Kaatera: ಕಾಟೇರ ಸಿನಿಮಾದಲ್ಲಿ ನಟಿಸುತ್ತಿರುವ ಕುಮಾರ್ ಗೋವಿಂದ್ ಅವರ ಸಂಭಾವನೆ ಎಷ್ಟು ಹೇಳಿ ನೋಡೋಣ. ಇಲ್ಲಿದೆ ನೋಡಿ ನಿಜವಾದ ಡೀಟೇಲ್ಸ್.

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಾಯಕ ನಟನಾಗಿ ನಟಿಸುತ್ತಿರುವ 56ನೇ ಸಿನಿಮಾ ಆಗಿರುವಂತಹ ಕಾಟೇರ ಸಿನಿಮಾದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ತರುಣ್ ಸುಧೀರ್(Tharun Sudhir) ಅವರ ನಿರ್ದೇಶನವನ್ನು ಹೊಂದಿದೆ.

ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವಂತಹ ರಾಧನಾ ರಾಮ್(Radbana Ram) ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸಾಕಷ್ಟು ವಿಚಾರಗಳಿಗಾಗಿ ಕಾಟೇರ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಅಭಿಮಾನಿಗಳಲ್ಲಿ ಹೊಂದಿದೆ.

ಈಗ ಈ ನಿರೀಕ್ಷೆಗೆ ಮತ್ತೊಂದು ಸೇರ್ಪಡೆಯಾಗಿದ್ದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋಗಳಲ್ಲಿ ಒಬ್ಬರಾಗಿರುವ ಕುಮಾರ್ ಗೋವಿಂದ್(Kumar Govinda) ರವರು ಕಾಟೇರ ಸಿನಿಮಾದಲ್ಲಿ ಮಹದೇವಣ್ಣ ಎನ್ನುವಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ನಿರ್ದೇಶಕರು ಹಾಗೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಪಾತ್ರಕ್ಕಾಗಿ ಅವರು ಎಷ್ಟು ಸಂಭಾವನೆಯನ್ನು ಪಡೆಯಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೂಲಗಳ ಪ್ರಕಾರ ಕುಮಾರ್ ಗೋವಿಂದ್ ರವರು ಕಾಟೇರ(Kaatera) ಸಿನಿಮಾದಲ್ಲಿ ಈ ಪ್ರಮುಖ ಪಾತ್ರವನ್ನು ಮಾಡುವುದಕ್ಕಾಗಿ 20ರಿಂದ 22 ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆದುಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಡಿ ಬಾಸ್(Dboss) ರವರ ಜೊತೆಗೆ ಕುಮಾರ್ ಗೋವಿಂದ ಅವರ ಕಾಂಬಿನೇಷನ್ ಹೇಗಿರಲಿದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!