Kaatera: ದರ್ಶನ್ ಅವರ ಜೊತೆಗೆ ಕಾಟೇರ ಸಿನಿಮಾದಲ್ಲಿ ನಟಿಸಲು ಜಗಪತಿ ಬಾಬು ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Darshan Thoogudeepa ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕಾಟೇರ(Kaatera) ಸಿನಿಮಾ ಈಗಾಗಲೇ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗುತ್ತದೆ. ಕನ್ನಡ ಚಿತ್ರರಂಗದ ಸಿಂಗಲ್ ಸ್ಕ್ರೀನ್ ಕಿಂಗ್ ಎನ್ನುವುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರನ್ನು ಕರೆಯುವುದರಿಂದ ಈ ಸಿನಿಮಾ ಮುಂದಿನ ದಿನಗಳಲ್ಲಿ ಬಿಡುಗಡೆಯಾದ ನಂತರ ದೊಡ್ಡಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಅಭಿಮಾನಿಗಳು ಹಾಗೂ ಸಿನಿಮಾ ಪಂಡಿತರು ಈಗಾಗಲೇ ಲೆಕ್ಕಾಚಾರ ಹಾಕಿದ್ದಾರೆ.

ಅದರಲ್ಲೂ ವಿಶೇಷವಾಗಿ ನೈಜ ಘಟನೆ ಆಧಾರಿತ ಈ ಸಿನಿಮಾದಲ್ಲಿ ದೊಡ್ಡ ಮಟ್ಟದ ತಾರಾ ಬಳಗವನ್ನು ನಿರೀಕ್ಷಿಸಬಹುದಾದ ಸಾಧ್ಯತೆ ಹೆಚ್ಚಿದೆ. ನಾಯಕಿಯಾಗಿ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎದುರು ಮಾಲಾಶ್ರೀ(Malashree) ಅವರ ಮಗಳಾಗಿರುವ ರಾಧನಾ ರಾಮ್(Radhana Ram) ಆಯ್ಕೆಯಾಗಿದ್ದು ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣ ಸಿನಿಮಾಗೆ ಇರುವ ಕಾರಣ ಸಿನಿಮಾ ಶ್ರೀಮಂತವಾಗಿ ಮೂಡಿ ಬರಲಿರುವುದಂತೂ ಖಚಿತ.

Jagapathi Babu In kaatera

ಇನ್ನು ಈ ಸಿನಿಮಾದಲ್ಲಿ ಪರಭಾಷೆಯ ತಾರೆಗಳು ಕೂಡ ನಟಿಸುತ್ತಿರುವುದು ಅದರಲ್ಲಿ ಪ್ರಮುಖವಾಗಿ ತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಹಾಗೂ ಪೋಷಕ ನಟ ಆಗಿರುವ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ರಾಬರ್ಟ್ ಸಿನಿಮಾದ ನಂತರ ಡಿ ಬಾಸ್(Dboss) ಅವರ ಜೊತೆಗೆ ಕಾಟೇರ ಸಿನಿಮಾದಲ್ಲಿ ಮತ್ತೊಮ್ಮೆ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು ಅವರು ಪಡೆದುಕೊಳ್ಳುತ್ತಿರುವ ಸಂಭಾವನೆಯ ಕುರಿತಂತೆ ತಿಳಿಯೋಣ ಬನ್ನಿ.

ಹೌದು ಗೆಳೆಯರೇ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ಖಳನಾಯಕ ಹಾಗೂ ಪೋಷಕ ನಟರಲ್ಲಿ ಒಬ್ಬರಾಗಿರುವ ಜಗಪತಿ ಬಾಬು(Jagapathi Babu) ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕಾಟೇರ ಸಿನಿಮಾದಲ್ಲಿ ನಟಿಸಲು 90 ಲಕ್ಷ ರೂಪಾಯಿಯಿಂದ ಹಿಡಿದು ಒಂದು ಕೋಟಿ ರೂಪಾಯಿವರೆಗೆ ಸಂಭವನ ಪಡೆಯುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.