ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ಅವರ ಒಟ್ಟು ಆಸ್ತಿಯ ವಿಚಾರ ಕೇಳಿದರೆ ನೀವು ಕಣ್ಣಗಲಿಸಿ, ಬಾಯಮೇಲೊಂದು ಬೆರಳಿಡುತ್ತೀರಾ!!! ಇವರ ಆಸ್ತಿ ಕೋಟಿಗಿಂತ ಹೆಚ್ಚು…

ತಾರಾ ಅವರು 1984 ರಲ್ಲಿ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡು, 1986ರಲ್ಲಿ ತುಳಸಿ ದಳ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಇವರ ನಟನೆಗೆ ಮೆಚ್ಚಿ ನಿರ್ದೇಶಕರು, ನಿರ್ಮಾಪಕರು ಇವರಿಗಾಗಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಮುಂಜಾನೆಯ ಮಂಜು, ಮುನ್ನುಡಿ, ಕಾನೂರು ಹೆಗ್ಗಡಿತಿ, ಸೈನೈಡ್, ಈ ಬಂಧನ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬೆಸ್ಟ್ ಆಕ್ಟ್ರೆಸ್ ಆಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಅನ್ನು ಪಡೆದಿದ್ದಾರೆ.

2012ರಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. ಅದೇ ವರ್ಷ ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ ನ ಸದಸ್ಯರಾಗಿ ನಾಮಿನೇಟ್ ಆಗುತ್ತಾರೆ. ರಾಜಕುಮಾರ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ದೇವರಾಜ್, ಶಶಿಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ನಟರೊಂದಿಗೆ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ರಾಜ ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಶೋ ಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಮನೆಮಂದಿಗೆಲ್ಲ ಹತ್ತಿರವಾಗಿದ್ದಾರೆ.

ನಾಯಕಿಯಾಗಿ, ತಾಯಿಯಾಗಿ, ಪೋಷಕ ನಟಿಯಾಗಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ದೊಡ್ಡ ಅಭಿಮಾನಿ ಬಳಗವಿದೆ.ಉಳಿದವರು ಕಂಡಂತೆ ಚಿತ್ರದಲ್ಲಿ ‘ತಾಯಿಯ ಅಪ್ಪುಗೆ ಬೆಳೆದ ಮರವಾಗಿ’ ಎಂಬ ಹಾಡಿನಲ್ಲಿ ಪ್ರತಿಬಿಂಬಿಸುವಂತೆ ಅಗಾಧ ಪ್ರೀತಿಯನ್ನು ಹೊಂದಿದ ತಾಯಿಯ ಪಾತ್ರಕ್ಕೆ ತಾರಾ ಅವರ ಅಭಿನಯ ಕನ್ನಡಿಗರು ಎಂದು ಮರೆಯಲಾಗದ್ದು.

1971 ಮಾರ್ಚ್ ನಾಲ್ಕರಂದು ಮೈಸೂರಿನಲ್ಲಿ ಜನಿಸಿ, ಅನುರಾಧಳಾಗಿ ಚಿತ್ರರಂಗಕ್ಕೆ ಕಾಲಿಟ್ಟು, ತಾರಾ ಎಂದೇ ಜನಪ್ರಿಯರಾಗಿರುವ ಇವರು 2005ರಲ್ಲಿ ಸಿನೆಮಾಟೋಗ್ರಾಫರ್ ಹೆಚ್ ಸಿ ವೇಣುಗೋಪಾಲ್ ಅವರನ್ನು ವಿವಾಹವಾಗಿದ್ದಾರೆ. ಶ್ರೀಕೃಷ್ಣ ಎಂಬ ಮುದ್ದಿನ ಮಗನು ಇದ್ದಾನೆ.

ಹಲವಾರು ಭಾಷೆಗಳ ಚಿತ್ರಗಳಲ್ಲಿ ನಟಿಸಿ, ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡು ಫೇಮಸ್ ಆಗಿರುವ ನಟ ನಟಿಯರ ಆಸ್ತಿ ವಿವರಗಳ ಬಗ್ಗೆ ಅಭಿಮಾನಿಗಳು ಕುತೂಹಲ ತೋರಿಸುವುದು ಹೊಸ ವಿಷಯವೇನಲ್ಲ. ನಟಿ ತಾರಾ ಅವರು ತಮ್ಮ ಹುಟ್ಟುರಾದ ಮೈಸೂರಿನಲ್ಲಿ ಒಂದು ಸುಂದರ ಮನೆಯನ್ನು ಹೊಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ವಾಸಿಸಲು ಒಂದು ಮನೆಯನ್ನು ಹೊಂದಿದ್ದಾರೆ. ಓಡಾಟಕ್ಕಾಗಿ ಎರಡು ಕಾರುಗಳಿವೆ. ತಾರಾ ಹಾಗೂ ಅವರ ಪತಿ ವೇಣುಗೋಪಾಲ್ ಅವರ ಕೆಲಸ ಕಾರ್ಯಗಳಿಂದ ಬರುವ ಆದಾಯ, ಜಾಗ, ಮನೆ, ವಾಹನ ಎಲ್ಲವನ್ನು ಒಟ್ಟರೆಯಾಗಿ ಲೆಕ್ಕ ಹಾಕಿದಾಗ ಈ ದಂಪತಿಯ ಆಸ್ತಿಯು ಸುಮಾರು 9 ರಿಂದ 10 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ.

Leave a Comment

error: Content is protected !!