ಕಾಲೇಜು ವಿದ್ಯಾರ್ಥಿಯೊಬ್ಬ ನಿಮ್ಮ ಮದುವೆ ಯಾವಾಗ ಮೇಡಂ ಎಂದು ಪ್ರಶ್ನಿಸಿದಾಗ ನಟಿ ರಮ್ಯಾ ನೀಡಿದ ಕುತೂಹಲಕಾರಿ ಉತ್ತರವೇನು?

ಮೋಹಕ ತಾರೆ ನಟಿ ರಮ್ಯಾ ಅವರು ಚಿತ್ರರಂಗದಿಂದ ಕೊಂಚವೆ ದೂರವಿದ್ದು, ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸುಂದರವಾದ ಕಣ್ಣು ಮತ್ತು ನಗುಮುಖದಿಂದಲೇ ಎಲ್ಲರನ್ನೂ ಆಕರ್ಷಿಸುವ ರಮ್ಯಾ ಕಾಲೇಜ್ ಒಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಕೆಲಸಮಯ ಸಂಭಾಷಣೆ ಮಾಡುತ್ತಾ ಖುಷಿಯಿಂದ ಕಾಲ ಕಳೆದರು.

ಅದೇ ವೇಳೆಯಲ್ಲಿ ಮದುವೆಯ ಕುರಿತಾಗಿಯೂ ಮಾತನಾಡಿದ್ದಾರೆ. ರಮ್ಯಾ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ವಿದ್ಯಾರ್ಥಿ ಒಬ್ಬ ನೇರವಾಗಿ ಮದುವೆ ವಿಚಾರವಾಗಿ ಪ್ರಶ್ನಿಸಿದ್ದಾನೆ. ಆತ ಕೇಳಿದ ಪ್ರಶ್ನೆಗಳಿಗೆ ರಮ್ಯಾ ಅವರು ಪಟಪಟ ಅಂತ ಉತ್ತರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಮದುವೆಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ರಮ್ಯಾ ಅವರು ತಿಳಿಸಿದ್ದಾರೆ.

Actress ramya about her marraige
Actress ramya about her marraige

ರಮ್ಯಾ ಅವರು ವೇದಿಕೆಯಲ್ಲಿ ನಿಂತಿದ್ದಾಗ ಹುಡುಗನೊಬ್ಬ ‘ನಿಮ್ಮ ಮದುವೆ ಯಾವಾಗ ಮೇಡಂ?’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ರಮ್ಯಾ ಅವರು ನಗುನಗುತ್ತಲೆ ‘ನೀವೇನು ಸಿಂಗಲ್ ಆಗಿದ್ದೀರಾ?’ ಅಂತ ಪ್ರಶ್ನೆಸಿದ್ದಾರೆ. ಅಲ್ಲದೆ ಮಾತು ಮುಂದುವರಿಸಿ ‘ಮದುವೆಯನ್ನು ಯಾಕಾಗಿ ಆಗಬೇಕು ಅಂತ ಅರ್ಥ ಆಗೋದಿಲ್ಲ ನನಗೆ’ ಎಂದಿದ್ದಾರೆ. ಆ ಹುಡುಗನು ಇದಕ್ಕೆ ಪ್ರತಿಯಾಗಿ ‘ನೀವು ಮದುವೆಯಾಗಬೇಡಿ ಮೇಡಂ; ಅದೇ ನಮಗೆ ಬೇಕಾಗಿರೋದು’ ಎಂದು ನಕ್ಕಿದ್ದಾನೆ.

‘ಮದುವೆಯಾಗಬೇಕೋ, ಬೇಡವೋ ಎಂಬ ಪ್ರಶ್ನೆ ಬಂದಾಗ ಎರಡು ಆಯ್ಕೆಗಳಿರುತ್ತವೆ.. ಒಂದು ಮದುವೆಯಾಗಬೇಕು ಇನ್ನೊಂದು ಖುಷಿಯಾಗಿರಬೇಕು ಅದಕ್ಕಾಗಿ ನಾನು ಈವರೆಗೂ ಖುಷಿಯಾಗಿ ಇರಬೇಕೆಂಬುದನ್ನೇ ಆಯ್ದುಕೊಂಡಿರುವೆ. ನನಗೆ ಮೊದಲೇ ಗೊತ್ತಿತ್ತು; ನೀವ್ ಈ ಪ್ರಶ್ನೆಯನ್ನು ಕೇಳಿಯೇ ಕೇಳುತ್ತೀರಾ ಎಂದು..ಒಬ್ಬ ಮಹಿಳೆಯಾಗಿ ನಾನು ಹೇಳುವುದು, ನಮಗೆ ಹಣಕಾಸು ಸ್ವಾತಂತ್ರ್ಯ ಮತ್ತು ಶಿಕ್ಷಣ ಜೀವನಕ್ಕೆ ಅತ್ಯಗತ್ಯ’ ಎಂದು ರಮ್ಯಾ ಅವರು ಹೇಳಿದ್ದಾರೆ.

ಅಲ್ಲದೆ ಮಾತನಾಡುತ್ತಾ ‘ನಿಮಗೆ ಒಳ್ಳೆಯ ಸೋಲ್ ಮೇಟ್ ಸಿಕ್ಕಿದರೆ ಖಂಡಿತ ಮದುವೆಯಾಗಿ, ಖುಷಿಖುಷಿಯಾಗಿರಿ..ಆದರೆ ಯಾರದೇ ಒತ್ತಾಯಕ್ಕಾಗಲಿ, ಪ್ರೀತಿ ಒಂದನ್ನು ಬಿಟ್ಟು ಬೇರಾವ ಕಾರಣಕ್ಕಾಗಿಯೂ ಮದುವೆಯಾಗಬೇಡಿ. ಈವರೆಗೂ ನನಗೆ ಯಾರು ಸಿಕ್ಕಿಲ್ಲ; ಅದಕ್ಕಾಗಿ ನಾನು ಮದುವೆಯಾಗಿಲ್ಲ. ಸಿಕ್ಕಿದರೆ ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ’ ಎಂದು ನಗುತ್ತಲೇ ರಮ್ಯಾ ಅವರು ಹೇಳಿದ್ದಾರೆ.


ಸದ್ಯ ರಮ್ಯಾ ಅವರು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಸೆಟ್ಟೇರಲಿದೆ. ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಚಿತ್ರವು ತೆರೆ ಕಾಣಲು, ಅಭಿಮಾನಿಗಳು ಕಾದು ಕುಳಿತಿದ್ದಾರೆ. ಸಿರಿ ರವಿಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ರಮ್ಯಾ ಅವರು ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಕೂಡ ವಿದ್ಯಾರ್ಥಿಗಳೊಂದಿಗೆ ಆಕ್ಟಿವ್ ಆಗಿ, ನಗುನಗುತ್ತಾ ಸಂಭಾಷಣೆಯನ್ನು ನಡೆಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೀವ್ಸ್ ಪಡೆಯುತ್ತಿದೆ.

Leave a Comment

error: Content is protected !!