ಬಿ ಟೌನ್ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿ ಬ್ಯುಸಿಯಾಗಿದೆ ಇನ್ನು ಈ ಚರ್ಚೆಯ ವಿಷಯ ರತಿಕ್ ರೋಷನ್. ರಾಕೇಶ್ ರೋಷನ್ ಅವರ ಪುತ್ರ ಹೃತಿಕ್ ರೋಷನ್ ಬಾಲಿವುಡ್ ನ ಗಾಡ್ ಆಫ್ ಗ್ರೀಕ್ ಎನಿಸಿಕೊಂಡವರು. ಈ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ge ಸದ್ಯ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನಲಾಗುತ್ತಿದೆ. ಸುಸೇನ್ ಖಾನ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು ಹೃತಿಕ್ ರೋಷನ್. ನಂತರ ವಿ’ಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾರೆ. ಆದರೆ ಇದೀಗ ಮತ್ತೆ ವಿವಾಹದ ಸುದ್ದಿಯಲ್ಲಿದ್ದಾರೆ ಹೃತಿಕ್.

ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ಅವರು 2000ದಲ್ಲಿ ಮದುವೆಯಾಗಿ 2014ರಲ್ಲಿ ವಿ’ಚ್ಛೇದನವನ್ನು ಪಡೆದುಕೊಂಡಿದ್ದಾರೆ. 14 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಇದೀಗ ಹೃತಿಕ್ ರೋಷನ್ ಎರಡನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಬಿ ಟೌನ್ ತುಂಬಿದೆ. ಹೌದು ಹೃತಿಕ್ ರೋಷನ್ ಹಾಗೂ ಸಭಾ ಆಜಾದ್ ಇಬ್ಬರು ಜೊತೆಯಲ್ಲಿ ಓಡಾಡುತ್ತಿರುವುದು ಈ ಗಾಸಿಪ್ ಕಾರಣ. ಇನ್ನು ಈ ವಿಷಯಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದ್ದು ಬೇಜಾನ್ ದಾರವಾಲ ಅವರ ಭವಿಷ್ಯ. ಬಾಲಿವುಡ್ ನಲ್ಲಿ ಬೇಜನ್ ದಾರುವಾಲಾ ಜ್ಯೋತಿಷ್ಯಕ್ಕೆ ಸಾಕಷ್ಟು ವ್ಯಾಲ್ಯೂ ಕೊಡಲಾಗುತ್ತೆ.

ಯಾಕಂದ್ರೆ ಇದುವರೆಗೆ ಅವರು ಹೇಳಿದ ವಿಷಯಗಳು ಸುಮಾರು ನಿಜವೂ ಆಗಿವೆ. ಎರಡು ವರ್ಷಗಳ ಹಿಂದೆ ಹೃತಿಕ್ ರೋಷನ್ ಅವರಿಗೆ ಮತ್ತೊಂದು ಮದುವೆಯ ಯೋಗವಿದೆ ಅಂತ ಬೇಜನ್ ದಾರುವಾಲಾ ಪತ್ರಕರ್ತರ ಒಬ್ಬರ ಬಳಿ ಹೇಳಿದ್ದರು. ಈ ಸುದ್ದಿ ಎರಡು ವರ್ಷದ ಹಿಂದೆಯೇ ವೈರಲ್ ಆಗಿತ್ತು. ಇದೀಗ ಹೃತಿಕ್ ರೋಷನ್ ಹಾಗೂ ಸಭಾ ಆಜಾದ್ ರೆಸ್ಟೋರೆಂಟ್, ಪಾರ್ಟಿ, ವೆಕೇಶನ್ ಅಂತ ಸುತ್ತಾಡ್ತಾ ಇರುವುದು ಹೃತಿಕ್ ಅವರ ಜಾತಕದಲ್ಲಿ ಎರಡನೇ ಮದುವೆಯ ಯೋಗವಿದೆ ಅನ್ನೋದನ್ನ ಸಾಬೀತುಪಡಿದಿದ ಹಾಗೆಯೇ ಆಗಿದೆ.

ಈ ಹಿಂದೆ ನಟಿ ಸದಾ ಆಜಾದ್ ಹೃತಿಕ್ ರೋಷನ್ ಅವರ ಜೊತೆಗಿನ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರು ಆದರೆ ಈ ಸಮಯದಲ್ಲಿ ಹೃತಿಕ್ ಅವರ ಮುಖ ಕಾಣಿಸುತ್ತಿರಲಿಲ್ಲ. ಇದೀಗ ಹೃತಿಕ್ ಅವರು ಸಭಾ ಆಜಾದ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಕರಣ್ ಜೋಹರ್ ಅವರ 50ನೇ ಬರ್ತಡೇ ಪಾರ್ಟಿಯಲ್ಲೂ ಹೃತಿಕ್ ರೋಷನ್ ಹಾಗೂ ಸಭಾ ಆಜಾದ್ ಕೇಂದ್ರ ಬಿಂದುವಾಗಿದ್ರು. ಜೊತೆಗೆ ಕಾಫಿ ವಿತ್ ಕರಣ್ ಶೋನಲ್ಲಿಯೂ ಈ ಜೋಡಿ ಭಾಗವಹಿಸಿದ್ದರು. ಈಗಾಗಲೇ ಸಭಾ ಆಜಾದ್ ಹಾಗೂ ಹೃತಿಕ ರೋಷನ್ ಅವರ ಕುಟುಂಬಸ್ಥರು ತುಂಬಾ ಕ್ಲೋಸ್ ಆಗಿದ್ದಾರೆ. ಹಾಗಾಗಿ ಸದ್ಯದಲ್ಲೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಹೃತಿಕ್ ರೋಷನ್ ಅವರಿಗೆ ಎರಡನೆಯ ಮದುವೆಯ ಯೋಗವಿದೆ ಅಂತ ಟೈಮ್ಸ್ ಗ್ರೂಪ್ ನ ಮುಂಬೈ ಮಿರರ್ ನಲ್ಲಿ ಬೇಜನ್ ದಾರುವಾಲಾ ಹೇಳಿದ ಭವಿಷ್ಯದ ಬಗ್ಗೆ ಲೇಖನ ಒಂದು ಪ್ರಕಟವಾಗಿತ್ತು. ಆಗ ಅದು ಕೇವಲ ಕಾಸಿ ಎಂದಷ್ಟೇ ಕರೆಸಿಕೊಂಡಿತ್ತು. ಆದರೆ ಇದೀಗ ಹೃತಿಕ್ ಹಾಗೂ ಸಭಾ ಅವರನ್ನ ಜೊತೆಗೆ ನೋಡಿರುವವರು ಮತ್ತೆ ದಾರವಾಲ ಅವರ ಭವಿಷ್ಯವನ್ನು ಮೆಲಕು ಹಾಕಿದ್ದಾರೆ.

ಹೃತಿಕ್ ರೋಷನ್ ಅವರು ಸತ್ಯ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಾರೆ ಹಾಗೆ ಸಭಾ ಆಜಾದ್ ಕೂಡ ಜಾಹೀರಾತುಗಳಲ್ಲಿ ಹಾಗೂ ಇತರ ಸಿನಿಮಾಗಳಲ್ಲಿ ನಟಿಸುವತ್ತ ಗಮನಹರಿಸಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದರು ವೈಯಕ್ತಿಕ ಜೀವನದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಈ ಜೋಡಿ ಮದುವೆಯಾಗುವುದು ಖಚಿತ ಎನ್ನುತ್ತಿದೆ ಬಾಲಿವುಡ್ ನ ವರದಿ.

By admin

Leave a Reply

Your email address will not be published.