Kabzaa: ಸುಳ್ಳು ಹೇಳ್ತಾ ಇದ್ಯಾ ಕಬ್ಜಾ ತಂಡ?ಪ್ರೇಕ್ಷಕರಲ್ಲಿ ಅಸಮಧಾನ!

Kabzaa ಆರ್ ಚಂದ್ರು(R Chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಪಂಚಭಾಷಾ ಸಿನಿಮಾ ಆಗಿರುವ ಕಬ್ಜಾ ಈಗಾಗಲೇ ದೇಶ ವಿದೇಶಗಳಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ಕುರಿತಂತೆ ಈಗ ಅಪಸ್ವರ ಎನ್ನುವಂತಹ ಒಂದು ವಿಚಾರ ಹೊರಗೆ ಬಂದಿದ್ದು ಪ್ರತಿಯೊಬ್ಬರು ಕೂಡ ಇದರ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇನೆಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಮೊದಲನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಬ್ಜಾ ಸಿನಿಮಾವನ್ನು ಪ್ರತಿಯೊಬ್ಬರೂ ಕೂಡ ಕೆಜಿಎಫ್(KGF) ಸಿನಿಮಾ ಗೆ ಕಂಪೇರ್ ಮಾಡುತ್ತಿದ್ದಾರೆ. ಕೇವಲ ಕಂಪೇರ್ ಮಾಡುವುದು ಮಾತ್ರವಲ್ಲದೆ ಕಥೆಯನ್ನು ಕೂಡ ಅದೇ ಸಿನಿಮಾದಿಂದ ಕಾಪಿ ಮಾಡಿದ್ದಾರೆ ಎನ್ನುವುದಾಗಿ ಕೂಡ ಹೇಳುತ್ತಿದ್ದಾರೆ. ಇದರ ಜೊತೆಗೆ ಈಗ ಮತ್ತೊಂದು ವಿಚಾರ ಕೂಡ ಪ್ರೇಕ್ಷಕರಿಗೆ ಸಿನಿಮಾ ತಂಡ ಸುಳ್ಳು ಹೇಳುತ್ತಿದೆ ಎನ್ನುವ ರೀತಿಯಲ್ಲಿ ಭಾವನೆ ಮೂಡುವಂತೆ ಮಾಡಿದೆ.

ಅದೇನೆಂದರೆ ಕಲೆಕ್ಷನ್ ವಿಚಾರ. ರಿಯಲ್ ಸ್ಟಾರ್ ಉಪೇಂದ್ರ(Upendra) ಅವರ ಜೊತೆಗೆ ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್(Kiccha Sudeep) ಹಾಗೂ ಶಿವಣ್ಣ(Shivanna) ಕೂಡ ಕಾಣಿಸಿಕೊಂಡಿದ್ದು ಮೊದಲನೇ ದಿನದ ಕಲೆಕ್ಷನ್ ಅನ್ನು ನಂಬಬಹುದಾಗಿತ್ತು. ಆದರೆ ಸಿನಿಮಾ ತಂಡ ಈಗ ಎರಡು ದಿನದ ಒಟ್ಟಾರೆ ಕಲೆಕ್ಷನ್ ಅನ್ನು ಬಹಿರಂಗಪಡಿಸಿದ್ದು ಎಲ್ಲರೂ ಕೂಡ ಇದು ಸುಳ್ಳು ಎಂಬುದಾಗಿ ವಾದಿಸುತ್ತಿದ್ದಾರೆ. ಅಷ್ಟಕ್ಕೂ ಎರಡು ದಿನದಲ್ಲಿ ಕಬ್ಜಾ ಚಿತ್ರತಂಡ ಕಲೆಕ್ಷನ್ ಮಾಡಿರುವ ಹಣ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಕಬ್ಜಾ(Kabzaa) ಚಿತ್ರ ತಂಡ ಅಧಿಕೃತವಾಗಿ ಹಂಚಿಕೊಂಡಿರುವಂತಹ ಪೋಸ್ಟರ್ ಪ್ರಕಾರ ಕಬ್ಜಾ ಸಿನಿಮಾ ಎರಡು ದಿನದಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ ಎಂಬುದಾಗಿ ಹೇಳಿದ್ದು ಇದು ತರ್ಕಕ್ಕೆ ಸಿಗದ ಲೆಕ್ಕ ಎಂಬುದಾಗಿ ಪ್ರತಿಯೊಬ್ಬರೂ ಕೂಡ ವಾದಿಸುತ್ತಿದ್ದು ಸಿನಿಮಾ ಪಂಡಿತರು ಕೂಡ ಇದೇ ವಾದವನ್ನು ಮಂಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!