ಜೇಮ್ಸ್ ಚಿತ್ರದಲ್ಲಿ ಅಪ್ಪು ಮುಖವನ್ನು ಗ್ರಾಫಿಕ್ಸ್ ಮಾಡಿದ್ದು ಏಕೆ ಗೊತ್ತಾ? ಈ ಒಂದು ದೃಶ್ಯ ನೋಡಿದಾಗ ಮನ ಕಲಕುತ್ತೆ.

ಪುನಿತ್ ಅವರು ಇಲ್ಲದೆ ಅವರ ಹುಟ್ಟುಹಬ್ಬ ಮತ್ತು ಅವರ ಕೊನೆಯ ಚಿತ್ರವನ್ನು ನೋಡುವಂಥ ಪರಿಸ್ಥಿತಿ ಅಭಿಮಾನಿಗಳಿಗೆ ಬಂದಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ – ವಿದೇಶಗಳಲ್ಲಿ ಕೂಡ ಜೇಮ್ಸ್ ಅಬ್ಬರ ಜೋರಾಗಿದೆ. ಥಿಯೇಟರ್ ಗಳಲ್ಲಿ ಅಭಿಮಾನಿಗಳ ಶಿಳ್ಳೆ ಚಪ್ಪಾಳೆಗಳು ಥಿಯೇಟರ್ ಕಿತ್ತು ಹೋಗುವಷ್ಟು ಆರ್ಭಟವಾಗಿದೆ. ಅಪ್ಪು ಇಲ್ಲದೆ ಈ ಚಿತ್ರದ ಪ್ರತಿಯೊಂದು ದೃಶ್ಯ ನೋಡುವಾಗ ನಾವು ತುಂಬಾ ಭಾವುಕರಾಗುತ್ತೇವೆ.

ಮೊದಲನೇ ದಿನವೇ ನೂರು ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿ ಜೇಮ್ಸ್ ಚಿತ್ರ ಕನ್ನಡ ಇತಿಹಾಸದಲ್ಲೇ ದೊಡ್ಡ ದಾಖಲೆ ಬರೆದಿದೆ. ಎರಡನೇ ಮತ್ತು ಮೂರನೇ ದಿನ ಕೂಡ ಪ್ರತಿ ದಿನಕ್ಕೆ ಇಪ್ಪತ್ತು ಕೋಟಿ ರುಪಾಯಿಗಳನ್ನು ಜೇಮ್ಸ್ ಚಿತ್ರ ಬಾಚಿಕೊಂಡಿದೆ. ಕೆಜಿಎಫ್ ಚಿತ್ರದ ನಂತರ ಎರಡು ನೂರು ಕೋಟಿ ಕ್ಲಬ್ ಸೇರುವ ಮೊದಲನೇ ಚಿತ್ರ ಇದಾಗಲಿದೆ. ಶಿವರಾಜ್ ಕುಮಾರ್ ಅವರಿಗೆ ಮೊದಲಿನಿಂದಲೂ ರೆಕಾರ್ಡ್ ಮಾಡುವ ಅಭ್ಯಾಸ ಯುವನಟ ಕಾಡನ್ನು ಮುರಿಯುವುದು ಮುಂದಿನ ಪೀಳಿಗೆ ನಟರಿಗೆ ಸುಲಭದ ವಿಷಯವಲ್ಲ.

ಜೇಮ್ಸ್ ಚಿತ್ರವು ಇಷ್ಟೊಂದು ದೊಡ್ಡ ಯಶಸ್ಸು ಗಣ್ಯರು ಮೇಲೆ ಚಿತ್ರದ ಕಥೆ ಯಿಂದಾಗಲೀ ನಿರ್ದೇಶನದಿಂದ ಅಲ್ಲ ಅದು ಪುನೀತ್ ರಾಜ್ ಕುಮಾರ್ ಅವರಿಂದ ಮಾತ್ರ. ಚಿತ್ರ ಹೇಗೆ ರಲ್ಲಿ ಪುನೀತ್ ಅವರನ್ನೋಡಬೇಕು ಎಂದು ಪ್ರತಿಯೊಬ್ಬ ಕನ್ನಡಿಗನೂ ಥಿಯೇಟರ್ ಗೆ ಹೋಗುತ್ತಿದ್ದಾನೆ. ಇದ್ದವರನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳುವುದೇ ಪ್ರತಿಯೊಬ್ಬರ ಆಸೆಯಾಗಿದೆ. ಪುನೀತ್ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರವನ್ನು ವಹಿಸಿದ್ದಾರೆ.

ಜೇಮ್ಸ್ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಪುನೀತ್ ಅವರು ಮುಗಿಸಿದ್ದರು ಎಂದು ನಾವೆಲ್ಲ ಅಂದುಕೊಂಡಿದ್ದೆವು.. ಆದರೆ ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಪುನೀತ್ ಅವರ ಮುಖವನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮಾಡಲಾಗಿದೆ. ಇದು ನಿಜ ಗೆಳೆಯರೇ, ಪುನೀತ್ ಅವರು ಶೇಕಡಾ ತೊಂಬತ್ತು ರಷ್ಟು ಚಿತ್ರೀಕರಣವನ್ನು ಮುಗಿಸಿದ್ದರು. ಆದರೆ ಕೆಲವೇ ಕೆಲವು ದೃಶ್ಯಗಳನ್ನು ಅಪ್ಪು ಅವರು ಚಿತ್ರೀಕರಿಸುವುದಕ್ಕಿಂತಲೂ ಮುಂಚೆ ಕೊನೆಯುಸಿರು ಬಿಟ್ಟಿದ್ದರು.

ಜೇಮ್ಸ್ ಚಿತ್ರದ ನಿಂಜಾ ಫೈಟಿಂಗ್ ದೃಶ್ಯ ಮತ್ತು ಅವಿನಾಶ್ ಅವರ ಜೊತೆ ಪುನೀತ್ ಅವರ ಸಂಭಾಷಣೆ ದೃಶ್ಯವನ್ನೂ ಕೂಡ ಎಡಿಟ್ ಮಾಡಿ ಪುನೀತ್ ಅವರ ಮುಖವನ್ನು ಗ್ರಾಫಿಕ್ಸ್ ಮಾಡಲಾಗಿದೆ. ಅಪ್ಪು ಅವರ ಕೊನೆಯ ಚಿತ್ರ ನೋಡುವಾಗ ಈ ರೀತಿಯಾದ ಗ್ರಾಫಿಕ್ಸ್ ಗಳನ್ನು ನೋಡುವಾಗ ನಿಜಕ್ಕೂ ಮನಕಲಕುತ್ತವೆ. ಪುನೀತ್ ಅವರ ಮುಖವನ್ನು ಆ ರೀತಿಯಾಗಿ ನೋಡಲು ನಿಜಕ್ಕೂ ಹೃದಯ ಸ್ಪರ್ಶಿಸುತ್ತೆ. ಅದು ಏನೇ ಇರಲಿ ನಿರ್ದೇಶಕರು ಮತ್ತು ನಿರ್ಮಾಪಕರು ಮ್ಯಾನೇಜ್ ಮಾಡಿ ಕಂಪ್ಲೀಟ್ ಚಿತ್ರವನ್ನು ಬಿಡುಗಡೆ ಮಾಡಿ ನಮಗೆಲ್ಲಾ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಅರ್ಪಿಸಿರುವುದಕ್ಕೆ ಕೋಟಿ ಕೋಟಿ ನಮನ.

Leave a Comment

error: Content is protected !!