ಜೇಮ್ಸ್ ಸಿನಿಮಾವನ್ನು ನಾನೇ ಮುಗಿಸಿ ಕೊಟ್ಟಿದ್ದಿನಿ. ಸ್ಯಾಂಡಲ್ವುಡ್ ಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಎಂಟ್ರಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಅದರಲ್ಲೂ ವಿಶೇಷವಾಗಿ ಅವರ ನಟನೆಯ ಕೊನೆಯ ಕಮರ್ಷಿಯಲ್ ಸಿನಿಮಾ ಯಾವುದು ಕೇಳಿದರೆ ಅದು ಜೇಮ್ಸ್ ಸಿನಿಮಾ ಎನ್ನ ಬಹುದು. ಜೇಮ್ಸ್ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಚಿತ್ರೀಕರಣವಾಗುತ್ತಿದ್ದಂತಹ ಸಿನಿಮಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಅಕಾಲಿಕವಾಗಿ ಕಳೆದುಕೊಂಡಾಗ ಇನ್ನೂ ಕೂಡ ಜೇಮ್ಸ್ ಸಿನಿಮಾದ ಚಿತ್ರೀಕರಣ ಪೂರ್ಣವಾಗಿರಲಿಲ್ಲ.

ಹೀಗಿದ್ದರೂ ಕೂಡ ಸಿನಿಮಾ ವನ್ನು ಅವರ ಜನ್ಮದಿನದಂದು ಅಭಿಮಾನಿಗಳಿಗಾಗಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಇನ್ನು ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬದಲಿಗೆ ಬೇರೆ ಯಾರೋ ಕಾಣಿಸಿಕೊಳ್ಳುತ್ತಿದ್ದರು ಎಂಬುದು ಸಂಪೂರ್ಣವಾಗಿ ತಿಳಿಯುತ್ತಿದ್ದಾದರೂ ಕೂಡ ಯಾರು ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿರಲಿಲ್ಲ. ಕೊನೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರೀಕರಣ ಭಾಗವನ್ನು ಪೂರೈಸಿರುವುದು ಯಾರು ಎಂಬುದಾಗಿ ತಿಳಿದು ಬಂದಿದೆ.

ಹೌದು ಮಿತ್ರರೇ, ನೋಡಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಇರುವ ಜೂನಿಯರ್ ಪುನೀತ್ ರಾಜಕುಮಾರ್ ಆಗಿರುವ ಆನಂದ್ ಆರ್ಯ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಜೇಮ್ಸ್ ಸಿನಿಮಾವನ್ನು ಪೂರ್ಣಗೊಳ್ಳುವಂತೆ ಮಾಡಿದ್ದರು. ಕೇವಲ ಎಷ್ಟು ಮಾತ್ರವಲ್ಲದೆ ಈಗ ತಾವೇ ಹೀರೋ ಆಗಿ ಚಿತ್ರರಂಗಕ್ಕೆ ಕೂಡ ಕಾಲಿಡುತ್ತಿದ್ದಾರೆ.

ಆನಂದ್ ಆರ್ಯ ಅವರು ಮಾರಕಾ’ಸ್ತ್ರ ಎನ್ನುವ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ ಎಂಬುದಾಗಿ ಅಧಿಕೃತ ಸುದ್ದಿಗಳು ಈಗ ಹೊರಬರುತ್ತವೆ. ಜೂನಿಯರ್ ಪುನೀತ್ ರಾಜಕುಮಾರ್ ರವರು ಕೂಡ ಚಿತ್ರರಂಗದಲ್ಲಿ ಯಶಸ್ಸನ್ನು ಸಾಧಿಸಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!