Puneeth Rajkumar ಅಪ್ಪು ಬರ್ತಡೇಗೆ ಗಿಫ್ಟ್ ನೀಡಲು ಮುಂದಾದ ಕಿಚ್ಚ ಹಾಗೂ ಉಪ್ಪಿ.

Sandalwood News ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಕರ್ನಾಟಕ ರತ್ನ ಹಾಗೂ ಬೆಟ್ಟದ ಹೂವು ಎಂಬುದಾಗಿ ಕರೆಯಲ್ಪಡುತ್ತಿದ್ದ ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ ಆಗಲಿ ಒಂದು ವರ್ಷಕ್ಕೂ ಅಧಿಕಕಾಲ ಮೀರಿದ್ದರು ಕೂಡ ಇಂದಿಗೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಇನ್ನು ಅವರ ಅಭಿಮಾನಿಗಳು ಅವರಿಲ್ಲ ಎನ್ನುವ ಭಾವನೆಯನ್ನು ಎಂದಿಗೂ ಕೂಡ ತಮ್ಮ ಕನಸಿನಲ್ಲಿ ಕೂಡ ಕಂಡಿಲ್ಲ. ಸೂರ್ಯ ಚಂದ್ರನಿರುವ ತನಕ ಅವರನ್ನು ಜೀವಂತವಾಗಿರಿಸಿಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಾರೆ.

ಇನ್ನು ಪ್ರತಿ ವರ್ಷ ಅವರು ಜೀವಂತ ಆಗಿದ್ದಾಗಲೂ ಹಾಗೂ ಈಗಲೂ ಕೂಡ ಅವರ ಅಭಿಮಾನಿಗಳು ಮಾರ್ಚ್ 17ರಂದು ಅವರ ಜನ್ಮ ಜಯಂತಿಯನ್ನು(Birth Anniversary) ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆ ಎನ್ನುವುದು ಕಿಚ್ಚ ಹಾಗೂ ಉಪ್ಪಿಯ ಕಾರಣದಿಂದಾಗಿ ವಿಶೇಷವಾಗಿ ನಡೆಯಲಿದೆ ಎಂದು ಹೇಳಬಹುದಾಗಿದೆ. ನಾವು ಹೀಗೆ ಹೇಳುವುದಕ್ಕೆ ಕೂಡ ಒಂದು ವಿಶೇಷವಾದ ಕಾರಣವಿದೆ. ಹಾಗಿದ್ದರೆ ಬನ್ನಿ ಅದೇನೆಂಬುದನ್ನು ತಿಳಿದುಕೊಳ್ಳೋಣ.

puneeth rajkumar

ಹೌದು ಗೆಳೆಯರೇ ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುಭಾಷಾ ಬಿಡುಗಡೆಯನ್ನು ಕಾಣಲಿರುವ ಕಬ್ಜಾ ಸಿನಿಮಾ ಇದೇ ವರ್ಷದ ಮಾರ್ಚ್ 17 ರಂದು ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮ ದಿನಾಚರಣೆಯ ದಿನದಂದೆ ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ(Theatres) ಬಿಡುಗಡೆಯಾಗಲಿದೆ.

ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿದುಕೊಳ್ಳಲು ಪ್ರತಿಯೊಬ್ಬ ಸಿನಿಮಾ ಅಭಿಮಾನಿಯೂ ಕೂಡ ಹಲವಾರು ವರ್ಷಗಳಿಂದ ಕಾತರಾಗಿ ಕಾಯುತ್ತಿದ್ದರೂ ಕೊನೆಗೂ ಈ ದಿನಾಂಕದ ಘೋಷಣೆ ಆಗಿಯೇ ಬಿಟ್ಟಿದೆ. ಅದರಲ್ಲೂ ವಿಶೇಷವಾಗಿ ಅಪ್ಪು ಅವರ ಬರ್ತಡೆಯ(Birthday) ದಿನದಂದೇ ಈ ಸಿನಿಮಾ ಬಿಡುಗಡೆಯ ಯೋಜನೆಯನ್ನು ಹಾಕಿಕೊಂಡಿರುವುದು ಕೇವಲ ಕಿಚ್ಚ ಹಾಗೂ ಉಪ್ಪಿ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಅಪ್ಪು ಅವರ ಅಭಿಮಾನಿಗಳಲ್ಲಿ ಕೂಡ ಸಂತೋಷವನ್ನು ತರಿಸಿದೆ. ಕಬ್ಜಾ ಸಿನಿಮಾದ ಬಿಡುಗಡೆಯ ದಿನಾಂಕದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!