Kaatera: ಡಿಬಾಸ್ ನಟನೆಯ ಕಾಟೇರ ಸಿನಿಮಾದಲ್ಲಿ ನಟಿಸೋಕೆ ಬರ್ತಿದ್ದಾರೆ ಬಿಗ್ ತೆಲುಗು ಹಾಗೂ ತಮಿಳು ಸ್ಟಾರ್ಸ್ ! ಯಾರೆಲ್ಲಾ ಗೊತ್ತಾ?

Darshan Thoogudeepa ಡಿ 56 ಎನ್ನುವ ಟೈಟಲ್ ಮೂಲಕ ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನ ಈ ಸಿನಿಮಾ ಈಗ ಕಾಟೇರ(Kaatera) ಎನ್ನುವ ಟೈಟಲ್ ಮೂಲಕ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಕರ್ನಾಟಕದಲ್ಲಿ(Karnataka) 70ರ ದಶಕದಲ್ಲಿ ನಡೆದಿರುವಂತಹ ರೈತ ದಂಗೆಯ ಕಥೆಯನ್ನು ಇಟ್ಟುಕೊಂಡು ನೈಜ ಘಟನೆ ಆಧಾರಗಳ ಮೇಲೆ ಮೂಡಿ ಬರಲಿರುವ ಚಿತ್ರಕಥೆಯನ್ನು ಕಾಟೇರ ಸಿನಿಮಾ ಹೊಂದಿದೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿದೆ.

ಕಾಟೇರಾ ಸಿನಿಮಾ ಬಿಗ್ ಬಜೆಟ್ ನಲ್ಲಿ ಮೂಡಿಬರುವಂತಹ ಸಿನಿಮಾ ಆಗಿರಲಿದ್ದು ದರ್ಶನ್(Darshan) ಅವರು ಕೂಡ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಕೂಡ ಅದೇ ಕಾಲದ ವಾತಾವರಣದಲ್ಲಿ ಚಿತ್ರೀಕರಣ ನಡೆಯುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಸೆಟ್ ಗಳು ನಿರ್ಮಾಣ ಆಗುವುದು ಖಚಿತವಾಗಿದೆ. ಹೀಗಾಗಿ ಈ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯನ್ನು ಕಾಣುವ ಸಾಧ್ಯತೆ ಹೆಚ್ಚಾಗಿದ್ದು ಪರಭಾಷೆಗಳ ಖ್ಯಾತ ಸ್ಟಾರ್ ಗಳು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

Kaatera Dboss

ಅದರಲ್ಲೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಜೊತೆಗೆ ಕಾಟೇರ(Kaatera) ಸಿನಿಮಾಗೆ ಪ್ರಮುಖ ಹಾಗೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ತೆಲುಗು ಹಾಗೂ ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ನಟರು ಆಗಮಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಿದ್ದರೆ ಅವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಡಿ ಬಾಸ್(Dboss) ಅವರ ಜೊತೆಗೆ ಕಾಟೇರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ಹಲವಾರು ಸುದ್ದಿಗಳ ಪ್ರಕಾರ ತಮಿಳುನಿಂದ ವಿಜಯ್ ಸೇತುಪತಿ(Vijay Sethupathi) ಹಾಗೂ ತೆಲುಗು ಚಿತ್ರರಂಗದಿಂದ ಜಗಪತಿ ಬಾಬು ಬರಲಿದ್ದಾರೆ ಎನ್ನುವ ಸುದ್ದಿ ಇದೆ. ಜಗಪತಿ ಬಾಬು(Jagapathi Babu) ಬರೋದು ಈಗಾಗಲೇ ಅಧಿಕೃತವಾಗಿದೆ. ವಿಜಯ್ ಸೇತುಪತಿ ಅವರು ಬರುವುದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

Leave A Reply

Your email address will not be published.