀತಿಯಲ್ಲಿ ದೇಶ ವಿದೇಶಗಳಲ್ಲಿ ಪ್ರತಿಯೊಂದು ಭಾಷೆಯ ಪ್ರೇಕ್ಷಕರನ್ನು ಮನೆಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗುವ ಪ್ರಮೇಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

ಹೌದು ಮಿತ್ರರೇ ಆರಂಭದಲ್ಲಿ ಕೊಂಚಮಟ್ಟಿಗೆ ನಿಧಾನಗತಿಯಲ್ಲಿಯೇ ಆರಂಭವನ್ನು ಪಡೆದುಕೊಂಡ ಕಾಂತರಾ ಈಗ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದ್ದು ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ಬೆಳೆದು ನಿಂತಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದಲ್ಲಿ ಕೆಜಿಎಫ್ ಮೀರಿ ಕಲೆಕ್ಷನ್ ಮಾಡಿರುವುದು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ.

ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಿರುವ ವ್ಯಕ್ತಿಯೊಬ್ಬರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗುರುವ ಪಾತ್ರಧಾರಿ ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಇನ್ನು ಇವರ ನಿಜವಾದ ಹೆಸರು ಸ್ವರಾಜ್ ಶೆಟ್ಟಿ ಎನ್ನುವುದಾಗಿ. ಇನ್ನು ಇವರು ಗುರುವ ಪಾತ್ರಕ್ಕಾಗಿ ಪಡೆದಿರುವ ಸಂಭವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರುವ ಇವರಿಗೆ ಕಾಂತಾರ ಸಿನಿಮಾದಲ್ಲಿ ಅವಕಾಶ ನೀಡಿದ್ದೆ ತುಂಬಾ ಖುಷಿಯಂತೆ. ಇನ್ನು 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಕಾಂತಾರ ಸಿನಿಮಾದಲ್ಲಿ ಸ್ವರಾಜ್ ಶೆಟ್ಟಿ ಅವರಿಗೆ ಸಿಕ್ಕಿರುವುದು ಕೇವಲ ಹತ್ತು ಲಕ್ಷ ಸಂಭಾವನೆಯಂತೆ. ಹೊರಗಿನವರಾಗಿರುವ ನಾವು ಇದನ್ನು ಅತ್ಯಂತ ಕಡಿಮೆ ಸಂಭಾವನೆ ಎಂದು ಹೇಳಬಹುದು ಆದರೆ ಅವರಿಗೆ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಒಂದು ದೊಡ್ಡ ಅನುಭವ ಸಿಕ್ಕಿದೆ ಎಂಬುದಾಗಿ ಹೇಳುತ್ತಾರೆ.

Leave a Comment

error: Content is protected !!