ಟೈಗರ್ ಪ್ರಭಾಕರ್ ಅವರಿಗೆ ಡಿವೋರ್ಸ್ ನೀಡಿದ ನಂತರ ಜಯಮಾಲಾ ಎರಡನೇ ಮದುವೆಯಾಗಿದ್ದು ಯಾರನ್ನು ಗೊತ್ತಾ?

ಸ್ನೇಹಿತರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಟಿಸಿ ಪ್ರೇಕ್ಷಕರ ಮನ ಗೆದ್ದು ಯಶಸ್ವಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಜಯಮಾಲ ಕೂಡ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರ ಸಿನಿಮಾಗಳು ಎಂದರೆ ಅಭಿಮಾನಿಗಳು ಇಷ್ಟಪಡುತ್ತಾರೆ. ಭೂತಯ್ಯನ ಮಗ ಅಯ್ಯು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಜಯಮಾಲಾ ಅವರು ನಂತರ ಒಂದಾದ ಮೇಲೊಂದರಂತೆ ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇನ್ನು ನಟಿ ಜಯಮಾಲಾ ಅವರು ಕನ್ನಡ ಚಿತ್ರರಂಗದ ಆಕ್ಷನ್ ಹೀರೋ ಆಗಿದ್ದ ಟೈಗರ್ ಪ್ರಭಾಕರ್ ಅವರನ್ನು 1985 ರಲ್ಲಿ ಮದುವೆಯಾಗಿದ್ದರು. ನಂತರ ಇವರೊಬ್ಬರಿಗೆ ಸೌಂದರ್ಯ ಎನ್ನುವ ಹೆಣ್ಣು ಮಗಳು ಕೂಡ ಜನಿಸಿದ್ದಳು. ನಂತರ ಇವರಿಬ್ಬರ ನಡುವೆ ಮೂಡಿ ಬಂದ ವೈಮನಸ್ಸಿನ ಕಾರಣದಿಂದಾಗಿ ಇವರಿಬ್ಬರೂ ಕೂಡ 1988ರಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

ಇದಾದ ನಂತರವೂ ಕೂಡ ತಮಗಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಬ್ಬರನ್ನು ಜಯಮಾಲ ಎರಡನೇ ಮದುವೆ ಆಗುತ್ತಾರೆ. ಹೌದು ಮಿತ್ರರೇ ಜಯಮಾಲಾ ಅವರು ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಆಗಿದ್ದ ಎಚ್ ಎಮ್ ರಾಮಚಂದ್ರ ಅವರನ್ನು 1990ರಲ್ಲಿ ಎರಡನೇ ಮದುವೆ ಆಗುವ ಮೂಲಕ ಈಗ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ನಟಿ ಜಯಮಾಲಾ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಖ್ಯಾತನಾಮವಾಗಿರುವ ಹೆಸರು ಎನ್ನುವುದು ಎಲ್ಲರೂ ಕೂಡ ಗಮನಿಸಬೇಕಾಗಿರುವ ವಿಚಾರ. ನಟನೆ ಹಾಗೂ ಮಹಿಳೆಯಾಗಿ ಸಮಾಜದಲ್ಲಿ ನಾಯಕತ್ವದಲ್ಲಿಯೂ ಕೂಡ ಜವಾಬ್ದಾರಿಯನ್ನು ನಿರ್ವಹಿಸಿ ಯಶಸ್ವಿಯಾಗಿರುವವರು. ಜಯಮಾಲಾ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!