Kantara: ತೆಲುಗಿನಲ್ಲಿ ಪ್ರಭಾಸ್ ಅವರನ್ನೇ ಹಿಂದಕ್ಕಿದ ರಿಷಭ್ ಶೆಟ್ಟಿ. ಯಾವ ವಿಚಾರದಲ್ಲಿ ಗೊತ್ತಾ ಕನ್ನಡಿಗರೇ ಹೆಮ್ಮೆಪಡುವ ಸಂಗತಿ.
Rishab Shetty ಕಾಂತಾರ(Kantara) ಸಿನಿಮಾದ ಬಿಡುಗಡೆಯ ನಂತರ ರಿಶಭ್ ಶೆಟ್ಟಿಯವರ ಅದೃಷ್ಟವೇ ಬದಲಾಗಿ ಹೋಗಿದೆ ಎಂದು ಹೇಳಬಹುದು. ಸ್ವತಃ ರಿಶಭ್ ಶೆಟ್ಟಿ ಅವರಿಗೂ ಕೂಡ ಈ ಸಿನಿಮಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಪಡೆಯುತ್ತದೆ ಎನ್ನುವ ಕನಸು ಕೂಡ ಬಿದ್ದಿರಲಿಲ್ಲ ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡಿದೆ. 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿಬಂದ ಈ ಸಿನಿಮಾ 450ಕೋಟಿಗೂ ಅಧಿಕ ಗಳಿಕೆಯನ್ನು ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದೆ.
ಹೊಂಬಾಳೆ ಫಿಲ್ಮ್ಸ್(Hombale Films) ಸಂಸ್ಥೆಯ ನಿರ್ಮಾಣದಲ್ಲಿ ಮೂಡಿ ಬಂದಿದೆ ಅಂದ್ಮೇಲೆ ಕೇಳ್ಬೇಕಾ ಸಿನಿಮಾ ಪರದೆಯ ಮೇಲೆ ಕೂಡ ಸಖತ್ ರಿಚ್ ಆಗಿ ಮೂಡಿಬಂದಿದೆ. ಕನ್ನಡದಿಂದ ಪ್ರಾರಂಭವಾಗಿ ತಮಿಳು ತೆಲುಗು ಹಿಂದಿ ಮಲಯಾಳಂ ಇಷ್ಟೇ ಯಾಕೆ ವಿದೇಶಿಗರು ಕೂಡ ಕಾಂತಾರ ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ. ದೈವಿಕ ಕಳೆಯನ್ನು ಹೊಂದಿದ್ದರೂ ಕೂಡ ಮನೋರಂಜನೆಯ ವಿಚಾರದಲ್ಲಿ ಕಾಂತಾರ ಸಿನಿಮಾ ಯಾರಿಗೇನೂ ಕಮ್ಮಿ ಇಲ್ಲದಂತೆ ಗೆದ್ದು ಬೀಗಿದೆ. ಪ್ರತಿಯೊಂದು ವರ್ಗದ ಪ್ರೇಕ್ಷಕರು ಕೂಡ ನೋಡುವಂತಹ ಸಿನಿಮಾ ಇದಾಗಿತ್ತು.

ಇನ್ನು ಪರಭಾಷೆಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಈ ಸಿನಿಮಾ ತೆಲುಗಿನ ಸ್ಟಾರ್ ನಟ ಆಗಿರುವ ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಸಿನಿಮಾದ ದಾಖಲೆಯನ್ನು ಅಳಿಸಿ ಹಾಕಿದೆ. ಹೌದು ಮಿತ್ರರೇ, ರಿಷಬ್ ಶೆಟ್ಟಿ(Rishab Shetty) ನಟನೆಯ ಕಾಂತಾರ ಸಿನಿಮಾ ಪ್ರಭಾಸ್(Prabhas) ಅವರ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಸಿನಿಮಾ ಆಗಿರುವ ರಾಧೇಶ್ಯಾಮ್(Radhe Shyam) ಚಿತ್ರದ ಟಿ ಆರ್ ಪಿ ರೇಟಿಂಗ್(TRP Rating) ಅನ್ನು ಮುರಿದು ಬಿಸಾಕಿದೆ. ರಾಧೇಶ್ಯಾಮ್ ಚಿತ್ರ ಹನ್ನೊಂದರ ಆಸುಪಾಸಿನಲ್ಲಿ ರೇಟಿಂಗ್ ಅನ್ನು ಪಡೆದಿತ್ತು.
ಆದರೆ ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಸೆನ್ಸೇಷನ್ ಸಿನಿಮಾ ಕಾಂತಾರ ಮಾತ್ರ ತೆಲುಗಿನಲ್ಲಿ ಅದಕ್ಕೂ ಮಿಗಿಲಾದ ರೇಟಿಂಗ್ ಅನ್ನು ಪಡೆಯುವ ಮೂಲಕ ತೆಲುಗಿನ(Telugu) ಕಿರುತೆರೆ ಪ್ರೇಕ್ಷಕರ ಪ್ರೀತಿಯನ್ನು ಕೂಡ ಸಂಪಾದಿಸಿದೆ. ಅದರಲ್ಲೂ ಪ್ರಭಾಸ್ ಅವರ ದಾಖಲೆಯನ್ನು ಮುರಿಯುವುದು ಎಂದರೆ ಖಂಡಿತವಾಗಿ ಚಿಕ್ಕ ಮಾತಲ್ಲ. ಹೇಗಿದ್ದರೂ ಕೂಡ ಕಷ್ಟದ ಕೆಲಸವನ್ನು ಸಾಧಿಸಿ ತೋರಿಸಿರುವ ಕಾಂತಾರ ಹಾಗೂ ರಿಷಬ್ ಶೆಟ್ಟಿ ಮತ್ತು ಚಿತ್ರತಂಡದವರಿಗೆ ಅಭಿನಂದನೆಗಳನ್ನು ಕೋರಲೇಬೇಕಾಗುತ್ತದೆ. ಇವಾಗ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.