Kabzaa: ಕಿಚ್ಚ ಹಾಗೂ ಉಪ್ಪಿ ಅಭಿಮಾನಿಗಳಿಗೆ ಶಾ’ ಕ್ ನೀಡಲು ಹೊರಟ ಕಬ್ಜಾ ಚಿತ್ರತಂಡ!

Kabzaa ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಬರುವುದು ಕಡಿಮೆಯಾಗಿಬಿಟ್ಟಿದೆ. ಸಾಕಷ್ಟು ವರ್ಷಗಳ ಹಿಂದೆ ದಿ ವಿಲನ್(The Villain) ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕಾಣಿಸಿಕೊಂಡಿದ್ದೆ ಕೊನೆಯ ಬಾರಿಗೆ ಎಂದನಿಸುತ್ತೆ. ಅದಾದ ಮೇಲೆ ಹೇಳುವಷ್ಟು ದೊಡ್ಡ ಮಟ್ಟಿಗೆ ಮಲ್ಟಿ ಸ್ಟಾರರ್ ಸಿನಿಮಾ ಯಾವುದು ಕೂಡ ಕನ್ನಡದಲ್ಲಿ ಬಂದಿಲ್ಲ. ಆದರೆ ಈಗ ಅಭಿಮಾನಿಗಳನ್ನು ಖುಷಿ ಪಡೋ ವಿಚಾರ ಕೇಳಿ ಬಂದಿದ್ದು ಕಬ್ಜಾ ಬಹುತಾರಗಣ ಹೊಂದಿರುವಂತಹ ಸಿನಿಮಾ.

ಹೌದು ಗೆಳೆಯರೆ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ನಟಿಸಿರುವ ಕಬ್ಜಾ(Kabzaa) ಸಿನಿಮಾ ಇದೇ ಮಾರ್ಚ್ 17ಕ್ಕೆ ಬಿಡುಗಡೆಯಾಗಲು ಸಜ್ಜಾಗಿತ್ತು. ಈ ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಸಿನಿಮಾದಲ್ಲಿ ಶ್ರೇಯ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸುದ್ದಿಗಳ ಪ್ರಕಾರ ಶಿವಣ್ಣ(Shivanna) ಕೂಡ ಈ ಸಿನಿಮಾದಲ್ಲಿ ಅತಿದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಮಾರ್ಚ್ 17ಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಜನ್ಮದಿನದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಜ್ಜಾಗಿ ನಿಂತಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡುವಂತಹ ಒಂದು ಘೋಷಣೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಹೌದು ಗೆಳೆಯರೇ ಮಾರ್ಚ್ 17ಕ್ಕೆ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಆಗಬೇಕಾಗಿದ್ದ ಉಪೇಂದ್ರ ಶಿವಣ್ಣ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜಾ ಸಿನಿಮಾ(Kabzaa Film) ತನ್ನ ಬಿಡುಗಡೆಯ ದಿನಾಂಕವನ್ನು ಮುಂದೂಡಲಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ಬಿಡುಗಡೆಯ ದಿನಾಂಕ ಚಿತ್ರತಂಡದಿಂದಲೇ ಅಧಿಕೃತವಾಗಿ ಹೊರಬರುವ ಸಾಧ್ಯತೆಯಿದ್ದು ಬಿಡುಗಡೆ ದಿನಾಂಕ ಮುಂದುವರೆಯಲು ನಿಜಕ್ಕೂ ಇರುವಂತಹ ಕಾರಣವೇನು ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ.

Leave a Comment

error: Content is protected !!