Kaatera: ಕಾಟೇರದಲ್ಲಿ ಬಳಸಲಾಗುತ್ತಿರುವ ಕ್ಯಾಮರಾ ಹಾಗೂ ಚಿತ್ರೀಕರಣ ಎಷ್ಟು ದಿನದಲ್ಲಿ ಮುಗಿಯುತ್ತೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Darshan Thoogudeepa ಇತ್ತೀಚಿನ ದಿನಗಳಲ್ಲಿ ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ಕೂಡ ನಿಜಕ್ಕೂ ಪ್ರತಿಯೊಬ್ಬರು ಹಬ್ಬದಂತೆ ಸಿನಿಮಾಗಳನ್ನು ನೋಡಿ ಅದರ ಕುರಿತಂತೆ ತಮಗಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಇನ್ನು ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಸಿನಿಮಾದ ಬಗ್ಗೆ ಕೇಳಬೇಕಾ ಕೇವಲ ಹಬ್ಬದಂತೆ ಮಾತ್ರವಲ್ಲದೆ ಹಬ್ಬವೇ ನಡೆದಂತೆ ಅವರ ಸಿನಿಮಾವನ್ನು ಅವರ ಅಭಿಮಾನಿಗಳೆಲ್ಲ ಸೇರಿ ಆಚರಿಸುತ್ತಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಸಿನಿಮಾ ಆಗಿರುವ ಕಾಟೇರ(Kaatera) ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಕನ್ನಡ ಸಿನಿಮಾ ರಸಿಕರಲ್ಲಿ ಕೂಡ ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ ಈ ಸಿನಿಮಾ ದರ್ಶನ್ ಹಾಗೂ ತರುಣ್ ಸುಧೀರ್(Tharun Sudhir) ಹಿಟ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಆಗಿದೆ. ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣ ಕೂಡ ಸಿನಿಮಾ ಆಗಿದೆ.

ನೈಜ ಘಟನೆಯನ್ನು ಆಧರಿಸಿ ಸಂಪೂರ್ಣ ಸೆಟ್ ಹಾಗೂ ಕ್ವಾಲಿಟಿ ಮೇಕಿಂಗ್ ಗಳ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುವ ಭರವಸೆ ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ಕೂಡ ಇದೆ. ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಈ ಸಿನಿಮಾವನ್ನು 3ಡಿ ಹಾಗೂ ರೋಬೋ ಕ್ಯಾಮರದಲ್ಲಿ ಚಿತ್ರೀಕರಿಸಲಾಗುವುದು ಎಂಬುದಾಗಿ ಕೂಡ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಕಾಟೇರ ಸಿನಿಮಾದ ಚಿತ್ರೀಕರಣ ಕೇವಲ 60 ರಿಂದ 70 ದಿನಗಳಲ್ಲಿ ಮುಗಿದು ಈ ವರ್ಷದ ಕೊನೆಯ ಒಳಗೆ ಬಿಡುಗಡೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರು ಕೂಡ ಲೆಕ್ಕಾಚಾರ ಹಾಕಿದ್ದಾರೆ. ಡಿ ಬಾಸ್(Dboss) ನಟನೆಯ ಕಾಟೇರ(Kaatera) ಸಿನಿಮಾದ ಈ ಮಾಹಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!