ಕೆ ಜಿ ಎಫ್ ಚಿತ್ರವನ್ನು ಹಿಂದಿಕ್ಕಿದ ಕಾಂತಾರ ಚಿತ್ರವು ಹೊರದೇಶಗಳಲ್ಲಿ ತೆರೆಕಂಡು ಗಳಿಸಿದ ಹಣವೆಷ್ಟು ಗೊತ್ತಾ ?

ಕಾಂತಾರ ಚಿತ್ರವು ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಸಿನಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಾ, ಪ್ರತಿ ಚಿತ್ರಮಂದಿರಗಳಲ್ಲಿ ಒಂದು ಸೀಟ್ ಖಾಲಿ ಬಿಡದಂತೆ ಓಡುತ್ತಿದೆ. ಕನ್ನಡ ಭಾಷೆವೊಂದರಲ್ಲೇ ಎಷ್ಟೊ ದಶಕ ಸಾವಿರ ಮಂದಿ ಚಿತ್ರವನ್ನು ನೋಡಿ ಹೊಗಳಿದ್ದಾರೆ. ಕನ್ನಡದಲ್ಲಿ ಭಾರಿ ಸಕ್ಸಸ್ ಕಂಡ ಈ ಚಿತ್ರವನ್ನು ದೇಶದ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡುವ ಕಾರ್ಯವನ್ನು ಹೊಂಬಾಳೆ ಫಿಲಂಸ್ ಮಾಡಲಿದೆ.

ಕನ್ನಡಿಗರು ಕರ್ನಾಟಕಕ್ಕೆ ಮಾತ್ರವೇ ಸೀಮಿತವಲ್ಲ. ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ಬೇರೆ ಬೇರೆ ಉದ್ದೇಶಗಳೊಂದಿಗೆ ವಿದೇಶಗಳಲ್ಲಿ ನೆಲೆಸಿರುವವರು ತುಂಬಾ ಜನರಿದ್ದಾರೆ. ಹಲವಾರು ಮಂದಿ ತಮ್ಮ ನೆಚ್ಚಿನ ನಾಯಕನಟನ ಚಿತ್ರವನ್ನು ನೋಡಲು ಕಾಯುತ್ತಿರುತ್ತಾರೆ. ಒಳ್ಳೆ ರೇಟಿಂಗ್ಸ್ ನೊಂದಿಗೆ ಸುದ್ದಿ ಆಗಿರುವ ಚಿತ್ರವನ್ನು ವಿದೇಶಗಳಲ್ಲಿ ನೆಲೆಸಿದ್ದರೂ ಕೂಡ ನೋಡಿ ಆನಂದಿಸುತ್ತಾರೆ.

ಹೊಂಬಾಳೆ ಫಿಲಂಸ್ ವಿಭಿನ್ನ ಕಥೆಯನ್ನು ಆರಿಸಿ, ಚಿತ್ರವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಕೆಜಿಎಫ್, ಕೆಜಿಎಫ್ 2 ನ ನಂತರ ಮತ್ತೊಮ್ಮೆ ಎಲ್ಲಾ ಫಿಲಂ ಇಂಡಸ್ಟ್ರಿಗಳು ಕನ್ನಡ ಚಿತ್ರರಂಗದತ್ತ ತಲೆಯೆತ್ತಿ ನೋಡುವಂತೆ ಮಾಡಿದ ಚಿತ್ರವೆಂದರೆ ಕಾಂತಾರ. ಇವರ ಎಲ್ಲಾ ಹಿಟ್ ಚಿತ್ರಗಳ ಗಳಿಕೆಯಂತೆ ಕಾಂತಾರವು ಕೋಟಿ ಕೋಟಿ ಗಳಿಸುತ್ತಿದೆ. ಅದೆಷ್ಟೋ ಮಂದಿ ಕಾಂತಾರ ಚಿತ್ರದ ಕೊನೆಯ ಅರ್ಧ ಗಂಟೆಯನ್ನು ನೋಡಿ ಆನಂದಿಸಲು ಪುನಃ ಪುನಃ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಈ ಚಿತ್ರವು ಇಷ್ಟೊಂದು ಯಶಸ್ಸುಗಳಿಸುತ್ತದೆ ಎಂದು ಚಿತ್ರತಂಡವು ಕೂಡ ಊಹಿಸಿರಲಿಲ್ಲವಂತೆ. ಸಾಮಾಜಿಕ ಜಾಲತಾಣಗಳಲ್ಲಿ ನಟ-ನಟಿಯರ, ಸಹಕಲಾವಿದರ, ಕೆಲಸಗಾರರ ಸಂದರ್ಶನಗಳು ಕೂಡ ಹೆಚ್ಚೆಚ್ಚು ವೀವ್ಸ್ ಪಡೆದಿದೆ. ಪ್ರತಿ ಸಂದರ್ಶನಗಳಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರಂತೆ.

ಕಾಂತಾರ ಚಿತ್ರವು ಬಿಗ್ ಬಜೆಟ್ ನಲ್ಲಿ ನಿರ್ಮಿಸಿದ ಪ್ಯಾನ್ ಇಂಡಿಯಾ ಸಿನಿಮಾವಂತು ಖಂಡಿತವಾಗಿಯೂ ಅಲ್ಲ. ಹತ್ತರಿಂದ ಹನ್ನೆರಡು ಕೋಟಿ ವೆಚ್ಚದಲ್ಲಿ ತಯಾರಾದ ದಂತಕಥೆ. ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಕಾಂತಾರವು ಸುದ್ದಿಯಾಗಿದೆ. ವಿದೇಶಗಳಲ್ಲಿಯೂ ಕೋಟಿ ಕೋಟಿ ಹಣ ಗಳಿಸುತ್ತಿದೆ ಎಂದರೆ ಇದು ಕನ್ನಡ ಚಿತ್ರರಂಗದ ಹೆಮ್ಮೆಯೆ ಸರಿ. ದೈವದ ಆಶೀರ್ವಾದವೆಂಬಂತೆ ಚಿತ್ರತಂಡಕ್ಕೆ ಮತ್ತು ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಗೆ ಕೀರ್ತಿ ತಂದುಕೊಟ್ಟಿದೆ. ಒಂದು ವಾರದಲ್ಲೇ 50 ಕೋಟಿಯ ಗಡಿ ದಾಟಿಸಿದ ಈ ಚಿತ್ರವು ಹೊರದೇಶಗಳಲ್ಲಿ ಕನ್ನಡದಲ್ಲಿಯೇ ತೆರೆಕಾಣುತ್ತಿದೆ. ಯುಎಸ್, ಆಸ್ಟ್ರೇಲಿಯಾ, ಜರ್ಮನಿ, ಯುಕೆ ಸೇರಿದಂತೆ ಹಲವು ದೇಶಗಳಲ್ಲಿ ಬಿತ್ತರವಾದ ಕಾಂತಾರ ಚಿತ್ರವು ಬರೋಬ್ಬರಿ 6.65 ಕೋಟಿಗಳಷ್ಟು ಕಲೆಕ್ಷನ್ ಮಾಡಿದೆಯಂತೆ. ಭರ್ಜರಿ ಸಕ್ಸಸ್ ಕಂಡ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಗೋಲ್ಡನ್ ಸಿನಿಮಾ ಎನ್ನಬಹುದು.

Leave a Comment

error: Content is protected !!